Anushka Shetty: ಮಾತುಬಾರದ ಸ್ಥಿತಿಯಲ್ಲಿ ಅನುಷ್ಕಾ ಶೆಟ್ಟಿ: ದೇಹದ ತೂಕ ಇಳಿಸಿಕೊಳ್ಳಲು ಹೋಗಿ ಮಾತು ಕಳೆದುಕೊಂಡ ಕರಾವಳಿ ಚೆಲುವೆ..!

Anushka Shetty: ಅನುಷ್ಕಾ ಶೆಟ್ಟಿ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಪಡೆದು ನಂತರ ಭಾರತಕ್ಕೆ ಮರಳಿದ್ದರು. ಅವರು ಭಾರತಕ್ಕೆ ಮರಳುವ ಮುನ್ನವೇ ಅವರಿಗೆ ಹಾಲಿವುಡ್​ ಅಂದರೆ ಇಂಗ್ಲಿಷ್​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು. ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಅನುಷ್ಕಾ ಮಾತನಾಡದ ಸ್ಥಿತಿ ತಲುಪಿದ್ದಾರಂತೆ.

ನಟಿ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ

  • Share this:
ಅನುಷ್ಕಾ ಶೆಟ್ಟಿ ತಮ್ಮ ಸರಳತೆಗೆ ಹೆಸರಾದ ನಟಿ. ಕರಾವಳಿಯ ಈ ಬೆಡಗಿ ಕನ್ನಡತಿಯಾದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಟಾಲಿವುಡ್​ನ ಸಿನಿಮಾಗಳು. ಪ್ರಯೋಗಾತ್ಮಕ ಸಿನಿಮಾ 'ಸೈಜ್​ ಝೀರೊ'ದಲ್ಲಿ ಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ ನಂತರ, ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು.

ಅವರು ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಯಾವುದೂ ಫಲ ನೀಡಲಿಲ್ಲ. ಕಡೆಗೆ 'ಬಾಹುಬಲಿ' ಸಿನಿಮಾಗಾಗಿ ಹೇಳುಕೊಳ್ಳುವಷ್ಟು ಅಲ್ಲವಾದರೂ, ತಕ್ಕಮಟ್ಟಿಗೆ ತೆಳ್ಳಗಾಗಿದ್ದರು. ನಂತರ 'ಭಾಗಮತಿ' ಸಿನಿಮಾದಲ್ಲೂ ಅವರು ಕೊಂಚ ದಪ್ಪವಾಗಿಯೇ ಕಾಣುತ್ತಿದ್ದರು. ಇದಾದ ನಂತರ ಅವರಿಗೆ ಯಾವುದೇ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಗಲೇ ಇಲ್ಲ.

Anushka Shetty plays Jhani Lakshmi Bhai role in  Chiranjeevi Sye Raa Narasimha Reddy Movie
ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ


ಇದರಿಂದಾಗಿ ನಟಿ ಅನುಷ್ಕಾ ಶೆಟ್ಟಿ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಪಡೆದು ನಂತರ ಭಾರತಕ್ಕೆ ಮರಳಿದ್ದರು. ಅವರು ಭಾರತಕ್ಕೆ ಮರಳುವ ಮುನ್ನವೇ ಅವರಿಗೆ ಹಾಲಿವುಡ್​ ಅಂದರೆ ಇಂಗ್ಲಿಷ್​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು. ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಅನುಷ್ಕಾ ಮಾತನಾಡದ ಸ್ಥಿತಿ ತಲುಪಿದ್ದಾರಂತೆ.

ಇದನ್ನೂ ಓದಿ: ವೈರಲ್​ ಆಗುತ್ತಿದೆ ನವೀನ್​ ಸಜ್ಜುರ 'ಏನ್ ಚಂದಾನೋ ತಕ್ಕೋ' ಹಾಡು..!

ಹೌದು, ಅವರ ಈ ಸ್ಥಿತಿಗೆ ಕಾರಣ ಅವರು ದೇಹದ ತೂಕ ಇಳಿಸಿಕೊಂಡಿದ್ದೇ ಎಂದು ಹೇಳಲಾಗುತ್ತಿದೆ. ಅವರು ಚಿಕಿತ್ಸೆ ಪಡೆದ ಕಾರಣದಿಂದಲೇ ಅವರಿಗೆ ಈಗ ಮಾತನಾಡಲು ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಅನುಷ್ಕಾ ದೇಹದ ತೂಕ ಇಳಿಸಿಕೊಳ್ಳದೆ ಹೋಗಿದ್ದರೆ, ಹೊಸ ಸಿನಿಮಾದಲ್ಲಿ ಮಾತು ಬಾರದ ಪಾತ್ರ ಅವರಿಗೆ ಸಿಗುತ್ತಿರಲಿಲ್ಲ. ಐದು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ.

Anushka Shetty in #Nishabdham... Costars R Madhavan, Anjali, Shalini Pandey, Subbaraju and Michael Madsen... Directed by Hemant Madhukar... Produced by TG Vishwa Prasad and Kona Venkat... In #Hindi, #Telugu, #Tamil, #Malayalam and #English. pic.twitter.com/RV86W8Cskrಈ ಸಿನಿಮಾದಲ್ಲಿ ಅನುಷ್ಕಾ  ಮಾತು ಬಾರದ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಅಭಿನಯಿಸುತ್ತಿರುವ ಪಾತ್ರದ ಹೆಸರು ಸಾಕ್ಷಿ.

ಈ ಸಿನಿಮಾದಲ್ಲಿ ಆರ್​ ಮಾಧವನ್​, ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು ಹಾಗೂ ಮೈಕೆಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ ಇಂಗ್ಲಿಷ್​, ಹಿಂದಿ​, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದೆ.

pic.twitter.com/i8gi2ynJo6ಹೇಮಂತ್ ಮಧುಕರ್ ನಿರ್ದೇಶನದ ಈ ಚಿತ್ರವನ್ನು ಟಿ.ಜಿ. ವಿಶ್ವ ಪ್ರಸಾದ್​ ಹಾಗೂ ಕೋನ ವೆಂಕಟ್​ ನಿರ್ಮಿಸುತ್ತಿದ್ದಾರೆ. ಆದರೆ ಈ ಚಿತ್ರ ಕನ್ನಡದಲ್ಲಿ ಮೂಡಿ ಬರುತ್ತಿಲ್ಲ. ಈ ಸಲವೂ ಕನ್ನಡತಿ ಅನುಷ್ಕಾ ಕನ್ನಡ ಮಾತನಾಡುವುದನ್ನು ಬೆಳ್ಳಿ ಪರದೆ ಮೇಲೆ ನೋಡಲು ಸಾಧ್ಯವಾಗುವುದಿಲ್ಲ.

Nabha Natesh: ಮೈಮಾಟದಿಂದಲೇ ನಿದ್ದೆ ಕದಿಯುತ್ತಿದ್ದಾರೆ ಇಸ್ಮಾರ್ಟ್​ ನಟಿ ನಭಾ ನಟೇಶ್​..!

First published: