ಕನ್ನಡ ಸಿನಿಮಾಗಳು (Kannada Films) ಈಗ ಕರ್ನಾಟಕದಲ್ಲಿ (Karnataka) ಮಾತ್ರ ಅಲ್ಲ. ವಿಶ್ವವೇ (World) ಮಾತನಾಡುವಂತೆ ಆಗಿದೆ. ಅದರಲ್ಲೂ KGF 2 ಭರ್ಜರಿ ಹವಾ ಸೃಷ್ಟಿಸಿತ್ತು. ಎಲ್ಲೆಡೆ ಅದರ ಬಗ್ಗೆಯೇ ಮಾತನಾಡುತ್ತಿದ್ರು. ಆ ರೀತಿ ಮಟ್ಟಿಗೆ ಕನ್ನಡ ಸಿನಿಮಾಗಳು ಬೆಳೆಯುತ್ತಿವೆ. 2022 ಫಿಲ್ಮ್ ಫೇರ್ ಸೌತ್ ಪ್ರಶಸ್ತಿ (Filmfare Awards South ) ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 9) ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಅತ್ಯುತ್ತಮವಾದದ್ದಕ್ಕೆ ಪ್ರಶಸ್ತಿಗಳು ಲಭಿಸಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗು ನಟ ನಾನಿ (Nani) ಅವರು ಕನ್ನಡ ಸಿನಿಮಾಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಅದರಲ್ಲೂ ಕಾಂತಾರ ಸಿನಿಮಾ ಬಗ್ಗೆ ಮೆಚ್ಚಿಕೊಂಡಿದ್ದಾರೆ. ನಾನಿ ಮಾತನಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ನಾನಿ ಹೇಳಿದ್ದೇನು?
ಬೆಂಗಳೂರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ತುಂಬಾ ಖುಷಿಯಾಗಿದೆ. ಯಪ್ಪಾ, ಕನ್ನಡದಲ್ಲಿ ಈಗೀಗ ಏನು ಸಿನಿಮಾ ತೆಗಿತಿದ್ದೀರಪ್ಪ, ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತ ಮಾತನಾಡುತ್ತಿದೆ. ಇತ್ತೀಚೆಗೆ ಬಂದ ಕಾಂತಾರ ಬಗ್ಗೆ ಕೂಡ ಕೇಳಿದೆ, ಸಖತ್ ಆಗಿದೆಯಂತೆ. ಎಲ್ಲಿ ಹೋದರೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ತುಂಬ ಹೆಮ್ಮೆಯಾಗುತ್ತಿದೆ ಎಂದು ನಾನಿ ಹೇಳಿದ್ದಾರೆ.
ಕಡಿಮೆಯಾಗದ ಕಾಂತಾರಾ ಹವಾ
ಹಿಟ್ ಚಿತ್ರಗಳ ನಿರ್ದೇಶನದ ಸರದಾರ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರು ಕಾಂತಾರ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಎಲ್ಲಿ ನೋಡಿದ್ರೂ ಹೌಸ್ ಪುಲ್ ಪ್ರದರ್ಶನ್ ಕಾಣ್ತಿದೆ. ರಿಷಬ್ ಶೆಟ್ಟಿ ನಟನೆಗೆ ಕನ್ನಡ ಮಂದಿ ಮಾತ್ರವಲ್ಲ, ದೇಶವೇ ಜೈ ಅಂದಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಪರಭಾಷೆಯಲ್ಲಿ ಕೂಡ ಈ ಸಿನಿಮಾ ರಿಲೀಸ್ ಮಾಡಲು ತಯಾರಿ ಮಾಡಿಕೊಂಡಿದೆ.
View this post on Instagram
ಬಾಲಿವುಡ್ಗೂ ಕಾಲಿಟ್ಟ ಪಂಜುರ್ಲಿ ದೈವ
ರಿಷಬ್ ಶೆಟ್ಟಿ ತಮ್ಮ ಈ ಚಿತ್ರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗಬೇಕು ಅಂತಲೇ ಕನಸು ಕಂಡಿದ್ದರು. ದೈವ ಕೃಪೆಯಿಂದಲೇ ಅದು ಈಗ ಸಾಕಾರಗೊಂಡಿದೆ. ಚಿತ್ರದ ಮೊಟ್ಟ ಮೊದಲ ಹಿಂದಿ ಟ್ರೈಲರ್ ರಿಲೀಸ್ಗೆ ರೆಡಿ ಆಗಿದೆ.
ಪಾರ್ಲೆ ಫಿಲ್ಮ್ಫೇರ್ ಅವಾಡ್ರ್ಸ್ ಸೌತ್ 2022 ರಲ್ಲಿ ವಿಜೇತರು
ಇದನ್ನೂ ಓದಿ: Appu Award: ಅಪ್ಪು ಸ್ಮರಣೆಯಲ್ಲಿ ಹೊಸ ಪ್ರಶಸ್ತಿ; ಅನುಬಂಧ ಅವಾರ್ಡ್ನಲ್ಲಿ ಕಲರ್ಸ್ ಕನ್ನಡಿಗ ಘೋಷಣೆ
ಕನ್ನಡ ಸಿನಿಮಾ ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಧನಂಜಯ್ (ಬಡವ ರಾಸ್ಕಲ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಮಹಿಳೆ) - ಯಜ್ಞ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ಚಿತ್ರ - ಆಕ್ಟ್ 1978
ಅತ್ಯುತ್ತಮ ನಿರ್ದೇಶಕ - ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಪೆÇೀಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) - ಬಿ. ಸುರೇಶ (ಆಕ್ಟ್ 1978)
ಪೆÇೀಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ) - ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ಆಲ್ಬಮ್ - ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ರಘು ದೀಕ್ಷಿತ್- ಮಲೇ ಮಲೇ ಮಲೇ (ನಿನ್ನ ಸನಿಹಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಇದನ್ನೂ ಓದಿ: BBK Season 9: ಬಿಗ್ ಬಾಸ್ ಮನೆಯಿಂದ ನವಾಜ್ ಔಟ್? ವರ್ಕ್ ಆಗಲಿಲ್ವಾ ಸೈಕೋ ಡೈಲಾಗ್ಗಳು?
ಅತ್ಯುತ್ತಮ ಛಾಯಾಗ್ರಹಣ - ಶ್ರೀಶ ಕುಡುವಳ್ಳಿ (ರತ್ನನ್ ಪ್ರಪಂಚ)
ಬೆಸ್ಟ್ ಕೊರಿಯೋಗ್ರಫಿ - ಜಾನಿ ಮಾಸ್ಟರ್ - ಫೀಲ್ ದಿ ಪವರ್ (ಯುವರತ್ನ)
ಜೀವಮಾನದ ಸಾಧನೆ ಪ್ರಶಸ್ತಿ - ಪುನೀತ್ ರಾಜ್ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ