Allu arjun: ಈ ನಿರ್ದೇಶಕನ ಸಂಭಾವನೆ ಕೇಳಿ ಶಾಕ್ ಆದ ತೆಲುಗು ನಟ ಅಲ್ಲು ಅರ್ಜುನ್!

ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಒಂದು ಚಿತ್ರದಲ್ಲಿ ನಟಿಸಲು ಎಷ್ಟು ಸಂಭಾವನೆ ತೆಗೆದು ಕೊಳ್ಳುತ್ತಾರೆಯೋ, ಒಂದೆರಡು ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ ಆ ಸಂಭಾವನೆಯು ದುಪ್ಪಟ್ಟಾಗುವುದಂತೂ ನಿಜ. ಇಷ್ಟೇ ಅಲ್ಲದೆ ನಿರ್ದೇಶಕರು, ನಿರ್ಮಾಪಕರು ಸಹ ನಟ, ನಟಿಯರ ಚಿತ್ರಗಳ ಕಾಲ್ ಶೀಟ್ ಗಾಗಿ ಕಾತುರತೆಯಿಂದ ಕಾಯುತ್ತಿರುತ್ತಾರೆ ಮತ್ತು ನಟ, ನಟಿಯರ ಸಂಭಾವನೆ ಜನಪ್ರಿಯತೆಗೆ ತಕ್ಕಂತೆ ಹಾಗೆಯೇ ಜಾಸ್ತಿ ಮಾಡಿಕೊಳ್ಳುತ್ತಾರೆ.

ತೆಲುಗು ನಟ ಅಲ್ಲು ಅರ್ಜುನ್

ತೆಲುಗು ನಟ ಅಲ್ಲು ಅರ್ಜುನ್

  • Share this:
ಸಾಮಾನ್ಯವಾಗಿ ಚಲನಚಿತ್ರೋದ್ಯಮದಲ್ಲಿ (film industry) ಯಾವುದಾದರೂ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣವನ್ನು ಗಳಿಸಿದರೆ, ಆ ಚಿತ್ರದ ನಟ (Actor) ಮತ್ತು ನಟಿಯರು (Actress) ಅವರ ಸಂಭಾವನೆಯನ್ನು ಜಾಸ್ತಿ ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಚಿತ್ರರಂಗಕ್ಕೆ (Cinema) ಬಂದ ಹೊಸತರಲ್ಲಿ ಒಂದು ಚಿತ್ರದಲ್ಲಿ ನಟಿಸಲು ಎಷ್ಟು ಸಂಭಾವನೆ ತೆಗೆದು ಕೊಳ್ಳುತ್ತಾರೆಯೋ, ಒಂದೆರಡು ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ ಆ ಸಂಭಾವನೆಯು ದುಪ್ಪಟ್ಟಾಗುವುದಂತೂ ನಿಜ. ಇಷ್ಟೇ ಅಲ್ಲದೆ ನಿರ್ದೇಶಕರು, ನಿರ್ಮಾಪಕರು (Producers) ಸಹ ನಟ, ನಟಿಯರ ಚಿತ್ರಗಳ ಕಾಲ್ ಶೀಟ್ ಗಾಗಿ (Call Sheet) ಕಾತುರತೆಯಿಂದ ಕಾಯುತ್ತಿರುತ್ತಾರೆ ಮತ್ತು ನಟ, ನಟಿಯರ ಸಂಭಾವನೆ ಜನಪ್ರಿಯತೆಗೆ ತಕ್ಕಂತೆ ಹಾಗೆಯೇ ಜಾಸ್ತಿ ಮಾಡಿಕೊಳ್ಳುತ್ತಾರೆ.

ಚಿತ್ರದಿಂದ ಚಿತ್ರಕ್ಕೆ ತನ್ನ ಸಂಭಾವನೆಯನ್ನು ಏರಿಸಿಕೊಂಡ ನಿರ್ದೇಶಕ
ಆದರೆ ಇಲ್ಲೊಬ್ಬ ನಿರ್ದೇಶಕ, ಚಿತ್ರದಿಂದ ಚಿತ್ರಕ್ಕೆ ತನ್ನ ಒಂದು ಸಂಭಾವನೆಯನ್ನು ಹೇಗೆ ಏರಿಸಿಕೊಂಡಿದ್ದಾರೆ ನೋಡಿ. ಈ ನಿರ್ದೇಶಕನ ಸಂಭಾವನೆ ನೋಡಿ ಪ್ಯಾನ್ ಇಂಡಿಯಾ ಚಿತ್ರವಾದ ಪುಷ್ಪಾ: ದಿ ರೈಸ್ ಚಿತ್ರದ ನಟ ಅಲ್ಲು ಅರ್ಜುನ್ ಅವರೇ ಸ್ವತಃ ಶಾಕ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜರಾಣಿ ಸಿನೆಮಾದ ನಿರ್ದೇಶಕ ಅಟ್ಲೀ
ನಟ ಅಲ್ಲು ಅರ್ಜುನ್ ಅವರೇ ಈ ನಿರ್ದೇಶಕನ ಸಂಭಾವನೆ ಕೇಳಿ ಶಾಕ್ ಆಗಿದ್ದಾರೆ ಎಂದರೆ ಯಾರು ಆ ನಿರ್ದೇಶಕ ಅಂತ ತಿಳಿದುಕೊಳ್ಳಲು ನೀವು ತುಂಬಾನೇ ಕಾತುರರಾಗಿರಬೇಕಲ್ಲವೇ? ತಮಿಳು ಚಿತ್ರ ‘ರಾಜರಾಣಿ’ ಯೊಂದಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಅಟ್ಲೀ ಅವರು ಶೀಘ್ರದಲ್ಲಿಯೇ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರ ಮೆರ್ಸಲ್, ಥೇರಿ ಮತ್ತು ಬಿಕಿಲ್ ಸೇರಿದಂತೆ ಎಲ್ಲಾ ಚಲನಚಿತ್ರಗಳನ್ನು ವಿಮರ್ಶಾತ್ಮಕವಾಗಿ ಮತ್ತು ಆರ್ಥಿಕವಾಗಿ ಅಭಿಮಾನಿಗಳು ತುಂಬಾ ಚೆನ್ನಾಗಿಯೇ ಸ್ವಾಗತಿಸಿದರು ಎಂದು ಹೇಳಬಹುದು.

ಅತ್ಯನ್ತಹ ಬೇಡಿಕೆ ಇರುವ ನಿರ್ದೇಶಕ
ಆದಾಗ್ಯೂ, ಅವರ ಚಿತ್ರಗಳ ಯಶಸ್ಸಿನ ನಂತರ ಈಗ ಅವರು ಬಾಲಿವುಡ್ ನ ಕಿಂಗ್ ಖಾನ್ ಎಂದೇ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಅವರೊಂದಿಗೆ ಚಿತ್ರ ಮಾಡುತ್ತಿದ್ದಾರೆ. ಅಟ್ಲೀ ತುಂಬಾ ಬೇಡಿಕೆಯಲ್ಲಿರುವ ನಿರ್ದೇಶಕ ಎಂದರೆ ತಪ್ಪಾಗುವುದಿಲ್ಲ. ವರದಿಗಳ ಪ್ರಕಾರ, ನಿರ್ದೇಶಕರು ಇತ್ತೀಚೆಗೆ ಪುಷ್ಪಾ ಖ್ಯಾತಿಯ ಅಲ್ಲು ಅರ್ಜುನ್ ಅವರೊಂದಿಗೆ ಒಂದು ಯೋಜನೆಗಾಗಿ (ಚಲನ ಚಿತ್ರ) ಮಾತುಕತೆ ನಡೆಸುತ್ತಿದ್ದರು.

ಇದನ್ನೂ ಓದಿ:  Nabha Natesh: ವಜ್ರಕಾಯ ಬೆಡಗಿಯ​ ಹೊಸ ಲುಕ್, ಸೀರೆಯಲ್ಲಿ ಮಿಂಚಿದ ನಭಾ ನಟೇಶ್

ಈಗ, ಚಲನಚಿತ್ರ ನಿರ್ಮಾಪಕರ ಭಾರಿ ಸಂಭಾವನೆ ನಟನಿಗೆ ಆಘಾತವನ್ನುಂಟು ಮಾಡಿದೆ ಮತ್ತು ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತವೆ. ಅಟ್ಲೀ ತನ್ನ ಶುಲ್ಕವಾಗಿ 35 ಕೋಟಿ ರೂಪಾಯಿಗಳನ್ನು ಕೇಳಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಈ ಸುದ್ದಿಯ ಬಗ್ಗೆ ಯಾವುದೇ ದೃಢೀಕರಣವಿಲ್ಲ.

ಈ ಹಿಂದೆ, ಪುಷ್ಪಾ ಚಿತ್ರದ ನಟ ಅಲ್ಲು ಅರ್ಜುನ್ ಅವರು ನಿರ್ದೇಶಕ ಅಟ್ಲೀ ಅವರೊಂದಿಗೆ ಪ್ಯಾನ್ ಇಂಡಿಯಾ ಯೋಜನೆಯಲ್ಲಿ ಕೆಲಸ ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ತಮಿಳು ಹಿಟ್ ಚಿತ್ರಗಳಾದ 2.0, ಕತ್ತಿ ಮತ್ತು ದರ್ಬಾರ್ ಚಿತ್ರಗಳಿಗೆ ಹಣ ಹೂಡಿಕೆ ಮಾಡಿದ ಲೈಕಾ ಪ್ರೊಡಕ್ಷನ್ಸ್ ಅವರು ಈ ಹೊಸ ಯೋಜನೆಯಲ್ಲಿಯೂ ಹಣವನ್ನು ಹೂಡಿಕೆ ಮಾಡುತ್ತದೆ ಎಂದು ಹೇಳಲಾಗುತ್ತಿತ್ತು.

ಪುಷ್ಪಾ: ದಿ ರೈಸ್ ಚಿತ್ರದ ಯಶಸ್ಸು
ಪುಷ್ಪಾ: ದಿ ರೈಸ್ ಚಿತ್ರದ ಯಶಸ್ಸಿನ ನಂತರ ನಟ ಅಲ್ಲು ಅರ್ಜುನ್ ಅವರ ಸಂಭಾವನೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ವರದಿಗಳ ಪ್ರಕಾರ, ಲೈಕಾ ಪ್ರೊಡಕ್ಷನ್ ಹೌಸ್ ಅವರು ನಟ ಅಲ್ಲು ಅರ್ಜುನ್ ಗೆ 100 ಕೋಟಿ ರೂಪಾಯಿಗಳ ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Bharati Singh: ಕಾಮಿಡಿಯನ್​ ಭಾರತಿ ಸಿಂಗ್​ ವಿರುದ್ಧ ಎಫ್​ಐಆರ್​ - ಸಿಖ್​ ಸಮುದಾಯದ ಭಾವನೆಗೆ ಧಕ್ಕೆ ತಂದ ಆರೋಪ

ಏತನ್ಮಧ್ಯೆ, ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಅಟ್ಲೀ ಅವರ ಮುಂದಿನ ಚಿತ್ರದ ಅಪ್‌ಡೇಟ್ ಗಳಿಗಾಗಿ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಲಯನ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಶಾರುಖ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟಿ ನಯನತಾರಾ ಒಬ್ಬ ಮಹಿಳಾ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿರುವುದರಿಂದ ಈ ಚಿತ್ರವು ಹೆಚ್ಚು ನಿರೀಕ್ಷಿತವಾಗಿದೆ.
Published by:Ashwini Prabhu
First published: