• Home
  • »
  • News
  • »
  • entertainment
  • »
  • Ram Charan: ದಿವಂಗತ ಕರ್ನಲ್ ಸಂತೋಷ್ ಬಾಬು ಮಕ್ಕಳೊಂದಿಗೆ ರಾಮ್​ ಚರಣ್​ ಸೆಲ್ಫಿ, ನಟನ ಬಗ್ಗೆ ನೆಟ್ಟಿಗರ ಮೆಚ್ಚುಗೆ

Ram Charan: ದಿವಂಗತ ಕರ್ನಲ್ ಸಂತೋಷ್ ಬಾಬು ಮಕ್ಕಳೊಂದಿಗೆ ರಾಮ್​ ಚರಣ್​ ಸೆಲ್ಫಿ, ನಟನ ಬಗ್ಗೆ ನೆಟ್ಟಿಗರ ಮೆಚ್ಚುಗೆ

ನಟ ರಾಮ್ ಚರಣ್​

ನಟ ರಾಮ್ ಚರಣ್​

ಸಾಮಾಜಿಕ ತಾಣದಲ್ಲಿ ಮಕ್ಕಳೊಂದಿಗೆ ಮೆಗಾ ಸ್ಟಾರ್ ಸೆಲ್ಫಿ ತೆಗೆದುಕೊಂಡಿರುವುದು ವೈರಲ್ ಆಗಿದ್ದು, ರಾಮ್‌ಚರಣ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸರಳತೆಗೆ ಮನಸೋತಿದ್ದಾರೆ.

  • Share this:

ಮೆಗಾ ಪವರ್ ಸ್ಟಾರ್ ರಾಮ್‌ ಚರಣ್ (Ram Charan) ಭಾರತದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು ಎಂದೇ ಖ್ಯಾತರಾಗಿದ್ದಾರೆ. ಮನರಂಜನಾ (Entertainment) ಕ್ಷೇತ್ರಕ್ಕೆ ತೆಲುಗು ನಟ ರಾಮ್‌ಚರಣ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ರಾಮ್‌ಚರಣ್ 2020 ರ ಗಾಲ್ವಾನ್ ವ್ಯಾಲಿ (Galvan Valley) ಘರ್ಷಣೆಯಲ್ಲಿ ಹುತಾತ್ಮರಾದ ದಿವಂಗತ ಕರ್ನಲ್ ಸಂತೋಷ್ ಬಾಬು ಅವರ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ (Social Media) ವೈರಲ್ ಆಗಿದೆ.


ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡ ರಾಮ್‌ಚರಣ್


ಚಿತ್ರರಂಗದ ಇನ್ನಿತರ ಗಣ್ಯರಾದ ಸೋನು ಸೂದ್, ನೇಹಾ ಕಕ್ಕರ್, ಪಿವಿ ಸಿಂಧು ಮತ್ತು ಹಲವಾರು ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಲ್ ಸಂತೋಷ್ ಬಾಬು ಅವರ ಮಕ್ಕಳು ನಟ ರಾಮ್‌ಚರಣ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.


ಈ ಸಮಯದಲ್ಲಿ ಮಕ್ಕಳ ಇಚ್ಛೆಗೆ ಬೆಲೆ ನೀಡಿ ರಾಮ್‌ಚರಣ್ ಮಕ್ಕಳೊಂದಿಗೆ ಒಂದೆರಡು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಹಾಗೂ ರಾಮ್‌ಚರಣ್ ಸರಳತೆಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಹರ್ಷವ್ಯಕ್ತಪಡಿಸಿದ್ದಾರೆ.


Telugu actor Ram Charan takes selfie with late colonel Santosh Babus kids at event Stg pvn
ನಟ ರಾಮ್ ಚರಣ್​


ರಾಮ್‌ಚರಣ್ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹರ್ಷವ್ಯಕ್ತಪಡಿಸಿದ ತಂದೆ ಚಿರಂಜೀವಿ


ಮಕ್ಕಳೊಂದಿಗೆ ತಮ್ಮ ಪುತ್ರ ರಾಮ್‌ಚರಣ್ ಸೆಲ್ಫಿ ತೆಗೆದುಕೊಂಡಿರುವುದು ಮಾತ್ರವಲ್ಲದೆ, ಟ್ರೂ ಲೆಜೆಂಡ್ ಫ್ಯೂಚರ್ ಆಫ್ ಯಂಗ್ ಇಂಡಿಯಾ ಪ್ರಶಸ್ತಿಯೊಂದಿಗೆ ಪುರಸ್ಕೃತರಾದ ಪುತ್ರನ ಬಗೆಗೆ ಭಾವುಕ ಟ್ವೀಟ್ ಮಾಡಿ ಚಿರಂಜೀವಿ ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.


ಈ ಸಂದರ್ಭದಲ್ಲಿ ಮಗನ ಸಾಧನೆಯ ಬಗ್ಗೆ ಮನಸ್ಫೂರ್ತಿಯಾಗಿ ಚಿರಂಜೀವಿ ಹೊಗಳಿದ್ದು ಪುತ್ರನಿಗೆ ಶುಭಹಾರೈಸಿದ್ದಾರೆ.


ನಟನ ಸರಳತೆಯನ್ನು ಕೊಂಡಾಡಿದ ಅಭಿಮಾನಿಗಳು


ಸಾಮಾಜಿಕ ತಾಣದಲ್ಲಿ ಮಕ್ಕಳೊಂದಿಗೆ ಮೆಗಾ ಸ್ಟಾರ್ ಸೆಲ್ಫಿ ತೆಗೆದುಕೊಂಡಿರುವುದು ವೈರಲ್ ಆಗಿದ್ದು, ರಾಮ್‌ಚರಣ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸರಳತೆಗೆ ಮನಸೋತಿದ್ದಾರೆ.


ಟ್ವಿಟರ್ ಬಳಕೆದಾರರೊಬ್ಬರು ರಾಮ್‌ಚರಣ್ ಸೆಲ್ಫಿ ತೆಗೆದುಕೊಂಡಿರುವುದರ ಬಗ್ಗೆ ಕಾಮೆಂಟ್ ಮಾಡಿದ್ದು ಇಂಡಸ್ಟ್ರೀಯ ಅತ್ಯಂತ ಸಂಭಾವಿತ ವ್ಯಕ್ತಿ ರಾಮ್‌ಚರಣ್ ಎಂದು ಕೊಂಡಾಡಿದ್ದಾರೆ.


ಇನ್ನಷ್ಟು ಬಳಕೆದಾರರು ರಾಮ್‌ಚರಣ್ ಮಕ್ಕಳೊಂದಿಗೆ ಎಷ್ಟು ಆತ್ಮೀಯವಾಗಿ ನಡೆದುಕೊಂಡಿದ್ದಾರೆ ಎಂದು ಹೊಗಳಿದ್ದು, ಅಷ್ಟು ದೊಡ್ಡ ಸ್ಟಾರ್ ನಟನಾದರೂ ಕೊಂಚವೂ ಅಹಂಕಾರ ತೋರ್ಪಡಿಸದೇ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿದ್ದಾರೆ ಎಂದು ಹೊಗಳಿದ್ದಾರೆ.


ರಾಮ್‌ಚರಣ್ ಕೈಯಲ್ಲಿರುವ ಪ್ರಾಜೆಕ್ಟ್‌ಗಳು


ಇದೇ ಕಾರ್ಯಕ್ರಮದಲ್ಲಿ ರಾಮ್‌ಚರಣ್ ದಬಾಂಗ್ ನಟ ಸೋನು ಸೂದ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡಿದ್ದು, ನೇಹಾ ಕಕ್ಕರ್ ಅವರಿಗೆ ಹಸ್ತಲಾಘವ ಮಾಡಿರುವುದೂ ಕಂಡುಬಂದಿದೆ.


ರಾಮ್‌ಚರಣ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ ಉಪೆನ್ನಾ ನಿರ್ದೇಶಕ ಬುಚ್ಚಿ ಬಾಬು ಸನಾ ಅವರೊಂದಿಗೆ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದು, ಚಿತ್ರದ ಕುರಿತು ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಚಿತ್ರದ ಕುರಿತು ಅವರು ತೀವ್ರ ಉತ್ಸಾಹಿತರಾಗಿದ್ದಾರೆ ಎಂದು ರಾಮ್ ಚರಣ್ ತಿಳಿಸಿದ್ದಾರೆ.


ಇದೇ ಮೊದಲ ಬಾರಿಗೆ ನಿರ್ದೇಶಕ ಬುಚ್ಚಿ ಬಾಬು ಸನಾ ಅವರೊಂದಿಗೆ ರಾಮ್‌ಚರಣ್ ಕೆಲಸ ಮಾಡುತ್ತಿದ್ದು, RC16 ಎಂದು ಚಿತ್ರಕ್ಕೆ ಸದ್ಯ ಹೆಸರಿಡಲಾಗಿದ್ದು ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದಾರೆ. ಇದೊಂದು ಕ್ರೀಡೆ ಆಧಾರಿತ ಚಿತ್ರವಾಗಿದೆ ಎಂಬುದು ತಿಳಿದುಬಂದಿದೆ.


ಬುಚ್ಚಿ ಬಾಬು ನಿರ್ದೇಶನದ RC16 ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭಗೊಳ್ಳಲಿದೆ ಎಂಬ ಮಾಹಿತಿ ದೊರಕಿದ್ದು, ಬಹುಶಃ ಡಿಸೆಂಬರ್ 2022 ರ ಅತ್ಯಂತ ವೇಳೆಗೆ ಸಿನಿಮಾ ಶೂಟಿಂಗ್ ಸೆಟ್ಟೇರಲಿದೆ ಎಂಬುದು ತಿಳಿದುಬಂದಿದೆ.


ಶಂಕರ್ ನಿರ್ದೇಶನದ RC 15 ಶೂಟಿಂಗ್‌ನಲ್ಲಿ ರಾಮ್‌ಚರಣ್


ರಾಮ್‌ಚರಣ್ ಇನ್ನೂ ಹೆಸರಿಡದೇ ಇರುವ ಶಂಕರ್ ನಿರ್ದೇಶನದ ಚಿತ್ರ RC 15 ನ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಿಯಾರಾ ಅಡ್ವಾನಿ ಬಣ್ಣಹಚ್ಚಲಿದ್ದಾರೆ ಎಂಬುದು ಸಿನಿರಂಗದ ಮೂಲಗಳಿಂದ ತಿಳಿದುಬಂದಿದೆ.

Published by:ಪಾವನ ಎಚ್ ಎಸ್
First published: