ಕಾಲಿವುಡ್ನ (Kollywood) ಬಹುನಿರೀಕ್ಷಿತ ಸಿನಿಮಾ ಲಿಯೋ (Leo) ಅಪ್ಡೇಟ್ ಬಗ್ಗೆ ಅಭಿಮಾನಿಗಳು (Fans) ಥ್ರಿಲ್ನಲ್ಲಿದ್ದಾರೆ. ಆದರೆ ಈಗ ಚಿತ್ರತಂಡ ಜಮ್ಮು ಕಾಶ್ಮೀರದಲ್ಲಿ (Jammu Kashmir) ಶೂಟಿಂಗ್ (Shooting) ಮಾಡುತ್ತಿದ್ದು ಅದೇ ಪ್ರದೇಶದಲ್ಲಿ ಭೂಕಂಪವಾಗಿದೆ (Earthquake). ಅಫ್ಘಾನಿಸ್ತಾನದ (Afghanistan) ನಂತರ ಇದೀಗ ಭಾರತದಲ್ಲಿ ಕೂಡಾ ಭೂಕಂಪ ಅನುಭವವಾಗಿದೆ. ವಿಜಯ್ (Vijay)ಅಭಿನಯದ ಮುಂದಿನ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ (Action Thriller) ಲಿಯೋ ಶೂಟಿಂಗ್ ಪ್ರಗತಿಯಲ್ಲಿದೆ. ಕಳೆದ ಕೆಲವು ವಾರಗಳಿಂದ ಜಮ್ಮು ಕಾಶ್ಮೀರದಲ್ಲಿ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಆದರೆ ಮಂಗಳವಾರ 6.5 ಮಾಗ್ನಿಟ್ಯೂಡ್ನಲ್ಲಿ ಅಫ್ಘಾನಿಸ್ತಾನದಲ್ಲಿ ಭೂಕಂಪವಾದ ನಂತರ ಅದರ ಪರಿಣಾಮ ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಕಂಡುಬಂತು. ಜಮ್ಮು ಕಾಶ್ಮೀರ, ದೆಹಲಿ (Delhi) ಸೇರಿ ಹಲವು ಪ್ರದೇಶದಲ್ಲಿ ಭೂಕಂಪ ಅನುಭವವಾಗಿದೆ.
ಕಾಶ್ಮೀರದಲ್ಲಿ ಭೂಕಂಪ ಅನುಭವವಾಗಿದ್ದು ಅಲ್ಲಿಯೇ ಚಿತ್ರತಂಡವೂ ಶೂಟಿಂಗ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿಜಯ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಚಿತ್ರತಂಡ ಸೇಫ್ ಆಗಿದೆಯೇ ಎಂದು ಭಯಗೊಂಡಿದ್ದರು ಜನ. ಆ ನಂತರ ಲಿಯೋ ಟೀಮ್ ಟ್ವಿಟರ್ನಲ್ಲಿ ತಾವು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ. ಚಂದ್ರಮುಖಿ ಸಿನಿಮಾದಲ್ಲಿ ವಡಿವೇಲು ಜಿಫ್ ಶೇರ್ ಮಾಡಿದ ಚಿತ್ರತಂಡ ತಾವು ಸೇಫ್ ಎಂದು ತಿಳಿಸಿದ್ದಾರೆ. ನಾವು ಸೇಫಾಗಿದ್ದೇವೆ ಗೆಳೆಯ. ಟೀಮ್ ಲಿಯೋ ಎಂದು ಬರೆದಿದ್ದಾರೆ.
We are safe nanba 😇
- Team #LEO pic.twitter.com/WAOeiP94uM
— Seven Screen Studio (@7screenstudio) March 21, 2023
ಕೆಲವು ವಾರಗಳ ಹಿಂದೆ ನಟ ಸಂಜಯ್ ದತ್ ಅವರು ಲಿಯೋ ತಂಡವನ್ನು ಸೇರಿಕೊಂಡಿದ್ದಾರೆ. ಇದರಲ್ಲಿ ಸಂಜೂ ಮೈನ್ ವಿಲನ್ ಆಗಿ ನಟಿಸಿದ್ದಾರೆ. ಇದು ಸಂಜಯ್ ದತ್ ಅವರ ಮೊದಲ ತಮಿಳು ಸಿನಿಮಾ ಎನ್ನುವುದು ವಿಶೇಷ. ಇದು ಸಂಜಯ್ ದತ್ ಅವರಿಗೆ ಕೆಜಿಎಫ್ 2 ನಂತರ ದೊಡ್ಡ ಸೌತ್ ರಿಲೀಸ್ ಆಗಿರಲಿದೆ.
ಏಪ್ರಿಲ್ನಲ್ಲಿ ಚೆನ್ನೈಗೆ ಮರಳಲಿದೆ ಚಿತ್ರತಂಡ
ಚಿತ್ರತಂಡ ಕಾಶ್ಮೀರದಲ್ಲಿ ಶೂಟಿಂಗ್ ಮಾಡುತ್ತಿದ್ದು ಏಪ್ರಿಲ್ನಲ್ಲಿ ಚಿತ್ರೀಕರಣ ಮುಗಿಸಲಿದೆ. ನಂತರ ಚಿಕ್ಕ ಬ್ರೇಕ್ಗಾಗಿ ಚೆನ್ನೈಗೆ ಬರಲಿದೆ. ಇದೀಗ ಹೈದರಾಬಾದ್ನಲ್ಲಿ ಚಿತ್ರೀಕರಣಕ್ಕಾಗಿ ಏರ್ಪೋರ್ಟ್ ಸೆಟ್ ಹಾಕಲಾಗುತ್ತಿದೆ.
ಲಿಯೋ ಡೈರೆಕ್ಟರ್ ಲೋಕೇಶ್ ಕನಕರಾಜ್ ಅವರು ಲಿಯೋ ಒಂದು ಗ್ಯಾಂಗ್ಸ್ಟರ್ ಸಿನಿಮಾ ಎಂದು ದೃಢಪಡಿಸಿದ್ದಾರೆ. ಆದರೆ ಅವರು ಮಾಡುತ್ತಿರುವ ಸಿರೀಸ್ ಸಿನಿಮಾಗಳ ಸಾಲಿಗೆ ಸೇರುವುದಿಲ್ಲ ಎಂದು ತಮಿಳು ನಿರ್ದೇಶಕ ಸ್ಪಷ್ಟಪಡಿಸಿದ್ದಾರೆ. ಎಲ್ಸಿಯು (ಲೋಕೇಶ್ ಸಿನಿಮಾಟಿಕ್ ಯುನಿವರ್ಸ್) ಎಂದು ಕರೆಯಲ್ಪಡುವ ಸಿನಿಮಾ ಸಿರೀಸ್ಗಳು ವಿಕ್ರಮ್ ಮೂಲಕ ಶುರುವಾಗಿದೆ.
ಲಿಯೋ ಸಿನಿಮಾ ಮುಗಿಸಿದ ನಂತರ ನಿರ್ದೇಶಕ ಕನಕರಾಜ್ ಅವರು ಕಾರ್ತಿ ಜೊತೆ ಖೈದಿ 2 ಸಿನಿಮಾವನ್ನು ಮಾಡಲಿದ್ದಾರೆ. ಕೈದಿಯಲ್ಲಿ ಕಾರ್ತಿ ಜೈಲಿನಲ್ಲಿರುವ ಖೈದಿಯಾಗಿ ಕಾಣಿಸಿಕೊಂಡಿದ್ದಾರೆ. ಮಗಳನ್ನು ಭೇಟಿ ಮಾಡಲು ಪರೋಲ್ನಲ್ಲಿ ಹೊರಬರುವ ಖೈದಿ ಕಾರ್ತಿಯ ಕಥೆ ಇದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ