Tapsee Pannu: ತಾಪ್ಸಿ ಪನ್ನು ಫೋಟೋಗೆ ಹೀಗ್ಯಾಕೆ ಕಮೆಂಟ್​ ಮಾಡಿದ್ರು ವಿವಾದಿತ ನಿರ್ದೇಶಕ ಅನುರಾಗ್​ ಕಶ್ಯಪ್​..!

Tapsee Pannu: ಅಭಿನಯಿಸಿದ ಹಾಗೂ ನಿರ್ದೇಶಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಿರ್ದೇಶಕ ಅನುರಾಗ್​ ಕಶ್ಯಪ್​. ಇವರು ಮಾತನಾಡಿದರೆ ಸಾಕು ಏನೋ ಒಂದು ವಿವಾದ ಹುಟ್ಟುಕೊಳ್ಳಲಿದೆ ಅನ್ನೋ ಅನುಮಾನ ಎಲ್ಲರಲ್ಲೂ ಮೂಡುತ್ತದೆ. ಹೀಗಿರುವಾಗ ಇವರು ನಟಿ ತಾಪ್ಸಿ ಪನ್ನು ಅವರ ಫೋಟೋವೊಂದಕ್ಕೆ ಮಾಡಿರುವ ಕಮೆಂಟ್​ ಎಲ್ಲರ ಗಮನ ಸೆಳೆಯುವುದರ ಜತೆಗೆ ಕೆಲವರಿಗೂ ಇರಿಸುಮುರುಸು ಉಂಟು ಮಾಡಿದೆ.

Anitha E | news18
Updated:August 21, 2019, 1:34 PM IST
Tapsee Pannu: ತಾಪ್ಸಿ ಪನ್ನು ಫೋಟೋಗೆ ಹೀಗ್ಯಾಕೆ ಕಮೆಂಟ್​ ಮಾಡಿದ್ರು ವಿವಾದಿತ ನಿರ್ದೇಶಕ ಅನುರಾಗ್​ ಕಶ್ಯಪ್​..!
ಶಾಲಾ ದಿನಗಳಲ್ಲಿ ನಟಿ ತಾಪ್ಸಿ ಹೇಗಿದ್ದಾರೆ ನೋಡಿ
  • News18
  • Last Updated: August 21, 2019, 1:34 PM IST
  • Share this:
ತಾಪ್ಸಿ ಪನ್ನು ಬಾಲಿವುಡ್​ನಲ್ಲಿ ಸಾಹಸ ಪ್ರಧಾನ ಸಿನಿಮಾಗಳಲ್ಲಿ ನಟಿಸಿರುವ ನಟಿ. ಅದಕ್ಕಾಗಿ ಸಿಕ್ಕಾಪಟ್ಟೆ ತರಬೇತಿ ಪಡೆದು ಅಭಿನಯಿಸುವ ತಾಪ್ಸಿಗೆ ಶಾಲಾ ದಿನಗಳಿಂದಲೇ ಕ್ರೀಡೆ ಎಂದರೆ ತುಂಬಾ ಇಷ್ಟವಂತೆ.

ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶಾಲಾ ದಿನಗಳ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕ್ರೀಡೆಯಲ್ಲಿ ಭಾಗವಹಿಸಿ, ಜಯಗಳಿಸಿ ಪ್ರಶಸ್ತಿ ಪಡೆದಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ.

Tapsee Pannu
ನಟಿ ತಾಪ್ಸಿ ಪನ್ನು


'ಕ್ರೀಡೆ ನನ್ನ ಜೀವನದ ಬಹಳ ಪ್ರಮುಖ ಭಾಗವಾಗಿತ್ತು. ಪ್ರತಿ ವರ್ಷ ಓಟದ ಮೈದಾನ ಯುದ್ಧದ ರಣರಂಗವಾಗಿರುತ್ತಿತ್ತು. ಸದಾ ನನ್ನೊಂದಿಗೆ ನಿಂತು ನನಗೆ ಪ್ರೋತ್ಸಾಹ ನೀಡುತ್ತಿದ್ದ ನನ್ನ ಕುಟುಂಬಕ್ಕೆ ಧನ್ಯವಾದಗಳು. ನನಗೆ ತುಂಬಾ ಪ್ರೋತ್ಸಾಹ ನೀಡಿದ ಶಾಲಾ ಉಪಾಧ್ಯಾಯರಿಗೂ ಧನ್ಯವಾದಗಳು. ಆದರೆ ದುರ್ಭಾಗ್ಯ ಎಂದರೆ ಈಗಿನ ಸಾಕಷ್ಟು ಮಕ್ಕಳಿಗೆ ಬೆಂಬಲ ಹಾಗೂ ಸಹಕಾರ ಸಿಗುತ್ತಿಲ್ಲ. #Why is this Gap' ಎಂದು ಆ ಫೋಟೋಗೆ ಬರೆದುಕೊಂಡಿದ್ದಾರೆ.
ಈ ಪೋಟೋಗಳಿಗೆ ತಾಪ್ಸಿ ಅಭಿಮಾನಿಗಳು ಸೇರಿದಂತೆ ಅವರ ಸಹ ಕಲಾವಿದರು ಹಾಗೂ ಬಾಲಿವುಡ್​ ಮಂದಿ ಸಿಕ್ಕಾಪಟ್ಟೆ ಕಮೆಂಟ್​ ಮಾಡುತ್ತಿದ್ದಾರೆ.

Celebs comment on Tapsi Pannu's school photo
ತಾಪ್ಸಿ ಚಿತ್ರಕ್ಕೆ ಕಮೆಂಟ್​ ಮಾಡಿದ ಬಾಲಿವುಡ್​ ಮಂದಿ


ಇದನ್ನೂ ಓದಿ: ಹೈದರಾಬಾದಿನಲ್ಲಿ ರಾರಾಜಿಸುತ್ತಿದೆ 70 ಅಡಿಯ ಪ್ರಭಾಸ್​ ಕಟೌಟ್​: ಸಾಹೋ ಸ್ವಾಗತಕ್ಕೆ ಜೋರಾಗಿದೆ ಸಿದ್ಧತೆ..!

ನಟ ಹಾಗೂ ತಾಪ್ಸಿ ಸ್ನೇಹಿತ ವಿಕ್ಕಿ ಕೌಶಲ್​ ಈ ಚಿತ್ರಕ್ಕೆ ಇಬ್ಬರು ಮೂವರಿಗೆ ಗ್ಯಾರಂಟಿ ಡಿಕ್ಕಿ ಹೊಡೆದಿರುತ್ತೀಯಾ.... ಎಂದು ಬರೆದರೆ, ಮತ್ತೊಬ್ಬರು ತಾಪ್ಸಿ ಶೂ ಲೇಸ್​ ಕಟ್ಟಿರುವ ರೀತಿಯ ಬಗ್ಗೆ ಬರೆದಿದ್ದಾರೆ. ಈ ಸ್ಟೈಲ್​ ಮತ್ತೆ ಬರಬೇಕು ಎಂದೂ ಕೇಳಿದ್ದಾರೆ.

ಇದನ್ನು ಓದಿ: Ranveer Singh: 12ನೇ ವಯಸ್ಸಿನಲ್ಲೇ ಬಯಸಿ ಬಯಸಿ ಶೀಲ ಕಳೆದುಕೊಂಡಿದ್ದ ಬಿ-ಟೌನ್​ ಪ್ಲೇ ಬಾಯ್​ ರಣವೀರ್​ ಸಿಂಗ್​..!

ಆದರೆ ಅದರಲ್ಲಿ ನಿರ್ದೇಶಕ ಅನುರಾಗ್​ ಕಶ್ಯಪ್​ ಮಾಡಿರುವ ಕಮೆಂಟ್​ ಮಾತ್ರ ತಮಾಷೆ ಎನಿಸಿದರೂ ಕೊಂಚ ವ್ಯಂಗ್ಯವಾಗಿದೆ. ಹೋಗ್ಲಿ ಯಾವುದೋ ಒಂದು ಪ್ರಶಸ್ತಿ ಸಿಕ್ಕಿತಲ್ಲ ಎಂದು ಅನುರಾಗ್​ ಕಮೆಂಟ್​ ಮಾಡಿರುವುದು ತಾಪ್ಸಿ ಅಭಿಮಾನಿಗಳಲ್ಲಿ ಕೊಂಚ ಬೇಸರಕ್ಕೆ ಕಾರಣವಾಗಿದೆ. ಏಕೆಂದರೆ ತಾಪ್ಸಿ ಈಗಾಗಲೇ 'ಪಿಂಕ್​', 'ನಾಮ್​ ಶಬಾನಾ', 'ಮಿಸ್ಟರ್ ಪರ್ಫೆಕ್ಟ್​' ಸಿನಿಮಾಗಳಲ್ಲಿನ ಅಭಿನಯಕ್ಕೆ ಪ್ರಶಸ್ತಿ ಪಡೆದಿದ್ದಾರೆ.

Kangana: 600 ರೂಪಾಯಿ ಸೀರೆ ತೊಟ್ಟ ಕಂಗನಾ: ಫಿದಾ ಆದ ನೆಟ್ಟಿಗರು..!

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading