Amitab Bachchan: ಬಿಗ್ ಬಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೆಲುಗು ನಟ ಜೂನಿಯರ್ ಎನ್‌ಟಿಆರ್; ಏನಂದ್ರು ನೋಡಿ

ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಆರ್‌ಆರ್‌ಆರ್’ ಚಿತ್ರದ ನಟ ಜೂನಿಯರ್ ಎನ್‌ಟಿಆರ್ ಅವರು ವಿಶೇಷ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಅಮಿತಾಭ್ ಬಚ್ಚನ್ ಅವರನ್ನು ತುಂಬಾನೇ ಹೊಗಳಿದರು.

 ಜೂನಿಯರ್ ಎನ್‌ಟಿಆರ್ ಮತ್ತು ಅಮಿತಾಭ್ ಬಚ್ಚನ್

ಜೂನಿಯರ್ ಎನ್‌ಟಿಆರ್ ಮತ್ತು ಅಮಿತಾಭ್ ಬಚ್ಚನ್

  • Share this:
ಬಾಲಿವುಡ್ ನಲ್ಲಿ ಬಿಗ್ ಬಿ (Big B) ಅಂತಾನೆ ಹೆಸರುವಾಸಿಯಾದ ಅಮಿತಾಭ್ ಬಚ್ಚನ್ (Amitab Bachchan) ಅವರನ್ನ ಕಂಡರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ತುಂಬಾನೇ ಇಷ್ಟ ಈ ನಟ. ಅದರಲ್ಲೂ ಅವರು ಇಂದಿಗೂ ಯಾವುದಾದರೂ ಚಿತ್ರದಲ್ಲಿ ನಟಿಸಿದರೆ, ಅದೇ ಹಳೆಯ ಜೋಶ್ ನೊಂದಿಗೆ ಪಾತ್ರಕ್ಕೆ (Character) ಜೀವ ತುಂಬುತ್ತಾರೆ. ಈಗ ತೆಲುಗು ಜನಪ್ರಿಯ ನಟ ಅಮಿತಾಭ್ ಎಂದರೆ ತನಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಆರ್‌ಆರ್‌ಆರ್’ ಚಿತ್ರದ ನಟ ಜೂನಿಯರ್ ಎನ್‌ಟಿಆರ್ (Junior NTR) ಅವರು ವಿಶೇಷ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಅಮಿತಾಭ್ ಬಚ್ಚನ್ ಅವರನ್ನು ತುಂಬಾನೇ ಹೊಗಳಿದರು.

ಜೂನಿಯರ್ ಎನ್‌ಟಿಆರ್ ಗೆ ರಣಬೀರ್ ಕಪೂರ್ ಅಂದ್ರೂ ಇಷ್ಟ ಅಂತೆ
ಅಮಿತಾಭ್ ಅವರು ಭಾರತ ಮತ್ತು ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕರಂತೆ, ತೆಲುಗು ತಾರೆಯು ಸಹ ಈ ನಟನ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯಲಿಲ್ಲ.

ಎನ್‌ಟಿಆರ್ ಅವರು ರಣಬೀರ್ ಕಪೂರ್ ಅವರನ್ನು ಒಬ್ಬ ನಟರಾಗಿ ತುಂಬಾ ಇಷ್ಟಪಡುತ್ತೇನೆ ಮತ್ತು ಪ್ರತಿ ಚಿತ್ರದಲ್ಲೂ ಅಮಿತಾಭ್ ಬಚ್ಚನ್ ಅವರ ಆ ಜೋಶ್ ನ ದೊಡ್ಡ ಅಭಿಮಾನಿಯಾಗಿದ್ದೆನೆ ಎಂದು ಹೇಳಿಕೊಂಡರು.

ಅಮಿತಾಬ್ ಬಚ್ಚನ್ ಅವರ ಬಗ್ಗೆ ಏನಂದ್ರು ಜೂನಿಯರ್ ಎನ್‌ಟಿಆರ್
"ಅಮಿತಾಬ್ ಬಚ್ಚನ್ ಅವರ ಪ್ರತಿಯೊಂದು ಚಿತ್ರದಲ್ಲೂ ಅವರ ತೀವ್ರತೆಯನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ನಾನು ಅವರ ತೀವ್ರತೆ, ಅವರ ಧ್ವನಿ, ಅವರ ಕಣ್ಣುಗಳು, ಅವರ ವ್ಯಕ್ತಿತ್ವದ ತುಂಬಾನೇ ದೊಡ್ಡ ಅಭಿಮಾನಿಯಾಗಿದ್ದೆನೆ.

ಅವರು ನಿಂತುಕೊಳ್ಳುವ ಸ್ಟೈಲ್, ತಮ್ಮ ಎಡಗೈಯನ್ನು ಬೀಸುವ ರೀತಿ, ಅಮಿತ್ ಜೀ ಬಗ್ಗೆ ಎಲ್ಲವೂ ನನಗೆ ತುಂಬಾನೇ ಇಷ್ಟವಾಗುತ್ತದೆ. ನಟನಾಗಿ ಅವರು ನಿಜವಾಗಿಯೂ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದ್ದಾರೆ" ಎಂದು ಜೂನಿಯರ್ ಎನ್‌ಟಿಆರ್ ಅವರು ಹೇಳಿದರು.

ಇದನ್ನೂ ಓದಿ: Rashmika Madanna: ಶಾಲಾ ಕಾರ್ಯಕ್ರಮದಲ್ಲಿ ಶ್ರೀವಲ್ಲಿ ಸಖತ್​ ಡ್ಯಾನ್ಸ್​; ಬಾಲ್ಯದ ಫೋಟೋದಲ್ಲಿ She So Cute!

ರಣಬೀರ್ ಬಗ್ಗೆ ಹೇಳಿದ್ದು ಹೀಗೆ 
ಅಮಿತಾಭ್ ಬಚ್ಚನ್ ಅವರನ್ನು ಹೊಗಳಿದ ನಂತರ, ಜೂನಿಯರ್ ಎನ್‌ಟಿಆರ್ ಅವರು ರಣಬೀರ್ ಬಗ್ಗೆಯೂ ಮಾತನಾಡಿದ್ರು. ಅವರ ಪ್ರತಿಯೊಂದು ಚಿತ್ರವು ಒಬ್ಬ ನಟನಾಗಿ ನನಗೆ ನಿಜವಾಗಿಯೂ ಸ್ಫೂರ್ತಿ ನೀಡಿದೆ ಮತ್ತು ನನ್ನ ಅತ್ಯಂತ ನೆಚ್ಚಿನ ಚಿತ್ರ ರಾಕ್​ಸ್ಟಾರ್ ಅಂದರು.

ಅವರು ನನಗೆ ಸ್ಫೂರ್ತಿ ನೀಡುತ್ತಾರೆ. ರಣಬೀರ್ ನಲ್ಲಿನ ತೀವ್ರತೆಯನ್ನು ನಾನು ನಿಜವಾಗಿಯೂ ಇಷ್ಟಪಡುತ್ತೇನೆ.. ಇಂದು ನನ್ನ ಹುಟ್ಟೂರಾದ ಹೈದರಾಬಾದ್ ನಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ತುಂಬಾ ಸಂತೋಷ ತಂದಿದೆ ಎಂದು ಅವರು ಹೇಳಿದರು.

ಕೆಬಿಸಿ ಚಿತ್ರೀಕರಣ ಮತ್ತೆ ಆರಂಭಿಸಿದ ಅಮಿತಾಭ್ ಬಚ್ಚನ್
9 ದಿನಗಳ ಐಸೊಲೇಷನ್ ನಂತರ ಕೋವಿಡ್ ತಪಾಸಣೆಯಲ್ಲಿ ನೆಗೆಟಿವ್ ಬಂದ ಅಮಿತಾಭ್ ಮತ್ತೊಮ್ಮೆ 'ಕೌನ್ ಬನೇಗಾ ಕರೋಡ್‌ಪತಿ'ಯ ಸೆಟ್ ಗೆ ಮರಳಿದ್ದಾರೆ. ನಟ ಪ್ರಸ್ತುತ ಕೆಬಿಸಿಯ 14ನೇ ಸೀಸನ್ ಅನ್ನು ಆಯೋಜಿಸುತ್ತಿದ್ದಾರೆ.

ತಮ್ಮ ಕೆಲಸದ ವೇಳಾಪಟ್ಟಿಯ ಬಗ್ಗೆ ಅಪ್ಡೇಟ್ ಮಾಡಿದ ಸಿನಿ ಐಕಾನ್ ತಮ್ಮ ಬ್ಲಾಗ್ ನಲ್ಲಿ ಮೊದಲ ದಿನದ ಕೆಲಸದ ನಂತರ ವಿಶ್ರಾಂತಿ ಪಡೆಯಲು ಬಯಸಿದ್ದರಿಂದ ಬರೆಯಲು ತಡವಾಯಿತು ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  Real Star Uppi: ಬುದ್ದಿವಂತನ ಸಿನಿಮಾ ಎಲ್ಲಿವರೆಗೆ ಬಂತು? ಡೈರೆಕ್ಟರ್​ ಹೇಳಿದ್ದೇನು

ಕೆಬಿಸಿಯ ಹೊರತಾಗಿ, ಅಮಿತಾಭ್ ‘ಬ್ರಹ್ಮಾಸ್ತ್ರ ಪಾರ್ಟ್ ಒನ್: ಶಿವ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ನಟಿಸಿದ್ದಾರೆ. ಅಲ್ಲದೆ ಇವರು 'ಉಂಚಾಯ್', 'ಗುಡ್ ಬೈ' ಮತ್ತು 'ಪ್ರಾಜೆಕ್ಟ್ ಕೆ' ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
Published by:Ashwini Prabhu
First published: