ತಾರಕ್ ಮೆಹ್ತಾ ಕಾ (TMKOC) ಉಲ್ಟಾ ಚಶ್ಮಾ ಕಾಮಿಡಿ ಜನಪ್ರಿಯ ಹಾಸ್ಯಧಾರವಾಹಿ ಮನೆ ಮನೆಗಳಲ್ಲಿ ಚಿರಪರಿಚಿತವಾಗಿದೆ. ಇದೀಗ ಧಾರವಾಹಿಯಲ್ಲಿ ರೋಷನ್ ಸೋಧಿ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ಜೆನ್ನಿಫರ್ ಮಿಸ್ತ್ರಿ ಬನ್ಸಿವಾಲ್ ಕಾರ್ಯಕ್ರಮದಿಂದ ಹೊರನಡೆದಿದ್ದು, ನಿರ್ಮಾಪಕ ಅಸಿತ್ ಕುಮಾರ್ ಮೋದಿ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿಯವರ ವಿರುದ್ಧ ಜೆನ್ನಿಫರ್ ಮಾಡಿರುವ ಆರೋಪಗಳಿಂದ ಪ್ರೇಕ್ಷಕರು ಶಾಕ್‌ಗೆ ಒಳಗಾಗಿದ್ದು, ವಿಸ್ಕಿ ಸೇವಿಸಲು ಕೊಠಡಿಗೆ ಬಾ ಎಂದು ನಿರ್ಮಾಪಕರು ಆಗಾಗ್ಗೆ ತನ್ನನ್ನು ಬಲವಂತಗೊಳಿಸುತ್ತಿದ್ದರು ಎಂದು ನಟಿ (Actress) ಆಪಾದಿಸಿದ್ದಾರೆ. TMKOC ತಂಡದ ಇಬ್ಬರು ಸದಸ್ಯರಿಗೆ ಈ ಮಾಹಿತಿ ನೀಡಿರುವುದಾಗಿ ತಿಳಿಸಿರುವ ಜೆನ್ನಿಫರ್, ಮೋದಿಯ ಲೈಂಗಿಕ ಕಾಮನೆಗಳಿಗೆ ತಾನು ಬೆಂಬಲ ನೀಡದೇ ಇದ್ದಾಗ ಬೇಕೆಂದೇ ಆತ ಧಾರವಾಹಿಯಲ್ಲಿನ ತನ್ನ ಪಾತ್ರಗಳ ದೃಶ್ಯಗಳನ್ನು ತೆಗೆದುಹಾಕುತ್ತಿದ್ದ ಎಂದು ನಿರ್ಮಾಪಕರು ಮಾಡುತ್ತಿದ್ದ ದೌರ್ಜನ್ಯದ ಬಗ್ಗೆ ನಟಿ ದೂರಿದ್ದಾರೆ.
ಅಸಿತ್ ಮೋದಿ ವಿರುದ್ಧ ಜೆನ್ನಿಫರ್ ಮಿಸ್ತ್ರಿ ಆಘಾತಕಾರಿ ಹೇಳಿಕೆ
ಆಜ್‌ತಕ್‌ಗೆ ನಟಿ ನೀಡಿದ್ದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿರುವ ಜೆನ್ನಿಫರ್, ಆರಂಭದಿಂದಲೂ ಮೋದಿ ತನ್ನ ಸೌಂದರ್ಯದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದರು ಹಾಗೂ ನೀವು ಚೆನ್ನಾಗಿ ಕಾಣುತ್ತೀರಿ ಎಂದು ಶ್ಲಾಘಿಸುತ್ತಿದ್ದರು ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ತಾಂಡವ್‍ಗಾಗಿ ಬದಲಾಗಲು ಹೊರಟ ಭಾಗ್ಯ, ಸೊಸೆಯನ್ನು ಸಮಾಧಾನ ಮಾಡಿದ ಕುಸುಮಾ!
ನಿಮಗೆ ಯಾವ ಡ್ರಿಂಕ್ಸ್ ಇಷ್ಟವೆಂದು ಮೋದಿ ಒಂದೊಮ್ಮೆ ಜೆನ್ನಿಫರ್ ಅವರಲ್ಲಿ ಕೇಳಿದ್ದರು ಎಂದು ತಿಳಿಸಿರುವ ನಟಿ ತನಗೆ ವಿಸ್ಕಿ ಇಷ್ಟ ಎಂದು ಹೇಳಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾದ ನಂತರ ಆಗಾಗ್ಗೆ ನಿರ್ಮಾಪಕರು ತನ್ನೊಂದಿಗೆ ಕುಳಿತು ವಿಸ್ಕಿ ಕುಡಿಯಲು ಬಾ ಎಂದು ಕೊಠಡಿಗೆ ಆಹ್ವಾನಿಸುತ್ತಿದ್ದರು ಎಂಬುದಾಗಿ ನಟಿ ದೋಷಾರೋಪಣೆ ಮಾಡಿದ್ದಾರೆ. ಸಂದರ್ಶನದಲ್ಲಿ ತಮಗಾದ ಶೋಷಣೆಯ ಬಗ್ಗೆ ಮಾತನಾಡಿರುವ ನಟಿ 2019 ರಲ್ಲಿ ತಂಡ ಸಿಂಗಾಪುರಕ್ಕೆ ಹೋದಾಗ ಪರಿಸ್ಥಿತಿ ಬದಲಾಯಿತು ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ.
ಪ್ರವಾಸದ ಸಮಯದಲ್ಲಿ, ಅಸಿತ್ ತನ್ನ ಕೋಣೆಯಲ್ಲಿ ವಿಸ್ಕಿ ಸೇವಿಸಲು ಕೊಠಡಿಗೆ ಬರುವಂತೆ ಒತ್ತಾಯಿಸಿದರು ಎಂದು ನಟಿ ತಿಳಿಸಿದ್ದಾರೆ. ಆದರೆ ಆತ ಮಾತನಾಡಿದ ರೀತಿ ನನಗೆ ಆಶ್ಚರ್ಯವನ್ನುಂಟು ಮಾಡಿತ್ತು ಎಂದು ಜೆನ್ನಿಫರ್ ತಿಳಿಸಿದ್ದು, ಇನ್ನೊಮ್ಮೆ ಆತ ತನ್ನ ನಡವಳಿಕೆಯನ್ನು ಮೀರಿ ಕಾಮೆಂಟ್ ಮಾಡಿದ್ದ ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ. ನೀವು ತುಂಬಾ ಸುಂದರವಾಗಿದ್ದೀರಿ, ನಿಮ್ಮನ್ನು ಹಿಡಿದು ಮುತ್ತಿಕ್ಕಬೇಕೆನ್ನುವ ಬಯಕೆ ನನ್ನನ್ನು ಕಾಡುತ್ತಿದೆ ಎಂದು ನೇರವಾಗಿಯೇ ಹೇಳಿದ್ದಾರೆ ಎಂದು ಜೆನ್ನಿಫರ್ ತಿಳಿಸಿದ್ದಾರೆ.
ಈ ಘಟನೆಯ ನಂತರ ತುಂಬಾ ಭಯಭೀತರಾಗಿದ್ದ ಜೆನ್ನಿಫರ್ ತಮ್ಮ ಇಬ್ಬರು ಸಹೋದ್ಯೋಗಿಗಳಲ್ಲಿ ಘಟನೆಯ ಬಗ್ಗೆ ತಿಳಿಸಿದ್ದಾರೆ ಎಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಇವರು ಸಂದರ್ಶಕರನ್ನು ಜರೆದಿದ್ದು ಆಕೆಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ಈ ಸಹನಟರು ಯಾರು ಎಂಬುದನ್ನು ಜೆನ್ನಿಫರ್ ಹೇಳಿಕೊಂಡಿಲ್ಲ.
ನಿರ್ಮಾಪಕನ ಕೊಳಕು ಮಾತುಗಳು
ರಾತ್ರಿ ವೇಳೆ ನಿನಗೆ ಸಂಗಾತಿ ಇಲ್ಲವೆಂದಾದರೆ ನನ್ನ ಕೊಠಡಿಗೆ ಬಂದು ವಿಸ್ಕಿ ಕುಡಿಯಬಹುದು ಎಂದು ನೇರವಾಗಿ ಆಹ್ವಾನ ನೀಡಿದ್ದರು ಎಂದು ಜೆನ್ನಿಫರ್ ತಿಳಿಸಿದ್ದಾರೆ. ತುಂಬಾ ಕೊಳಕಾಗಿ ನಿರ್ಮಾಪಕರು ಮಾತನಾಡುತ್ತಿದ್ದರು ಎಂದು ನಟಿ ಅಳಲು ತೋಡಿಕೊಂಡಿದ್ದಾರೆ. ನಟಿ ನಿರ್ಮಾಪಕರ ಯಾವ ಮಾತಿಗೂ ವಿನಂತಿಗೂ ಪ್ರತಿಕ್ರಿಯಿಸದೇ ಇದ್ದಾಗ, ಆತ ಆಕೆಗೆ ಕಡಿಮೆ ನಟನಾ ಅವಕಾಶ ನೀಡಲಾರಂಭಿಸಿದ ಎಂದು ಜೆನ್ನಿಫರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್!
ಜೆನ್ನಿಫರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸಿತ್ ಮೋದಿ
ಜೆನ್ನಿಫರ್ ಟಿವಿ ಕಾರ್ಯಕ್ರಮ ಹಾಗೂ ತನ್ನ ಮೇಲೆ ಮಾನಹಾನಿ ಮಾಡಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಅಸಿತ್ ಮೋದಿ, ಆಕೆ ತಮ್ಮ ಮೇಲೆ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಹಾಗೂ ಆಧಾರರಹಿತವಾಗಿವೆ ಎಂದು ತಿಳಿಸಿದ್ದಾರೆ.
ಪ್ರಾಜೆಕ್ಟ್ ಮುಖ್ಯಸ್ಥರಾದ ಸೋಹಿಲ್ ರಮಣಿ ಮತ್ತು ಜತಿನ್ ಬಜಾಜ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಜೆನ್ನಿಫರ್ ಆರೋಪಿಸಿದ್ದು ನಟಿ ಸೆಟ್‌ನಲ್ಲಿ ಶಿಸ್ತಿನಿಂದ ವರ್ತಿಸುವುದಿಲ್ಲವೆಂದು ಪ್ರಾಜೆಕ್ಟ್ ಮುಖ್ಯಸ್ಥರು ತಿಳಿಸಿದ್ದಾರೆ.
ಚಿತ್ರೀಕರಣದ ಕೊನೆಯ ದಿನ ಆಕೆ ಸಂಪೂರ್ಣ ಯುನಿಟ್ ಮುಂದೆ ನಿಂದಿಸುತ್ತಿದ್ದರು ಹಾಗೂ ತನ್ನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸದೆಯೇ ಜೆನ್ನಿಫರ್ ಸೆಟ್‌ನಿಂದ ಹೊರನಡೆದಿದ್ದಾರೆ. ಸೆಟ್‌ನಿಂದ ಮರಳುವಾಗ ಕಾರಿನಿಂದ ಅಲ್ಲಿದ್ದ ಕೆಲವು ವಸ್ತುಗಳ ಮೇಲೆ ದಾಳಿ ನಡೆಸಿದ್ದು ಸೆಟ್‌ನ ಸ್ವತ್ತುಗಳನ್ನು ಹಾಳುಮಾಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಆಕೆಯ ಕೆಟ್ಟ ನಡವಳಿಕೆ ಮತ್ತು ಅಶಿಸ್ತಿನಿಂದಾಗಿ ಆಕೆಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಬೇಕಾಗಿಯಿತು ಎಂದು ಅಸಿತ್ ಮೋದಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ