ಸದ್ಯ ವಿಶ್ವದಲ್ಲೇ ಕೆಜಿಎಫ್ ಚಾಪ್ಟರ್ 2 (KGF Chapter 2) ದೊಡ್ಡ ಹವಾ ಸೃಷ್ಟಿಮಾಡಿದೆ. ಅದರಲ್ಲೂ ಕನ್ನಡ (Kannada) ಸಿನಿಮಾವೊಂದು ಈ ಮಟ್ಟಕ್ಕೆ ಅಬ್ಬರಿಸುತ್ತಿರುವ ಕೆಲವರಿಗೆ ಭಯ ಹುಟ್ಟಿಸಿದೆ. ಮತ್ತೆ ಕೆಲವರಿಗೆ ಹೊಟ್ಟೆ ಉರಿಯುವಂತೆ ಮಾಡಿದೆ. ಕೆಜಿಎಫ್ ಚಾಪ್ಟರ್ 1 (KGF Chapter 1) ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲೂ ಸಖತ್ ಸೌಂಡ್ ಮಾಡಿತ್ತು. 'ಕೆಜಿಎಫ್ ಚಾಪ್ಟರ್ 1' (KGF Chapter 1) ಚಿತ್ರ ಐದು ಭಾಷೆಗಳಲ್ಲಿ ರಿಲೀಸ್ ಆಗಿ ಗೆದ್ದು ಬೀಗಿದಾಗ ಅನೇಕರು ಬೇರೆ ಭಾಷೆಯಲ್ಲಿಯೂ ಸಿನಿಮಾ ಡಬ್ ಮಾಡಲು ಆರಂಭಿಸಿದ್ದಾರೆ. ಹೀಗಿರುವಾಗ ನಟ ನಾನಿ (Nani), ನಜ್ರಿಯಾ ನಾಜೀಮ್ (Nazariya Nazzem) ನಟನೆಯ'ಅಂತೆ ಸುಂದರಾನಿಕಿ' (Ante Sundaraniki) ಸಿನಿಮಾವನ್ನು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಡಬ್ ಮಾಡಲಾಗಿದೆ. ತೆಲುಗು ನಟ ನಾನಿ (Nani) ತಮ್ಮ ಸಿನಿಮಾ 'ಅಂತೆ ಸುಂದರಾನಿಕಿ' ಪತ್ರಿಕಾಗೋಷ್ಠಿಯಲ್ಲಿ ಕನ್ನಡದ ಬಗ್ಗೆ, ಕನ್ನಡಿಗರ ಪ್ರೇಕ್ಷಕರ ಬಗ್ಗೆ ನೀಡಿದ ಹೇಳಿಕೆಯಿಂದ ತೆಲುಗು ಸಿನಿಮಾ ವೀಕ್ಷಿಸುವ ಕನ್ನಡ ಪ್ರೇಕ್ಷಕರು ತಿರುಗಿ ಬಿದ್ದಿದ್ದಾರೆ.
ಅಸಲಿಗೆ ನಾನಿ ಹೇಳಿದ್ದೇನು?
ಇತ್ತೀಚೆಗೆ ನಡೆದ ‘ಅಂತೆ ಸುಂದರಾನಿಕಿ’ ಟೀಸರ್ ಬಿಡುಗಡೆ ವೇಳೆ ನಟ ನಾನಿಗೆ ನಿಮ್ಮ ಸಿನಿಮಾವನ್ನು ಏಕೆ ಕನ್ನಡದಲ್ಲಿ ಡಬ್ ಮಾಡಿಲ್ಲ ಎಂದು ಪ್ರಶ್ನೆ ಎದುರಾಯಿತು. ಆಗ ನಾನಿ, ‘ಕನ್ನಡ ಪ್ರೇಕ್ಷಕರು ತೆಲುಗು ಸಿನಿಮಾವನ್ನು ಅದರ ಭಾಷೆಯಲ್ಲೇ ನೋಡುತ್ತಾರೆ. ಕನ್ನಡಿಗರಿಗೆ ತೆಲುಗು ಅರ್ಥವಾಗುತ್ತದೆ. ಅವರು ತೆಲುಗು ಸಿನಿಮಾವನ್ನು ತೆಲುಗಿನಲ್ಲಿ ನೋಡುವುದಕ್ಕೆ ಇಷ್ಟಪಡುತ್ತಾರೆ. ಹೀಗಾಗಿ ಡಬ್ ಮಾಡುವ ಅವಶ್ಯಕತೆ ಬರಲಿಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಕನ್ನಡಿಗರು ಗರಂ ಆಗಿದ್ದಾರೆ. ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ವಿರುದ್ಧ ಕನ್ನಡಿಗರು ಕಿಡಿ ಕಾರಿದ್ದಾರೆ.
ಕನ್ನಡಿಗರಿಗೆ ಕ್ಷಮೆ ಕೇಳಿದ ನಟ ನಾನಿ!
ನಾನಿ (Nani) ತಕ್ಷಣ ಕ್ಷಮೆ ಕೇಳಬೇಕು. ತೆಲುಗು ಹೀರೋಗಳು ತಮ್ಮ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ನೋಡಬೇಕಾದರೆ, ನಮ್ಮದೇ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿ. ಅದು ಬಿಟ್ಟು ಕನ್ನಡ ಭಾಷಿಕರ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
Apologies if Not conveyed properly 🙏🏼proud of Kannada cinema and its success across the boundaries 🤍
— Nani (@NameisNani) April 20, 2022
ಇದನ್ನೂ ಓದಿ: ಅಪ್ಪು ವಾಯ್ಸ್ನಲ್ಲೇ ರೀ ರಿಲೀಸ್ ಆಯ್ತು ಜೇಮ್ಸ್! 'ರಾಜರತ್ನ'ನ ಧ್ವನಿ ಕೇಳಿ ಫ್ಯಾನ್ಸ್ ಭಾವುಕ
ವಿವಾದದ ಬಗ್ಗೆ ನಾನಿ ನೀಡಿದ ಸ್ಪಷ್ಟನೆ ಏನು?
"ಎಲ್ಲ ಪ್ರೇಕ್ಷಕರಿಗೆ ಸಿನಿಮಾ ರೀಚ್ ಆಗಬೇಕು ಎಂದು ಬೇರೆ ಬೇರೆ ಭಾಷೆಯಲ್ಲಿ ಯಾಕೆ ಸಿನಿಮಾ ಮಾಡುತ್ತೇವೆ. ತೆಲುಗು ಸಿನಿಮಾ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದು ಅವರವರ ಭಾಷೆಯಲ್ಲಿ ಸಿನಿಮಾ ಡಬ್ ಮಾಡಲಾಗುತ್ತಿದೆ. ಬೇರೆಯವರ ಧ್ವನಿಯಲ್ಲಿ ಸಿನಿಮಾ ನೋಡದೆ, ಕಲಾವಿದರ ಒರಿಜಿನಲ್ ಧ್ವನಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರು ನೋಡಲಿ, ಅದೇ ಚೆನ್ನಾಗಿರುತ್ತದೆ ಎಂದು ನಾವು ಆಶಯಪಟ್ಟೆವು, ಆದರೆ ಅದು ಎಲ್ಲ ಸಮಯದಲ್ಲಿ ಸಾಧ್ಯವಾಗದು. ಕನ್ನಡಿಗರು ತೆಲುಗು ಸಿನಿಮಾವನ್ನು ಜಾಸ್ತಿ ನೋಡುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ, ತೆಲುಗು ಸಿನಿಮಾವನ್ನು ಅವರು ಎಂಜಾಯ್ ಮಾಡುತ್ತಾರೆ.
ಇದನ್ನೂ ಓದಿ: KGF 2 ಮುಂದೆ Beast ಊಸ್ಟ್! ಈಗ ಡೈರೆಕ್ಟರ್ ನೆಲ್ಸನ್ ವಿರುದ್ಧ ವಿಜಯ್ ತಂದೆ ಗರಂ
ನಮ್ಮ ಒರಿಜಿನಲ್ ಸಿನಿಮಾವನ್ನು ಕನ್ನಡಿಗರಿಗೆ ತೋರಿಸಬಹುದು. ಆದರೆ ಹಿಂದಿ, ಮಲಯಾಳಂನವರಿಗೆ ನಮ್ಮ ಸಿನಿಮಾವನ್ನು ಡಬ್ ಮಾಡಲೇಬೇಕು" ಎಂದು ನಟ ನಾನಿ (Nani) ಸ್ಪಷ್ಟನೆ ನೀಡಿದ್ದಾರೆ.
ನನ್ನ ಮಾತಿನಿಂದ ತಪ್ಪಾಗಿದ್ರೆ ಕ್ಷಮಿಸಿ ಎಂದ ನಟ!
ನಾನಿ ಮಾತಿಗೆ ಕನ್ನಡಿಗರು ಗರಂ ಆಗಿದ್ದಾರೆ. ಇದಾದ ನಂತರ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ. "ನಾನು ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಸಿಲ್ಲ ಎಂದಾದರೆ ಕ್ಷಮೆ ಕೇಳುವೆ. ಬೌಂಡರಿ ದಾಟಿದ ಕನ್ನಡ ಸಿನಿಮಾದ ಯಶಸ್ಸಿನ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ನಟ ನಾನಿ ಕ್ಷಮೆ ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ