ರಕ್ಷಿತ್​ ಶೆಟ್ಟಿ ಕಿರಿಕ್​ಗೆ ಬೇಸತ್ತ ಟೆಕ್ಕಿ; ಸ್ಯಾಂಡಲ್​ವುಡ್​ ನಟನ ವಿರುದ್ಧ ಯಾಕೆ ಈ ಆಕ್ರೋಶ?

news18
Updated:August 9, 2018, 10:55 AM IST
ರಕ್ಷಿತ್​ ಶೆಟ್ಟಿ ಕಿರಿಕ್​ಗೆ ಬೇಸತ್ತ ಟೆಕ್ಕಿ; ಸ್ಯಾಂಡಲ್​ವುಡ್​ ನಟನ ವಿರುದ್ಧ ಯಾಕೆ ಈ ಆಕ್ರೋಶ?
news18
Updated: August 9, 2018, 10:55 AM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಆ.09): ಕಿರಿಕ್​ ಪಾರ್ಟಿಯ ಮೂಲಕ ಜನರಿಗೆ ಆಪ್ತರಾಗಿದ್ದ ಸ್ಯಾಂಡಲ್​ವುಡ್​ ನಟ ರಕ್ಷಿತ್​ ಈಗ ರಸ್ತೆಯಲ್ಲಿ ಕಿರಿಕ್​ ಮಾಡಿ ಜನರಿಗೆ ಸಂಕಷ್ಟ ತಂದಿದ್ದಾರೆ.  ರಕ್ಷಿತ್​ ಶೆಟ್ಟಿಯ ಕಿರಿಕ್​ ಬೇಸತ್ತ ಟೆಕ್ಕಿ ಕೂಡ ಗರಂ ಆಗಿದ್ದು, ನಟರಾದ ಮಾತ್ರಕ್ಕೆ ಹೀಗೆಲ್ಲಾ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.

ನಟ ರಕ್ಷಿತ್​ ಶೆಟ್ಟಿ ತಮ್ಮ ಕಾರನ್ನು​ ಪ್ರತಿನಿತ್ಯ ನೋ ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದವರಿಗೆ ಕಿರಿಕಿರಿಯಾಗುತ್ತಿದೆ ಎಂದು ಆರೋಪಿ ಟೆಕ್ಕಿ ಧನಂಜಯ ಪದ್ಮನಾಭಾಚಾರ್ಯಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಜೆಪಿನಗರದ 6ನೇ ಹಂತದ 28 ರಸ್ತೆಯಲ್ಲಿ ರಕ್ಷಿತ್​ ತಮ್ಮ ಕಾರ್​ ನಿಲ್ಲಿಸುತ್ತಿದ್ದಾರೆ. ಈ ರಸ್ತೆ ಕಿರಿದಾಗಿದ್ದು, ಇಲ್ಲಿ ಯಾವುದೇ ಕಾರು ನಿಲ್ಲಿಸಬಾರದು ಎಂದು ಟ್ರಾಫಿಕ್​ ಪೊಲೀಸರು ಕೂಡ ನೋ ಪಾರ್ಕಿಂಗ್​ ಫಲಕ ಹಾಕಿದ್ದಾರೆ. ಆದರೆ ರಕ್ಷಿತ್​ ಪತ್ರಿನಿತ್ಯ ಈ ಸ್ಥಳದಲ್ಲಿ ಕಾರ್​ ನಿಲ್ಲಿಸುತ್ತಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಈ ಬಗ್ಗೆ ಎರಡು ಮೂರು ಬಾರಿ ಕಾರ್​ ತೆಗೆಯುವಂತೆ ಹೇಳಿದರು. ಪದೇ ಪದೇ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಕಾರ್​ ಚಾಲಕನಿಗೆ ನಾನು ಕೂಡ ಎರಡು ಮೂರು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಕಾನೂನು ಪಾಲನೆ ಕೇವಲ ಜನಸಾಮಾನ್ಯರಿಗೆ ಮಾತ್ರವೇ. ನಟರು ಈ ನಿಯಮಕ್ಕೆ ಒಡಪಡುವುದಿಲ್ಲವಾ ಎಂದು ಕೂಡ ಪ್ರಶ್ನಿಸಿದ್ದಾರೆ, ಸಿನಿಮಾ ನಾಯಕ ನಟರು. ನಿಜ ಜೀವನದಲ್ಲಿಯೂ ನಾಯಕರಾಗಿ ವರ್ತಿಸಬೇಕು. ಕಾನೂನು ನಿಯಮಗಳಿಗೆ ಬದ್ದರಾಗಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.
Loading...

ಜನಸಾಮಾನ್ಯನಾಗಿ ನನ್ನ ಕರ್ತವ್ಯ ಮಾಡಿದ್ದು, ಮುಂದಿನ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.  ಇನ್ನು ಟೆಕ್ಕಿಯ ಈ ಪೋಸ್ಟ್​ ವೈರಲ್​ ಆಗಿದ್ದು, ರಕ್ಷಿತ್​ ಶೆಟ್ಟಿ ಇನ್ನಾದರೂ ಎಚ್ಚೆತ್ತು ಕೊಳ್ಳುತ್ತಾರಾ ಕಾದು ನೋಡಬೇಕಿದೆ.

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...