• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Casting Couch: ರಿಯಾಕ್ಟ್ ಮಾಡಿದಷ್ಟು ಅವರಿಗೆ ಪ್ರಚಾರ ಜಾಸ್ತಿ ಆಗುತ್ತೆ, ಗೀತಕೃಷ್ಣಗೆ ತಿರುಗೇಟು ನೀಡಿದ ಶಿವಣ್ಣ

Casting Couch: ರಿಯಾಕ್ಟ್ ಮಾಡಿದಷ್ಟು ಅವರಿಗೆ ಪ್ರಚಾರ ಜಾಸ್ತಿ ಆಗುತ್ತೆ, ಗೀತಕೃಷ್ಣಗೆ ತಿರುಗೇಟು ನೀಡಿದ ಶಿವಣ್ಣ

ನಟ ಶಿವರಾಜ್​ಕುಮಾರ್

ನಟ ಶಿವರಾಜ್​ಕುಮಾರ್

ಯಾರೋ ಏನೋ ಹೇಳಿದರೂ ಅಂತಾ ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಪ್ರೂ ಆಗಿದೆ. ಕೆಜಿಎಪ್ 2 ಚಿತ್ರದ ಮೂಲಕ ಸ್ಯಾಂಡಲ್​ವುಡ್ ಬಗ್ಗೆ ಏನೆಂದು ಎಲ್ಲರಿಗೂ ತಿಳಿದಿದೆ ಎಂದು ಗೀತಕೃಷ್ಣಗೆ ತಿರುಗೇಟು ನೀಡಿದ್ದಾರೆ ನಟ ಶಿವರಾಜ್​ಕುಮಾರ್

  • Share this:

ತೆಲುಗು ಸಿನಿಮಾ ನಿರ್ದೇಶಕ ಗೀತಕೃಷ್ಣ (Director Geeth Krishna) ಕನ್ನಡ ಚಿತ್ರರಂಗದ (Kannada Film Industry) ನಟ (Hero), ನಟಿಯರ (Heroin) ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದರೆ. ಕಾಸ್ಟಿಂಗ್ ಕೌಚ್ (casting couch) ವಿಚಾರದಲ್ಲಿ ತಮಿಳು ಚಿತ್ರರಂಗದವರು (Tamil Film Industry) ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಅಲ್ಲದೇ ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಗೀತಕೃಷ್ಣ ಆರೋಪಿಸಿದ್ದಾರೆ. ಇತ್ತೀಚಿಗೆ ತೆಲುಗು ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಅವರು, ಕನ್ನಡ ಸಿನಿಮಾ ರಂಗದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ ಎಂದು ಅಸಭ್ಯವಾಗಿ ಮಾತನಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಎಲ್ಲಡೇ ಆಕ್ರೋಶ ಕೇಳಿಬಂದಿದೆ.


ಅನೇಕ ಚಿತ್ರಲಾವಿದರುಗಳು ಇದೀಗ ಗೀತಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ ದಿನವಷ್ಟೇ ರಾಘವೇಂದ್ರ ರಾಜ್​ಕುಮಾರ್ ಅವರು ಇದರ ಕುರಿತು ಮಾತನಾಡಿದ್ದರು. ಇದಿಗ ಮುಂದುವರೆದು ನಟ ಡಾ. ಶಿವರಾಜ್​​ಕುಮಾರ್ ಅವರು ಸಹ ಈ ಪ್ರಕರಣದ ಕುರಿತು ಮಾತನಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಸಂಭಂದಿಕರ ಹೊಟೇಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ನಟ ಶಿವರಾಜ್​ಕುಮಾರ್ ಆಗಮಿಸಿದ್ದರು. ಈ ವೇಳೆ ಅವರು ನಿರ್ದೇಶಕ ಗೀತಕೃಷ್ಣ ಅವರ ಹೇಳಿಕೆ ಕುರಿತು ಮಾತನಾಡಿದ್ದಾರೆ.


ನಿರ್ದೇಶಕ ಗೀತಕೃಷ್ಣಗೆ ತಿರುಗೇಟು ನೀಡಿದ ಶಿವಣ್ಣ:


ಇನ್ನು, ಕಾರ್ಯಕ್ರಮದ ನಂತರ ತೆಲಗು ನಿರ್ದೇಶಕ ಗೀತಕೃಷ್ಣ ಸ್ಯಾಂಡಲ್ ವುಡ್ ಇಂಡಸ್ಟ್ರೀ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ನಟ ಶಿವರಾಜ್​ಕುಮಾರ್, ‘ಯಾರೋ ಏನೋ ಹೇಳಿದರೂ ಅಂತಾ ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಪ್ರೂ ಆಗಿದೆ. ಕೆಜಿಎಪ್ 2 ಚಿತ್ರದ ಮೂಲಕ ಸ್ಯಾಂಡಲ್​ವುಡ್ ಬಗ್ಗೆ ಏನೆಂದು ಎಲ್ಲರಿಗೂ ತಿಳಿದಿದೆ. ಅಲ್ಲದೇ ಕೆಲ ವಿಚಾರದಲ್ಲಿ ಯಾರೋ ಏನನ್ನೋ ಹೇಳಿದರು ಎಂದು ತಿಳಿದು ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು.


ಇದನ್ನೂ ಓದಿ: Casting Couch: ಗೀತಕೃಷ್ಣಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ಕೃತಿಕಾ, ನನ್ನ ಹೇಳಿಕೆ ತಿರುಚಲಾಗಿದೆ ಎಂದ ನಿರ್ದೇಶಕ


ಜೊತೆಗೆ ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತದೆ. ಇಂತವರ ಬಗ್ಗೆ ರಿಯಾಕ್ಟ್ ಮಾಡಿದಷ್ಟು ಅವರಿಗೆ ಪ್ರಚಾರ ಜಾಸ್ತಿ ಆಗುತ್ತದೆ. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲಾ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳಿಸಿದ್ದಾರೆ. ಇಂತವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು‘ ಎಂದು ಹೇಳುವ ಮೂಲಕ ಗೀತಕೃಷ್ಣ ಅವರಿಗೆ ಶಿವಣ್ಣ ತಿರುಗೇಟು ನೀಡಿದ್ದಾರೆ.


ಅವರು ಮಾತನಾಡಲಿ ನಾವು ಬೆಳಿತಾ ಹೊಗೋಣ:

 ಗೀತಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕನ್ನಡದ ನಟ ರಾಘವೇಂದ್ರ ರಾಜ್​ಕುಮಾರ್, ‘ನಮ್ಮ ಭಾಷೆ ಈಗ ವಿಶ್ವದ ಎಲ್ಲಾ ಕಡೆ ಬೆಳಿಯುತ್ತಿದೆ. ಅಲ್ಲದೇ ಪ್ರಪಂಚದಾತ್ಯಂತ ಕನ್ನಡ ಭಾಷೆಯ ತಾಕತ್ತು ಏನು ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಕನ್ನಡ ಚಿತ್ರಗಳ ಬಗ್ಗೆ ಯಾರೋ ಮಾತನಾಡಿದರೆ ಅವುಗಳ ಬಗ್ಗೆ ನಾವು ಕಿವಿ ಕೊಡೋದು ಬೇಡ. ಬದಲಿಗೆ ಅವರು ಮಾತನಾಡಲಿ ನಾವು ಬೆಳೆಯುತ್ತಾ ಹೊಗೊಣ. ಈಗ ನಾವ್ ಬೆಳಿತಾ ಇದ್ದವಿ ಅದಕ್ಕೆ ಮಾತನಾಡುತ್ತಿದ್ದಾರೆ. ನಾನು ಇವತ್ತು ಕನ್ನಡ ಭಾಷೆಯಿಂದ ದೊಡ್ಡಮಟ್ಟದಲ್ಲಿ ಬೆಳದಿದ್ದೇನೆ‘ ಎಂದು ಹೇಳಿದ್ದಾರೆ.


ಯಾರು ಈ ಗೀತಕೃಷ್ಣ?:


ಗೀತ ಕೃಷ್ಣ ತೆಲುಗಿನ ಸಿನಿಮಾ ನಿರ್ದೇಶಕ. 'ಸಂಕೀರ್ತನ', 'ಕೋಕಿಲ', 'ಟೈಮ್', 'ಕಾಫಿ ಬಾರ್' ಮುಂತಾದ ಕೆಲ ಸಿನಿಮಾ ಸೇರಿದಂತೆ 8 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ನಾಗಾರ್ಜುನ, ರಮ್ಯಾಕೃಷ್ಣ ಅಭಿನಯಿಸಿದ್ದ ಸಂಕೀರ್ತನ ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಇದಕ್ಕೆ ನಿರ್ದೇಶಕರ ಅತ್ಯುತ್ತಮ ಮೊದಲ ಚಲನಚಿತ್ರಕ್ಕಾಗಿ ಕೊಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದರು.


Published by:shrikrishna bhat
First published: