ಬಿ-ಟೌನ್ ಬೆಳ್ಳಿ ಪರದೆ ಮೇಲೆ ಮಿಂಚಲಿರುವ ಲಾಲೂ ಪ್ರಸಾದ್​ ಮಗ ತೇಜ್​ ಪ್ರತಾಪ್​ ಯಾದವ್​

news18
Updated:June 28, 2018, 4:51 PM IST
ಬಿ-ಟೌನ್ ಬೆಳ್ಳಿ ಪರದೆ ಮೇಲೆ ಮಿಂಚಲಿರುವ ಲಾಲೂ ಪ್ರಸಾದ್​ ಮಗ ತೇಜ್​ ಪ್ರತಾಪ್​ ಯಾದವ್​
news18
Updated: June 28, 2018, 4:51 PM IST
ನ್ಯೂಸ್​ 18 ಕನ್ನಡ 

ಆರ್​ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್​ ಯಾದವ್​ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್‍ನಲ್ಲಿ ಸಿದ್ಧಗೊಳ್ಳುತ್ತಿರುವ 'ರುದ್ರ' ಎಂಬ ಚಿತ್ರದಲ್ಲಿ ತೇಜ್ ಅಭಿನಯಿಸುತ್ತಿದ್ದಾರೆ.

29 ವರ್ಷದ ತೇಜ್​ ಮಾಜಿ ಸಚಿವ ಹಾಗೂ ಲಾಲೂ ಅವರ ದೊಡ್ಡ ಮಗ. ಈ ಚಿತ್ರದ ಫಸ್ಟ್ ಲುಕ್ಕನ್ನು ತೇಜ್​  ತಮ್ಮ ಟ್ವಿಟ್ಟರ್ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ನೀಲಿ ಬಣ್ಣದ ಪೋಸ್ಟರ್​ನಲ್ಲಿ ಗಾಗಲ್​ ತೊಟ್ಟು ರಗಡ್​ ಲುಕ್​ನಲ್ಲಿ ತೇಜ್​ ಕಾಣಿಸಿಕೊಂಡಿದ್ದಾರೆ.

ತೇಜ್​ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ಬರುತ್ತಿಲ್ಲ. 2016ರಲ್ಲಿ ಭೋಜ್​ಪುರಿ ಸಿನಿಮಾದಲ್ಲಿ ಬಿಹಾರದ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದರು. ಕಳೆದ ತಿಂಗಳಷ್ಟೆ ತೇಜ್​ ವಿವಾಹವಾಗಿದ್ದಾರೆ.

 
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ