ತೆಲುಗು ಚಿತ್ರೋದ್ಯಮದ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಏನೇ ಮಾಡಿದರೂ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಮತ್ತು ಸ್ಟೈಲ್ ಇರುತ್ತದೆ ಎಂದು ಅವರ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಕರೆದು ಹೇಳಬೇಕಿಲ್ಲ. ಈಗಾಗಲೇ ನಟ ಮಹೇಶ್ ಅವರು ತಮ್ಮ ಮುಂದಿನ ಚಿತ್ರವಾದ ‘ಸರ್ಕಾರು ವಾರಿ ಪಾಟಾ’ (Sarkaru Vaari Paata) ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚಿಗೆ ಆದಿ ಶೇಸ್ ನಟನೆಯ ಮೇಜರ್ (Major) ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಾವ ಕಾರಣಕ್ಕೆ ಪ್ರಿನ್ಸ್ ಬಾಲಿವುಡ್ (Bollywood) ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಯಾವ ರೀತಿ ಕಥೆಗಳನ್ನು ಕೇಳುಬೇಕು ಅಂದುಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಮಹೇಶ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ.
ಬಾಲಿವುಡ್ಗೆ ನನ್ನ ಮೆಂಟೈನ್ ಕೆಪಾಸಿಟಿ ಇಲ್ಲ ಎಂದ ನಟ!
'ಬಾಲಿವುಡ್ ಸಿನಿಮಾಗಳಿಂದ ನನಗೆ ತುಂಬಾ ಆಫರ್‌ಗಳು ಬರುತ್ತಿದೆ. ಆದರೆ, ಅವರಿಗೆ ನನಗೆ ಸಂಭಾವನೆ ಕೊಡುವ ಕೆಪಾಸಿಟಿ ಇಲ್ಲ. ನನ್ನ ಖರೀದಿ ಮಾಡಲು ಅವರ ಬಳಿ ಹಣವಿಲ್ಲ ಎಂದು ನನಗೆ ಅನಿಸುತ್ತದೆ. ಹೀಗಾಗಿ ಸುಮ್ಮನೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಎಲ್ಲವೂ ಸಿಗುತ್ತಿದೆ. ಇಲ್ಲಿನ ಅಭಿಮಾನಿಗಳ ಪ್ರೀತಿ ನನಗೆ ದೊಡ್ಡದು. ಸದಾ ಸಿನಿಮಾ ಮಾಡಬೇಕು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಅಷ್ಟೇ ನನ್ನ ಗುರಿ. ನನ್ನ ಕನಸು ನನಸು ಆಗುತ್ತಿದೆ ಇದಕ್ಕಿಂತ ಸಂತೋಷ ಬೇಕಾ?'ಎಂದು ಮಹೇಶ್ ಬಾಬು ಹೇಳಿದ್ದಾರೆ.
ಮೇ 12ಕ್ಕೆ ‘ಸರ್ಕಾರು ವಾರಿ ಪಾಟಾ’ ಸಿನಿಮಾ ರಿಲೀಸ್!
ಇದೇ ಮೇ 12 ರಂದು ಬೆಳ್ಳಿತೆರೆ ಮೇಲೆ ಬರಲಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡು, ಟ್ರೈಲರ್ ಅನ್ನ ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ಮಹೇಶ್ ಬಾಬು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇದ್ದು, ಇದಕ್ಕೆಲ್ಲಾ ಉತ್ತರ ಮೇ 12 ರಂದು ಸಿಗಲಿದೆ.
ಇದನ್ನೂ ಓದಿ: ಚಿರು ಕೊನೆ ಸಿನಿಮಾಗೆ ಡಬ್ ಮಾಡಿದ ಧ್ರುವ ಸರ್ಜಾ! ಅಣ್ಣನ ಅಭಿನಯ ಕಂಡು ಭಾವುಕ
ಮಹೇಶ್ ಬಾಬು ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ!
ಪ್ರಿನ್ಸ್ ಮಹೇಶ್ ಬಾಬು, ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ತಯಾರಿ ಕೂಡ ಮಾಡಿಕೊಳ್ಳಲಾಗಿದ್ದು, 'ಸರ್ಕಾರು ವಾರಿ ಪಾಟ' ರಿಲೀಸ್ ನಂತರ ಮಹೇಶ್ ಬಾಬು ತ್ರಿವಿಕ್ರಂ ನಿರ್ದೇಶನದ SSMB28 ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸೌತ್ ಬ್ಯೂಟಿ ಹಾಗೂ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಪೂಜಾ ಹೆಗಡೆ ನಟಿಸಲಿದ್ದಾರೆ.
ಇದನ್ನೂ ಓದಿ: Avatar 2 ಟ್ರೈಲರ್ ರಿಲೀಸ್, ಅಬ್ಬಬ್ಬಾ.. ಒಂದ್ ಒಂದು ಫ್ರೇಮ್ ಅದ್ಭುತ! ಇದು ಸಿನಿಮಾ ಅಲ್ಲ-ಮ್ಯಾಜಿಕ್
ಮಹೇಶ್ ಬಾಬು ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ!
'ಸರ್ಕಾರು ವಾರಿ ಪಾಟ' ಸಿನಿಮಾದ ಟಿಕೆಟ್ ದರವನ್ನು 45 ರುಪಾಯಿ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಸಾಮಾನ್ಯ ಟಿಕೆಟ್ ದರದ ಮೇಲೆ 45 ರುಪಾಯಿ ಹೆಚ್ಚಳ ಮಾಡಿ ಟಿಕೆಟ್ ಮಾರಾಟ ಮಾಡಬಹುದಾಗಿದೆ. ಆದರೆ ಈ ಹೆಚ್ಚುವರಿ ಟಿಕೆಟ್ ದರ ಕೇವಲ ಹತ್ತು ದಿನಗಳಿಗೆ ಮಾತ್ರ ಅನ್ವಯ. ಸಿನಿಮಾ ಬಿಡುಗಡೆ ಆದ ಹತ್ತು ದಿನದ ವರೆಗೆ ಮಾತ್ರವೇ ಟಿಕೆಟ್ ದರ ಹೆಚ್ಚು ಮಾಡಿ ಮಾರಾಟ ಮಾಡಬಹುದಾಗಿದೆ. ಆ ನಂತರ ಹಳೆ ದರವನ್ನು ನಿಗದಿ ಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ