• Home
  • »
  • News
  • »
  • entertainment
  • »
  • TCL In December: ಡಿಸೆಂಬರ್​​ನಲ್ಲಿ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4, ಬ್ಯಾಟ್-ಬಾಲ್ ಹಿಡಿದು ರಿಲ್ಯಾಕ್ಸ್ ಆಗೋಕೆ ಸಜ್ಜು

TCL In December: ಡಿಸೆಂಬರ್​​ನಲ್ಲಿ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4, ಬ್ಯಾಟ್-ಬಾಲ್ ಹಿಡಿದು ರಿಲ್ಯಾಕ್ಸ್ ಆಗೋಕೆ ಸಜ್ಜು

ಟೆಲಿವಿಷನ್ ಕ್ರಿಕೆಟ್ ಲೀಗ್

ಟೆಲಿವಿಷನ್ ಕ್ರಿಕೆಟ್ ಲೀಗ್

ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಟೆಲಿವಿಷನ್ ಕ್ರಿಕೆಟ್ ಲೀಗ್ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.

  • News18 Kannada
  • Last Updated :
  • Karnataka, India
  • Share this:

    ಧಾರಾವಾಹಿ (Serials) ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ (TCL) ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಟೆಲಿವಿಷನ್ ಕ್ರಿಕೆಟ್ ಲೀಗ್ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ (December) ನಲ್ಲಿ ಆರಂಭವಾಗಲಿದೆ. ವಾಸವಿ ವೆಂಚರ್ಸ್ ನಡಿ ದೀಪಕ್, ಮಂಜೇಶ್, ದಿವ್ಯ ಪ್ರಸಾದ್ ನೇತೃತ್ವದಲ್ಲಿ ನಡೆಯುವ ಟಿಸಿಎಲ್ ಈಗಾಗಲೇ ಮೂರು ಸೀಸನ್ ಯಶಸ್ವಿಯಾಗಿ ಪೂರೈಸಿದ್ದು, ನಾಲ್ಕನೇ ಸೀಸನ್ ಗೆ ಸಕಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈ ಬಾರಿ ಒಟ್ಟು ಆರು ತಂಡಗಳಿರಲಿವೆ (6 Teams). ಪ್ರತಿ ತಂಡಕ್ಕೂ ಸೆಲೆಬ್ರೆಟಿ ಅಂಬಾಸಿಡರ್ ಇರಲಿದ್ದು, ಒಂದೊಂದು ತಂಡಕ್ಕೆ ಮೂರು ಜನ ಅಂಬಾಸಿಡರ್ ಇರಲಿದ್ದಾರೆ.


    ಟಿಸಿಎಲ್ ನಲ್ಲಿ ಆರು ತಂಡಗಳು
    ಟಿಸಿಎಲ್ ನಲ್ಲಿ 6 ತಂಡಗಳಿವೆ. ಗ್ಯಾಂಗ್ ಗರುಡಾಸ್, ಗಜಪಡೆ ವಾರಿಯರ್ಸ್, ಚಾಂಪಿಯನ್ ಚೀತಾಸ್, ಜಟಾಯು ಜಯಂಟ್ಸ್, ಕ್ರೇಜಿ ಕಿಲ್ಲರ್ಸ್, ರೋರಿಂಗ್ ಲಯನ್ಸ್ ಎಂದು ತಂಡಗಳಿಗೆ ಹೆಸರಿಡಲಾಗಿದೆ. ಮಾಸ್ಟರ್ ಆನಂದ್, ಕಿರಿಕ್ ಕೀರ್ತಿ, ವಿವಾನ್ ಸುನೀಲ್, ಹೇಮಂತ್, ಹರ್ಷ ಸಿ. ಎಂ ಗೌಡ, ಅರ್ಜುನ್ ಯೋಗಿ ತಂಡಗಳ ನಾಯಕತ್ವ ವಹಿಸಿಕೊಂಡಿದ್ದು,


    ಕಾರ್ತಿಕ್ ಮಹೇಶ್, ಹರೀಶ್ ಗೌಡ, ವಿಕಾಸ್, ಮಂಜು ಪಾವಗಡ, ಕರಿಬಸವ, ಶ್ರೀರಾಮ್ ಉಪನಾಯಕರಾಗಿದ್ದಾರೆ. ಆರು ತಂಡಗಳ ಮೂಲಕ ಒಟ್ಟು 110 ಕಿರುತೆರೆ ಕಲಾವಿದರು ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.


    ಪ್ರತಿ ತಂಡಕ್ಕೂ ಸೆಲೆಬ್ರೆಟಿ ಅಂಬಾಸಿಡರ್
    ಪ್ರತಿ ತಂಡಕ್ಕೂ ಸೆಲೆಬ್ರೆಟಿ ಅಂಬಾಸಿಡರ್ ಇರಲಿದ್ದು, ಒಂದೊಂದು ತಂಡಕ್ಕೆ ಮೂರು ಜನ ಅಂಬಾಸಿಡರ್ ಇರಲಿದ್ದಾರೆ. ವರ್ಷಿತಾ, ಅಮೂಲ್ಯ, ಅಕ್ಷಿತ ಗಜಪಡೆ ವಾರಿಯರ್ಸ್ ಗೆ ಅಂಬಾಸಿಡರ್, ಶುಭ ರಕ್ಷಾ, ಸುಶ್ಮಿತಾ ರುದ್ರೇಶ್, ಆಶಿಯಾ ರೋರಿಂಗ್ ಲಯನ್ಸ್ ಗೆ ಅಂಬಾಸಿಡರ್, ಯಶು, ಗಾನವಿ, ವಿಜಯಲಕ್ಷ್ಮಿ ಚಾಂಪಿಯನ್ ಚೀತಾಸ್ ಗೆ ಅಂಬಾಸಿಡರ್.


    tcl season 4, tcl season 4 grand opening in december, 6 teams in tcl, ಟಿಸಿಎಲ್ ಸೀಸನ್ 4, ಟಿಸಿಎಲ್ ಸೀಸನ್ 4 ಡಿಸೆಂಬರ್‌ನಲ್ಲಿ ಗ್ರ್ಯಾಂಡ್ ಓಪನಿಂಗ್, ಡಿಸೆಂಬರ್ ನಲ್ಲಿ ಕ್ರಿಕೆಟ್ ಲೀಗ್ ಸೀಸನ್ 4, ಬ್ಯಾಟ್-ಬಾಲ್ ಹಿಡಿದು ರಿಲಾಕ್ಸ್ ಆಗೋಕೆ ಸಜ್ಜು, kannada news, karnataka news,
    ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4


    ಪಲ್ಲವಿ ಗೌಡ, ದ್ರವ್ಯ ಶೆಟ್ಟಿ, ತನಿಶಾ ಕುಪ್ಪಂಡ ಗ್ಯಾಂಗ್ ಗರುಡಾಸ್ ಗೆ ಅಂಬಾಸಿಡರ್. ಶೃತಿ ರಮೇಶ್, ಸಾಕ್ಷಿ ಮೇಘನಾ, ಪೂಜಾ ಕ್ಷತ್ರಿಯ ಜಟಾಯು ಜಯಂಟ್ಸ್ ಅಂಬಾಸಿಡರ್. ಮೇಘಾ ಎಸ್. ವಿ, ಅನ್ವಿತಾ, ರಶ್ಮಿತಾ ಕ್ರೇಜಿ ಕಿಲ್ಲರ್ಸ್ ತಂಡಕ್ಕೆ ಅಂಬಾಸಿಡರ್ ಆಗಿರಲಿದ್ದಾರೆ.


    ಇದನ್ನೂ ಓದಿ: Bhagya Lakshmi: ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ? 


    ಯಾರ ಮಾಲೀಕತ್ವ?
    ಪ್ರೋ ವೈಟಲ್ ಹೆಲ್ತ್ ರೋರಿಂಗ್ ಲಯನ್ಸ್ ಗೆ ಮಾಲೀಕತ್ವ. ಡಾ. ಚೇತನಾ ಜಟಾಯು ಜಯಂಟ್ಸ್ ಗೆ ಮಾಲೀಕತ್ವ. ಪ್ರಧಾನ್ ಟಿವಿ ಚಾಂಪಿಯನ್ ಚೀತಾಸ್ ಗೆ ಮಾಲೀಕತ್ವ. ಡಿಜಿ ಇನ್ಫೋಟೆಕ್ ಕ್ರೇಜಿ ಕಿಲ್ಲರ್ಸ್ ಗೆ ಮಾಲೀಕತ್ವ. ಅಮ್ಮಾಸ್ ಫುಡ್ ಗ್ಯಾಂಗ್ ಗರುಡಾಸ್ ಮಾಲೀಕತ್ವ. ಕಿರೀಟಿ ವೆಂಚರ್ಸ್ ಗಜಪಡೆ ವಾರಿಯರ್ಸ್ ತಂಡದ ಮಾಲೀಕತ್ವ ಹೊಂದಿದ್ದಾರೆ.


    ಪ್ರತಿ ಬಾರಿಯಂತೆ ಈ ಬಾರಿಯೂ ಟ್ರಿಂಕೋ ಇನ್ಫ್ರಾ ಪ್ರೈವೆಟ್ ಲಿಮಿಟೆಡ್ ಟೈಟಲ್ ಸ್ಪಾನ್ಸರ್ ಮಾಡುತ್ತಿದೆ. 'ಟಿಸಿಎಲ್' ಮೂರು ಸೀಸನ್ ಯಶಸ್ವಿಯಾಗಿ ಜರುಗಿದ್ದು, ನಾಲ್ಕನೇ ಸೀಸನ್ ಕೂಡ ಯಶಸ್ವಿಗೊಳಿಸಲು ಸಕಲ ರೀತಿಯಲ್ಲೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಆಯೋಜಕರು.


    tcl season 4, tcl season 4 grand opening in december, 6 teams in tcl, ಟಿಸಿಎಲ್ ಸೀಸನ್ 4, ಟಿಸಿಎಲ್ ಸೀಸನ್ 4 ಡಿಸೆಂಬರ್‌ನಲ್ಲಿ ಗ್ರ್ಯಾಂಡ್ ಓಪನಿಂಗ್, ಡಿಸೆಂಬರ್ ನಲ್ಲಿ ಕ್ರಿಕೆಟ್ ಲೀಗ್ ಸೀಸನ್ 4, ಬ್ಯಾಟ್-ಬಾಲ್ ಹಿಡಿದು ರಿಲಾಕ್ಸ್ ಆಗೋಕೆ ಸಜ್ಜು, kannada news, karnataka news,
    ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4


    ಆಯೋಜಕರಾದ ದೀಪಕ್ ಹೇಳಿದ್ದೇನು?
    ಟಿಸಿಎಲ್ ಸೀಸನ್- 4 ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರಾದ ದೀಪಕ್, ನವೆಂಬರ್ ಕೊನೆಯಲ್ಲಿ ಟೆಲಿವಿಷನ್ ಕ್ರಿಕೆಟ್ ಲೀಗ್ ಲಾಂಚ್ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಲಾಂಚ್ ಈವೆಂಟ್ ನಲ್ಲಿ ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶವಿದೆ. ಸ್ಯಾಂಡಲ್ ವುಡ್ ಸೆಲೆಬ್ರೆಟಿಯಿಂದ 'ಟಿಸಿಲ್' ಲಾಂಚ್ ಕಾರ್ಯಕ್ರಮ ನಡೆಯಲಿದ್ದು ಡಿಸೆಂಬರ್ ನಲ್ಲಿ ಲೀಗ್ ಆರಂಭವಾಗಲಿದೆ.


    ಇದನ್ನೂ ಓದಿ: Radhika Pandith Trip: ಟ್ರಿಪ್ ಎಂಜಾಯ್ ಮಾಡ್ತಿರೋ 'ರಾಕಿಂಗ್' ದಂಪತಿ: ಐರಾ, ಯಥರ್ವ್​ಗೆ ಸಂಭ್ರಮ  


    ಹಿಂದಿನ ಸೀಸನ್ ಗಳಿಗಿಂತ ಅದ್ದೂರಿಯಾಗಿ ಈ ಸೀಸನ್ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ. ಎಲ್ಲಾ ಕಿರುತೆರೆ ವಾಹಿನಿಯ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದ್ದು ಕ್ರೀಡೆ ಜೊತೆಗೆ ಸ್ನೇಹವನ್ನು ಬೆಸೆಯುವ ಉದ್ದೇಶವನ್ನು 'ಟಿಸಿಎಲ್' ಹೊಂದಿದೆ ಎಂದು ದೀಪಕ್ ತಿಳಿಸಿದ್ದಾರೆ.

    Published by:Savitha Savitha
    First published: