'ವರಥನ್' : ಕುತೂಹಲ ಮೂಡಿಸುತ್ತಿರುವ ಮಲಯಾಳಂ ಚಿತ್ರದ ಟೀಸರ್

news18
Updated:July 14, 2018, 7:47 PM IST
'ವರಥನ್' : ಕುತೂಹಲ ಮೂಡಿಸುತ್ತಿರುವ ಮಲಯಾಳಂ ಚಿತ್ರದ ಟೀಸರ್
news18
Updated: July 14, 2018, 7:47 PM IST
-ನ್ಯೂಸ್ 18 ಕನ್ನಡ

ಮಾಲಿವುಡ್​ ಚಿತ್ರರಂಗದ ಸ್ಟೈಲಿಸ್ಟ್​ ನಿರ್ದೇಶಕ ಅಮಲ್ ನೀರದ್ ನಿರ್ದೇಶನದ 'ವರಥನ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. 'ಬ್ಯಾಂಗಲೂರ್ ಡೇಸ್' ಖ್ಯಾತಿಯ ಫಹಾದ್ ಫಾಸಿಲ್ ನಾಯಕ ನಟನಾಗಿರುವ ಈ ಸಿನಿಮಾವನ್ನು ನಟಿ ನಜ್ರಿಯಾ ನಜೀಮ್ ನಿರ್ಮಾಣ ಮಾಡುತ್ತಿದ್ದಾರೆ.

'ಐಯೊಬಿಂಟೆ ಪುಸ್ತಕಂ' ಚಿತ್ರದ ಬಳಿಕ ನಟ ಫಹಾದ್ ಮತ್ತು ಅಮಲ್ ನೀರದ್ 'ವರಥನ್'ನಲ್ಲಿ ಜೊತೆಯಾಗಿರುವುದು ಭಾರೀ ನಿರೀಕ್ಷೆಗೆ ಕಾರಣವಾಗಿದೆ. ಕಳೆದ ಬಾರಿ 'CIA' ಎಂಬ ಸಾಧಾರಣ ಚಿತ್ರ ನೀಡಿದ್ದ ನಿರ್ದೇಶಕ ಅಮಲ್ ಈ ಬಾರಿ ವಿಭಿನ್ನ ಕಥೆಯನ್ನು ಆರಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರದ ಟೀಸರ್​ನಲ್ಲೂ ಕಥೆಯ ಎಳೆಯನ್ನು ಬಿಟ್ಟುಕೊಡದೇ ಕುತೂಹಲವನ್ನು ಕಾಪಾಡಿಕೊಂಡಿದ್ದಾರೆ.


'ವರಥನ್' ಎಂದರೆ ಹೊರಗಿನವನು ಎಂಬ ಅರ್ಥವಿದ್ದು, ಚಿತ್ರದಲ್ಲಿ ಫಹಾದ್ ಹಳೆಯ ಕಾಲದ ವರ್ಚುವಲ್ ರಿಯಾಲಿಟಿ ಗ್ಲಾಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ 'ಮಾಯಾನದಿ' ಖ್ಯಾತಿಯ ಐಶ್ವರ್ಯ ಲಕ್ಷ್ಮಿ ಅಭಿನಯಿಸಿದ್ದಾರೆ. ಸುಹಾನ್-ಶರಫ್ ಕಥೆ ಬರೆದಿರುವ ಈ ಚಿತ್ರಕ್ಕೆ ಸಂಗೀತ ನೀಡಿರುವುದು ಸುಶಿನ್ ಶ್ಯಾಮ್.

'ವರಥನ್' ಸಿನಿಮಾದ ಟೀಸರ್ ಈಗಾಗಲೇ ಮಲಯಾಳಂ ಸಿನಿಪ್ರಿಯರನ್ನು ಮೋಡಿ ಮಾಡಿದ್ದು, 'ಬಿಗ್​ ಬಿ' ಚಿತ್ರದಂತೆ ಮತ್ತೊಮ್ಮೆ ಅಮಲ್ ನೀರದ್ 'ವರಥನ್' ಮೂಲಕ ಕಮಾಲ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...