• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Tapori Sathya: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ; ಹಿರಿಯ ನಟ, ನಿರ್ದೇಶಕ ಟಪೋರಿ ಸತ್ಯ ಇನ್ನಿಲ್ಲ!

Tapori Sathya: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ; ಹಿರಿಯ ನಟ, ನಿರ್ದೇಶಕ ಟಪೋರಿ ಸತ್ಯ ಇನ್ನಿಲ್ಲ!

ನಿರ್ದೇಶಕ ಟಪೋರಿ ಸತ್ಯ ಇನ್ನಿಲ್ಲ

ನಿರ್ದೇಶಕ ಟಪೋರಿ ಸತ್ಯ ಇನ್ನಿಲ್ಲ

ಟಪೋರಿ ಸತ್ಯ ಅವರಿಗೆ 46 ವರ್ಷ ವಯಸ್ಸಾಗಿತ್ತು. ಶ್ವಾಸಕೊಶದ ಸಮಸ್ಯೆಯಿಂದ ಬಳಲುತ್ತಿದ್ದ ಸತ್ಯ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore, India
 • Share this:

ಬೆಂಗಳೂರು: ಸುಮಾರು 30ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ (Supportive Actor) ನಟಿಸಿದ್ದ ಟಪೋರಿ ಸತ್ಯ (Tapori Sathya) ಖ್ಯಾತಿಯ ಸತ್ಯ  ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ (Sandalwood Actor) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.


ಟಪೋರಿ ಸತ್ಯ ಅವರಿಗೆ 46 ವರ್ಷ ವಯಸ್ಸಾಗಿತ್ತು. ಶ್ವಾಸಕೊಶದ ಸಮಸ್ಯೆಯಿಂದ ಬಳಲುತ್ತಿದ್ದ ಸತ್ಯ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ನಂದ ಲವ್ಸ್ ನಂದಿತ ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.


ಇದನ್ನೂ ಓದಿ: Actress Supritha: 120 KG ಇದ್ದ ಸುಪ್ರಿತಾ ಇಷ್ಟೊಂದು ಫಿಟ್ ಆಗಿರೋದು ಹೇಗೆ, 8 ವರ್ಷದ ಮಗ ಇದ್ದಾನೆ ಅಂದ್ರೆ ನಂಬ್ತೀರಾ?


ನಟನೆ ಜೊತೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರಿಗೆ, ಲೂಸ್ ಮಾದ ಮೊದಲ ಬಾರಿಗೆ ಯೋಗಿ ನಾಯಕನಾಗಿ ನಟಿಸಿದ್ದ 'ನಂದ ಲವ್ಸ್ ನಂದಿತಾ' ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಟಪೋರಿ ಸತ್ಯ ಕ್ವಾಟ್ರು ಅನ್ನೋ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಜನಪ್ರಿಯರಾಗಿದ್ದರು.


ಟಪೋರಿ ಸತ್ಯ ಎಂದೇ ಹೆಸರಾಗಿದ್ದ ಇವರು ಮೇಳ ಹೆಸರಿನ ಸಿನಿಮಾವನ್ನು ನಿರ್ದೇಶನ ಸಹ ಮಾಡಿದ್ದರು. ಇತ್ತೀಚೆಗೆ ಮತ್ತೊಂದು ಹೊಸ ಸಿನಿಮಾ ನಿರ್ದೇಶನ ಮಾಡುವ ಹುಮ್ಮಸ್ಸಿನಲ್ಲಿದ್ದ ಸತ್ಯ ಸಿನಿಮಾಕ್ಕಾಗಿ ಆಡಿಷನ್ ಸಹ ಮಾಡುತ್ತಿದ್ದರು. ಆದರೆ ಹಠಾತ್ತನೆ ನಿಧನ ಹೊಂದಿದ್ದಾರೆ. ಸತ್ಯ ಅವರ ಪಾರ್ಥೀವ ಶರೀರವನ್ನು ಬನಶಂಕರಿ ಬಳಿಯ ನಿವಾಸಕ್ಕೆ  ಕೊಂಡೊಯ್ಯಲಾಗಿದೆ.


ಇದನ್ನೂ ಓದಿ: Top 10 Heroines: ಅತೀ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಟಾಪ್ 10 ನಟಿಯರು ಇವರು? ಮೊದಲನೇ ಸ್ಥಾನ ಯಾರಿಗೆ?ಟಪೋರಿ ಸತ್ಯ ಅವರ ನಿಧನಕ್ಕೆ ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಕಂಬನಿ ಮಿಡಿದಿದ್ದು, ಮನೆಯಲ್ಲಿ ಸೂತಕದ ವಾತಾವರಣ ಉಂಟಾಗಿದೆ.


ಯುವ ನಟ ಸಂಪತ್ ಜಯರಾಮ್ ಆತ್ಮಹತ್ಯೆ!


ಇನ್ನು ಶನಿವಾರ ಕಿರುತೆರೆ ಯುವ ನಟ ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಫರ್ ಇಲ್ಲದೆ ಕಂಗಾಲಾಗಿದ್ದ ಯುವ ನಟ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸಂಪತ್ ಜಯರಾಮ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಅರಿಶಿನಕುಂಟೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ನೇಣುಬಿಗಿದುಕೊಂಡು ನಟ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಅಗ್ನಿಸಾಕ್ಷಿ ಧಾರಾವಾಹಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.


ಕಳೆದ ಒಂದು ವರ್ಷದ ಹಿಂದಷ್ಟೇ ಸಂಪತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕನ್ನಡದ ಕೆಲವು ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ನಟಿಸಿದ್ದ ಸಂಪತ್​ ಜಯರಾಮ್​ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಂಪತ್​ ಜಯರಾಮ್​ ತೊಡಗಿಕೊಂಡಿದ್ದರು.

top videos


  ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗಿದೆ. ಶನಿವಾರ ನೆಲಮಂಗಲದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನೆಲಮಂಗಲದ ಆಸ್ಪತ್ರೆಯಿಂದ ಎನ್​ಆರ್​ ಪುರಕ್ಕೆ ಅವರ ಮೃತದೇಹ ರವಾನೆ ಆಗಲಿದೆ. ಅಗ್ನಿ ಸಾಕ್ಷಿ ಸೀರಿಯಲ್ ತಂಡಕ್ಕೂ ನಟನ ಅಗಲಿಕೆ ಸುದ್ದಿ ಆಘಾತ ಕೊಟ್ಟಿದೆ.

  First published: