Casting Couch: ಗೀತಕೃಷ್ಣಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ಕೃತಿಕಾ, ನನ್ನ ಹೇಳಿಕೆ ತಿರುಚಲಾಗಿದೆ ಎಂದ ನಿರ್ದೇಶಕ

ತೆಲುಗು ಸಿನಿಮಾ ನಿರ್ದೇಶಕ ಗೀತಕೃಷ್ಣ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಕನ್ನಡ ಚಿತ್ರಂಗದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರು. ಇದು  ವೈರಲ್ ಆಗುತ್ತಿದ್ದಂತೆ ಎಲ್ಲಡೇ ಆಕ್ರೋಶ ಕೇಳಿಬಂದಿದೆ. ಅನೇಕ ಚಿತ್ರಲಾವಿದರುಗಳು ಇದೀಗ ಗೀತಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಿರ್ದೇಶಕ ಗೀತಕೃಷ್ಣ

ನಿರ್ದೇಶಕ ಗೀತಕೃಷ್ಣ

  • Share this:
ತೆಲುಗು ಸಿನಿಮಾ ನಿರ್ದೇಶಕ ಗೀತಕೃಷ್ಣ (Director Geeth Krishna) ಕನ್ನಡ ಚಿತ್ರರಂಗದ (Kannada Film Industry) ನಟ (Hero), ನಟಿಯರ (Heroin) ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದರೆ. ಕಾಸ್ಟಿಂಗ್ ಕೌಚ್ (casting couch) ವಿಚಾರದಲ್ಲಿ ತಮಿಳು ಚಿತ್ರರಂಗದವರು (Tamil Film Industry) ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಗೀತಕೃಷ್ಣ ಆರೋಪಿಸಿದ್ದಾರೆ. ಇತ್ತೀಚಿಗೆ ತೆಲುಗು ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಅವರು, ಕನ್ನಡ ಸಿನಿಮಾ ರಂಗದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಅವಕಾಶ ಬೇಕು ಅಂತ ಮಂಚ ಏರುವುದು ಅಲ್ಲಿ ಕಾಮನ್ ಆಗಿದೆ ಎಂದು ಅಸಭ್ಯವಾಗಿ ಮಾತನಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಎಲ್ಲಡೇ ಆಕ್ರೋಶ ಕೇಳಿಬಂದಿದೆ. ಅನೇಕ ಚಿತ್ರಲಾವಿದರುಗಳು ಇದೀಗ ಗೀತಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಅವರು ಮಾತನಾಡಲಿ ನಾವು ಬೆಳಿತಾ ಹೊಗೋಣ:

ಗೀತಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕನ್ನಡದ ನಟ ರಾಘವೇಂದ್ರ ರಾಜ್​ಕುಮಾರ್, ‘ನಮ್ಮ ಭಾಷೆ ಈಗ ವಿಶ್ವದ ಎಲ್ಲಾ ಕಡೆ ಬೆಳಿಯುತ್ತಿದೆ. ಅಲ್ಲದೇ ಪ್ರಪಂಚದಾತ್ಯಂತ ಕನ್ನಡ ಭಾಷೆಯ ತಾಕತ್ತು ಏನು ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಕನ್ನಡ ಚಿತ್ರಗಳ ಬಗ್ಗೆ ಯಾರೋ ಮಾತನಾಡಿದರೆ ಅವುಗಳ ಬಗ್ಗೆ ನಾವು ಕಿವಿ ಕೊಡೋದು ಬೇಡ. ಬದಲಿಗೆ ಅವರು ಮಾತನಾಡಲಿ ನಾವು ಬೆಳೆಯುತ್ತಾ ಹೊಗೊಣ. ಈಗ ನಾವ್ ಬೆಳಿತಾ ಇದ್ದವಿ ಅದಕ್ಕೆ ಮಾತನಾಡುತ್ತಿದ್ದಾರೆ. ನಾನು ಇವತ್ತು ಕನ್ನಡ ಭಾಷೆಯಿಂದ ದೊಡ್ಡಮಟ್ಟದಲ್ಲಿ ಬೆಳದಿದ್ದೇನೆ‘ ಎಂದು ಹೇಳಿದ್ದಾರೆ.

ಗೀತಕೃಷ್ಣಗೆ  ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ:

ಗೀತಕೃಷ್ಣಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ನ್ಯೂಸ್ 18  ಕನ್ನಡ ಜೊತೆ ಮಾತನಾಡಿ ಗೀತಕೃಷ್ಣ ಗೆ ಟಾಂಗ್ ಕೊಟ್ಟಿದ್ದಾರೆ. ಅವರ ಹೇಳಿಕೆ ಕುರಿತು ಮಾತನಾಡಿದ ಕೃತಿಕಾ, ‘ಗೀತಕೃಷ್ಣ ಅವ್ರೆ ನೀವು ತಿನ್ನೋ ಅನ್ನ ಕೂಡ ಒಂದು ಇಂಡಸ್ಟ್ರಿಯದೆ. ಕಲೆ ಎನ್ನುವುದು ಕನ್ನಡ, ತೆಲುಗು, ತಮಿಳು ಸೇರಿ ಯಾವುದೇ ಭಾಷೆದೆ ಇರಲಿ ಅದು ಕಲೆ ಕಲೆನೆ ಆಗಿರುತ್ತದೆ. ಕಲೆಗೆ, ಕಲಾವಿದರಿಗೆ, ಕಲಾವಿದರಿಗಾಗಿ ದುಡಿಯುವವರಿಗೆ ಬೆಲೆ ಕೊಡಬೇಕು. ಕನ್ನಡ ಇಂಡಸ್ಟ್ರಿ ಕೀಳು, ಕಚಡಾ ಅಂತ ಯಾರು ಮಾತನಾಡಬಾರದು. ಅದು ನೀವಾಗಿರಲಿ ಅಥವಾ ನಿಮಗಿಂಗ ದೊಡ್ಡವರಾಗಲಿ ನಮ್ಮ ಚಿತ್ರರಂಗದ ಬಗ್ಗೆ ಮಾತನಾಡಬಾರದು.

ಇದನ್ನೂ ಓದಿ: Veera Kambala: ಅಕ್ಟೋಬರ್ ವೇಳೆಗೆ ‘ವೀರ ಕಂಬಳ‘ ಬಿಡುಗಡೆ, ಚಿತ್ರದ ಕುರಿತು ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ಕನ್ನಡದ ಹೆಮ್ಮೆ ಡಾ.ರಾಜ್‌ಕುಮಾರ್ ಅವರು ಯಾವತ್ತು ಯಾರ ಕುರಿತೂ ಸಹ ಮಾತನಾಡಿಲ್ಲ .ಅಣ್ಣಾವ್ರ ಬಗ್ಗೆ ಸಂಪೂರ್ಣ ಭಾರತಕ್ಕೇ ಗೊತ್ತು. ಈಗಿರುವಾಗ ಚಿಕ್ಕ ಪುಟ್ಟವರಾದ ನಾವು  ಅದರ ಬಗ್ಗೆ ಮಾತನಾಡಬಾರದು ನಮಗೆ ಯೋಗ್ಯತೆ ಇಲ್ಲ. ಹೀಗಾಗಿ ಮೊದಲು ಯೋಗ್ಯತೆ ಬೆಳಸಿಕೊಂಡು ಇನ್ನೋಬ್ಬರ ಬಗ್ಗೆ ಮಾತನಾಡಬೇಕು. ಜೊತೆಗೆ ಪ್ರತಿಯೊಂದು ಇಂಡಸ್ಟ್ರಿಗೂ ಅದರದೆ ಆದ ಬೆಲೆ ಇದೆ ಮೊದಲು ಬೆಲೆ ಕೊಡೊದನ್ನು ಕಲಿಯಿರಿ. ಅವರಿವರ ಬಗ್ಗೆ ಮಾತನಾಡಿ ಚಿಕ್ಕವರಾಗಬೇಡಿ‘ ಎಂದು ಹೇಳಿದ್ದಾರೆ.

ನನ್ನ ಹೇಳಿಕೆಯನ್ನ ತಿರುಚಲಾಗಿದೆ:

ಇನ್ನು, ಗೀತಕೃಷ್ಣ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಕುರಿತು ಮಾತನಾಡಿದ ಅವರು, ‘ನಾನು ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿಲ್ಲ. ಎಲ್ಲಾ ಭಾಷೆಗಳಲ್ಲೂ ಕಾಸ್ಟಿಕೌಚ್ ಇರುತ್ತೆ ಅಂತ ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನ ತಿರುಚಲಾಗಿದೆ. 2010ರಲ್ಲಿ ಕಾಫಿಶಾಪ್ ಅಂತ ಸಿನಿಮಾ ಮಾಡಿದ್ದೆ ಅದಕ್ಕೆ ಸಮಸ್ಯೆ ಆಗಿತ್ತು. ಕೋರ್ಟ್ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಸಿನಿಮಾ ರಿಲೀಸ್ ಮಾಡಿದೆ. ನಾನು ಕನ್ನಡ ಚಿತ್ರರಂಗದ ಬಗ್ಗೆ ಯಾವುದೇ ಮಾತನಾಡಿಲ್ಲ. ಎಲ್ಲಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಅಂತ ಹೇಳಿದ್ದೇನೆ ಅಷ್ಟೇ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Casting Couch: ಕನ್ನಡದ ನಟಿಯರು ಅವಕಾಶಕ್ಕಾಗಿ ಹೀಗೆಲ್ಲ ಮಾಡ್ತಾರಂತೆ! ಚಂದನವನದ ಬಗ್ಗೆ ತೆಲುಗು ನಿರ್ದೇಶಕನಿಂದ ಕೊಳಕು ಹೇಳಿಕೆ

ಯಾರು ಈ ಗೀತಕೃಷ್ಣ?:

ಗೀತ ಕೃಷ್ಣ ತೆಲುಗಿನ ಸಿನಿಮಾ ನಿರ್ದೇಶಕ. 'ಸಂಕೀರ್ತನ', 'ಕೋಕಿಲ', 'ಟೈಮ್', 'ಕಾಫಿ ಬಾರ್' ಮುಂತಾದ ಕೆಲ ಸಿನಿಮಾ ಸೇರಿದಂತೆ 8 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ನಾಗಾರ್ಜುನ, ರಮ್ಯಾಕೃಷ್ಣ ಅಭಿನಯಿಸಿದ್ದ ಸಂಕೀರ್ತನ ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಇದಕ್ಕೆ ನಿರ್ದೇಶಕರ ಅತ್ಯುತ್ತಮ ಮೊದಲ ಚಲನಚಿತ್ರಕ್ಕಾಗಿ ಕೊಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದರು.
Published by:shrikrishna bhat
First published: