Cobra Teaser: ವಿಕ್ರಮ್ vs ಇರ್ಫಾನ್: ಸಿನಿರಂಗದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಿದ ಪಠಾಣ್

irfan pathan, Chiyaan Vikram

irfan pathan, Chiyaan Vikram

ಇರ್ಫಾನ್ ಪಠಾಣ್ ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳಿಂದ 1105 ರನ್, 100 ವಿಕೆಟ್‌ ಕಬಳಿಸಿದ್ದಾರೆ. ಹಾಗೆಯೇ 120 ಏಕದಿನ ಪಂದ್ಯಗಳನ್ನಾಡಿರುವ ಪಠಾಣ್ 1544 ರನ್ ಬಾರಿಸಿ, 173 ವಿಕೆಟ್‌ ಉರುಳಿಸಿದ್ದರು.

  • Share this:

ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಈ ಹಿಂದೆಯೇ ಹರಿದಾಡಿತ್ತು. ಅವರ ಪಾತ್ರವೇನು? ಆ ಚಿತ್ರ ಯಾವುದು? ಎಂಬಿತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಅಪ್​ಡೇಟ್​ಗಳು ಹೊರಬಿದ್ದಿರಲಿಲ್ಲ. ಇದಾಗ್ಯೂ ಕಾಲಿವುಡ್​ನ ಖ್ಯಾತ ನಟ ವಿಕ್ರಮ್ ಚಿತ್ರದಲ್ಲಿ ಪಠಾಣ್ ಬಣ್ಣ ಹಚ್ಚಿದ್ದಾರೆ ಎನ್ನಲಾಗಿತ್ತು. ಇದೀಗ ವಿಕ್ರಮ್-ಇರ್ಫಾನ್ ಅಭಿನಯದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅದರೊಂದಿಗೆ ಟೀಮ್ ಇಂಡಿಯಾ ಎಡಗೈ ವೇಗಿ ಕಾಲಿವುಡ್​ಗೆ ಎಂಟ್ರಿ ಕೊಟ್ಟಂತಾಗಿದೆ.


ಹೌದು, ತಮಿಳಿನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್ ಕಾಣಿಸಿಕೊಂಡಿದ್ದಾರೆ. ಅಜಯ್ ಜ್ಞಾನಮುತ್ತು ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಕ್ರಮ್ ನಾನಾ ಅವತಾರದಲ್ಲಿ ಕಾಣಿಸಿಕೊಂಡರೆ, ಅವರನ್ನು ಬೆನ್ನತ್ತುವ ಇಂಟರ್​ಪೋಲ್ ಆಫೀಸರ್ ಪಾತ್ರದಲ್ಲಿ ಇರ್ಫಾನ್ ಪಠಾಣ್ ಬಣ್ಣ ಹಚ್ಚಿದ್ದಾರೆ.


ಭಾರತ-ಹಾಗೂ ವಿದೇಶದಲ್ಲಿ ಚಿತ್ರದ ಕಥೆ ನಡೆಯಲಿದ್ದು, ಪಠಾಣ್ ಭಾರತೀಯ ಮೂಲದ ಟರ್ಕಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.ಸದ್ಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿರುವ ಇರ್ಫಾನ್ ಪಠಾಣ್ ಬಣ್ಣದ ಲೋಕದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲಿದ್ದು, ಇದು ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.
ಇರ್ಫಾನ್ ಪಠಾಣ್ ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳಿಂದ 1105 ರನ್, 100 ವಿಕೆಟ್‌ ಕಬಳಿಸಿದ್ದಾರೆ. ಹಾಗೆಯೇ 120 ಏಕದಿನ ಪಂದ್ಯಗಳನ್ನಾಡಿರುವ ಪಠಾಣ್ 1544 ರನ್ ಬಾರಿಸಿ, 173 ವಿಕೆಟ್‌ ಉರುಳಿಸಿದ್ದರು. ಇನ್ನು 24 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 172 ರನ್ ಹಾಗೂ 28 ವಿಕೆಟ್ ಪಡೆಯಲು ಯಶಸ್ವಿಯಾಗಿದ್ದರು. ಅದರಲ್ಲೂ 2007 ರಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಪಠಾಣ್ ಪ್ರಮುಖ ಪಾತ್ರವಹಿಸಿದ್ದರು.

top videos
    First published: