TATA IPL: ಜಿಯೋ ಸಿನಿಮಾ ಹೊಸ ದಾಖಲೆ! 1300 ಕೋಟಿ ವೀಕ್ಷಣೆ

ಜಿಯೋ ಸಿನಿಮಾ ಹೊಸ ರೆಕಾರ್ಡ್

ಜಿಯೋ ಸಿನಿಮಾ ಹೊಸ ರೆಕಾರ್ಡ್

ಜಾಗತಿಕವಾಗಿ ಡಿಜಿಟಲ್ ಸ್ಪೋರ್ಟ್ಸ್ ವೀಕ್ಷಣೆ ಕ್ಷೇತ್ರದಲ್ಲಿ ಜಿಯೋ ಸಿನಿಮಾ 1300 ಕೋಟಿ ವೀಕ್ಷಣೆ ಪಡೆದಿದ್ದು ಹೊಸ ಮೈಲುಗಲ್ಲು ತಲುಪಿದೆ. ಮೊದಲ 5 ವಾರದಲ್ಲಿ ದಾಖಲೆಯ ವೀಕ್ಷಣೆಯನ್ನು ಪಡೆದು ರೆಕಾರ್ಡ್ ಸೆಟ್ ಮಾಡಿದೆ.

  • News18 Kannada
  • 4-MIN READ
  • Last Updated :
  • Mumbai, India
  • Share this:

ಮುಂಬೈ (ಮೇ.11): ಟಾಟಾ ಐಪಿಎಲ್ 2023ರ ಅಧಿಕೃತ ಡಿಜಿಟಲ್ ಪ್ರಸಾರ ಪಾಲುದಾರಿಕೆ ಹೊಂದಿರುವಂತಹ ಜಿಯೋ ಸಿನಿಮಾ (JioCinema) 1300 ಕೋಟಿ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಜಾಗತಿಕವಾಗಿ ಡಿಜಿಟಲ್ ಸ್ಪೋರ್ಟ್ಸ್ ವೀಕ್ಷಣೆ ಕ್ಷೇತ್ರದಲ್ಲಿ ಜಿಯೋ ಸಿನಿಮಾ 1300 ಕೋಟಿ ವೀಕ್ಷಣೆ ಪಡೆದಿದ್ದು ಹೊಸ ಮೈಲುಗಲ್ಲು ತಲುಪಿದೆ. ಮೊದಲ 5 ವಾರದಲ್ಲಿ ದಾಖಲೆಯ ವೀಕ್ಷಣೆಯನ್ನು ಪಡೆದು ರೆಕಾರ್ಡ್ ಸೆಟ್ ಮಾಡಿದೆ.


ವೀಕ್ಷಕರು JioCinema ನೀಡುವ ಅಭಿಮಾನಿ-ಕೇಂದ್ರಿತ ಪ್ರಸಾರಕ್ಕೆ ಫಿದಾ ಆಗಿದ್ದಾರೆ. ಪ್ರತಿ ಪಂದ್ಯಕ್ಕೆ ಪ್ರತಿ ವೀಕ್ಷಕರು ಕೊಟ್ಟ ಸಮಯದ ಸರಾಸರಿ 60 ನಿಮಿಷಗಳನ್ನು ಮುಟ್ಟಿದ್ದು ಕೂಡಾ ಗಮನಾರ್ಹವಾಗಿದೆ. TATA IPL 2023 ಎಚ್​ಡಿ ಟಿವಿಗಿಂತ ಎರಡು ಪಟ್ಟು ಹೆಚ್ಚು ವೀಕ್ಷಣೆಯನ್ನು ಕನೆಕ್ಟೆಡ್ ಟಿವಿಯಲ್ಲಿ ಪಡೆದಿದೆ.
ಪ್ರತಿವಾರ ಜಿಯೋ ಸಿನಿಮಾ ಬೆಳೆಯುತ್ತಲೇ ಇದೆ. ಟಾಟಾ ಐಪಿಎಲ್​ನ್ನು ಡಿಜಿಟಲ್​ನಲ್ಲಿ ನೋಡುವಾಗ ಪ್ರೇಕ್ಷಕರು ಜಿಯೋ ಸಿನಿಮಾವನ್ನೇ ಚೂಸ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದುವೆ ಸಾಕ್ಷಿ ಎಂದು ವಯಾಕಾಮ್18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.


ಅದ್ಭುತವಾದ ಕ್ರಿಕೆಟ್ ಆ್ಯಕ್ಷನ್ ಹಾಗೂ ನಮ್ಮ ಅದ್ಭುತ ಫ್ಲಾಟ್​ಫಾರ್ಮ್​ ಮೂಲಕ ವಿಶೇಷವಾದ ಓಪನಿಂಗ್ ಬರೀ ಆರಂಭ ಅಷ್ಟೆ. ಇನ್ನೂ ಸಾಕಷ್ಟು ಬರುವುದಿದೆ ಎಂದಿದ್ದಾರೆ. ನಮ್ಮ ಮೇಲೆ ನಂಬಿಕೆ ಇಟ್ಟು ನಮ್ಮೊಂದಿಗೆ ಸೇರಿಕೊಂಡಿದ್ದಕ್ಕೆ ನಾವು ನಮ್ಮೆಲ್ಲ ಸ್ಪಾನ್ಸರ್ಸ್​ಗಳಿಗೆ, ಜಾಹೀರಾತುದಾರರಿಗೆ, ಪಾಲುದಾರರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಾವು ಪ್ರತಿ ಅಭಿಮಾನಿಯ ಐಪಿಎಲ್ ಅನುಭವವನ್ನು ಇನ್ನಷ್ಟು ಸುಂದರವಾಗಿಸುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ: Jio Cinema: ಈ ಆ್ಯಪ್ ಇದ್ದರಷ್ಟೇ ಉಚಿತವಾಗಿ ಐಪಿಎಲ್ ನೋಡಬಹುದು! ಈಗ್ಲೇ ಡೌನ್​ಲೋಡ್​ ಮಾಡಿ


ಟಾಟಾ ಐಪಿಎಲ್​ ವೀಕ್ಷಣೆಯಲ್ಲಿ ಅತ್ಯಧಿಕ ವೀಕ್ಷರನ್ನು ಪಡೆದ ರೆಕಾರ್ಡ್​ನ್ನು ಜಿಯೋ ಸಿನಿಮಾ 5 ದಿನದ ಅವಧಿಯಲ್ಲಿ 2 ಸಲ ಬ್ರೇಕ್ ಮಾಡಿದೆ. ಏಪ್ರಿಲ್ 12ರಂದು ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್ ರಾಜಸ್ಥಾನ್ ರಾಯಲ್ ಮ್ಯಾಚ್ ಸಂದರ್ಭ ವೀಕ್ಷಕರ ಸಂಖ್ಯೆ 2.23 ಕೋಟಿ ಇತ್ತು. 5 ದಿನ ಕಳೆದ ನಂತರ ರಾಯಲ್​ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಚ್ ಸಂದರ್ಭವೂ ಜಿಯೋ ಸಿನಿಮಾ ಮತ್ತೊಮ್ಮೆ ರೆಕಾರ್ಡ್ ಬ್ರೇಕ್ ಮಾಡಿತು. ಆ ದಿನ 2.4 ಕೋಟಿ ಪ್ರೇಕ್ಷಕರು ಇದ್ದರು.


ಈ ಕೆಲವು ದಿನಗಳಲ್ಲಿ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯಿಂದ ಜಿಯೋ ಸಿನಿಮಾ 360 ಡಿಗ್ರಿ ವೀಕ್ಷಣೆ ಸೌಲಭ್ಯವನ್ನೂ ಕೊಟ್ಟಿದೆ. ಪ್ರೇಕ್ಷಕರು ಇದರಲ್ಲಿ ಭಾಷೆಯ ಮಾನದಂಡದಲ್ಲಿಯೂ ಬಹಳಷ್ಟು ಎಂಜಾಯ್ ಮಾಡಿದ್ದಾರೆ. ಭೋಜ್​ಪುರಿ, ಪಂಜಾಬಿ, ಮರಾಠಿ, ಗುಜರಾತಿ ಭಾಷೆಗಳಲ್ಲಿಯೂ ಫೀಡ್ ಇದ್ದದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವೀಕ್ಷಕರು ಭೋಜ್‌ಪುರಿ, ಪಂಜಾಬಿ, ಮರಾಠಿ ಮತ್ತು ಗುಜರಾತಿ ಸೇರಿದಂತೆ ಅನನ್ಯ ಭಾಷಾ ಫೀಡ್‌ಗಳನ್ನು ಆನಂದಿಸಿದ್ದಾರೆ ಮತ್ತು ಮಲ್ಟಿ-ಕ್ಯಾಮ್, 4K, ಹೈಪ್ ಮೋಡ್‌ನಂತಹ ಡಿಜಿಟಲ್-ಮಾತ್ರ ವೈಶಿಷ್ಟ್ಯಗಳನ್ನು ಪ್ರೇಕ್ಷಕರು ಆನಂದಿಸಿದ್ದಾರೆ. ಮುಖ್ಯಾಂಶಗಳು, ಟಾಪ್ ಪ್ಲೇಯರ್ ಸಂದರ್ಶನಗಳು ಸೇರಿದಂತೆ ಅತ್ಯಾಕರ್ಷಕ, ಆಕ್ಷನ್-ಪ್ಯಾಕ್ಡ್ ಮತ್ತು ವಿಶೇಷವಾದ ಕಂಟೆಟ್ ವೀಕ್ಷಿಸಿದ್ದಾರೆ.y
ಜಿಯೋ ಸಿನಿಮಾದಲ್ಲಿ ಜಾಹೀರಾತುದಾರರ ಸಂಖ್ಯೆ ಹೊಸ ದಾಖಲೆ ಸೃಷ್ಟಿಸಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಸೇರುವ ಇನ್ನಷ್ಟು ಬ್ರ್ಯಾಂಡ್ ಸಂಖ್ಯೆ ಮುಂಬರುವ ದಿನಗಳಲ್ಲಿ ಹೆಚ್ಚಾಗಲಿದೆ.


JioCinema ತಮ್ಮ TATA IPL 2023 ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಪಾಲುದಾರಿಕೆ ಹೊಂದಿರುವ 26 ಉನ್ನತ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇದರಲ್ಲಿ (ಸಹ-ಪ್ರಸ್ತುತ ಪ್ರಾಯೋಜಕರು) ಡ್ರೀಮ್11, (ಸಹ-ಚಾಲಿತ) JioMart, PhonePe, Tiago EV, Jio (ಸಹ ಪ್ರಾಯೋಜಕರು) Appy Fizz, ET ಮನಿ, ET ಮನಿ, ಓರಿಯೋ, ಬಿಂಗೋ, ಸ್ಟಿಂಗ್, AJIO, Haier, RuPay, ಲೂಯಿ ಫಿಲಿಪ್ ಜೀನ್ಸ್, ಅಮೆಜಾನ್, ರ್ಯಾಪಿಡೋ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮ್ಲಾ ಪಸಂದ್, Kingfisher Power Soda, Jindal Panther TMT Rebar, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು AMFI.


IPL 2023 No ball history and its losses
ಸಾಂದರ್ಭಿಕ ಚಿತ್ರ


ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ಐದು ಬಾರಿಯ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ 2023 ರ ಆವೃತ್ತಿಗೆ ಮುನ್ನ JioCinema ಜೊತೆಗೆ ವಿಶೇಷ ಪಾಲುದಾರಿಕೆಯನ್ನು ಘೋಷಿಸಿದವು. ಜಾಗತಿಕ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ನಾಯಕ ಮತ್ತು ನಾಲ್ಕು ಬಾರಿ ಐಪಿಎಲ್ ವಿಜೇತ ಎಂಎಸ್ ಧೋನಿ, ವಿಶ್ವ ನಂ. 1 T20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ತಮ್ಮ ವಿಶ್ವ ದರ್ಜೆಯ, ಡಿಜಿಟಲ್-ಮೊದಲ TATA IPL ಪ್ರಸ್ತುತಿಯನ್ನು ಹೆಚ್ಚಿಸಲು JioCinema ನೊಂದಿಗೆ ಕೈಜೋಡಿಸಿದರು.


JioCinema (iOS ಮತ್ತು Android) ಅನ್ನು ಡೌನ್‌ಲೋಡ್ ಮಾಡುವ ಮೂಲಕ ವೀಕ್ಷಕರು ತಮ್ಮ ಇಷ್ಟದ ಕ್ರೀಡೆಗಳನ್ನು ವೀಕ್ಷಿಸಬಹುದು. ಇತ್ತೀಚಿನ ಅಪ್ಟೇಡ್, ಸುದ್ದಿಗಳು, ಸ್ಕೋರ್‌ಗಳು ಮತ್ತು ವೀಡಿಯೊಗಳಿಗಾಗಿ, ಅಭಿಮಾನಿಗಳು Facebook, Instagram, Twitter ಮತ್ತು YouTube ನಲ್ಲಿ Sports18 ಅನ್ನು ಫಾಲೋ ಮಾಡಬಹುದು. Facebook, Instagram, Twitter ಮತ್ತು YouTube ನಲ್ಲಿ JioCinema ಫಾಲೋ ಮಾಡಬಹುದು.

top videos
    First published: