News18 India World Cup 2019

ದೇಶದ ಮೊದಲ MeToo ಪ್ರಕರಣ: ನಾನಾ ಪಾಟೇಕರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಲು ನಿರಾಕರಿಸಿದ ಮುಂಬೈ ಪೊಲೀಸ್

ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ನಾನಾ ಪಾಟೇಕರ್​ ವಿರುದ್ಧ ಚಾರ್ಜ್​ಶೀಟ್​ ದಾಖಲು ಮಾಡಲು ಯಾವುದೇ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ.

Rajesh Duggumane | news18
Updated:June 14, 2019, 11:49 AM IST
ದೇಶದ ಮೊದಲ MeToo ಪ್ರಕರಣ: ನಾನಾ ಪಾಟೇಕರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಲು ನಿರಾಕರಿಸಿದ ಮುಂಬೈ ಪೊಲೀಸ್
ನಾನಾ ಪಾಟೇಕರ್​, ತನುಶ್ರೀ ದತ್ತಾ
Rajesh Duggumane | news18
Updated: June 14, 2019, 11:49 AM IST
ಮುಂಬೈ (ಜೂ. 14): ಹಿರಿಯ ನಟ ನಾನಾ ಪಾಟೇಕರ್​ ವಿರುದ್ಧ ಬಾಲಿವುಡ್​ ನಟಿ ತನುಶ್ರೀ ದತ್ತ ಮಾಡಿದ್ದ ಆರೋಪಕ್ಕೆ ಸೂಕ್ತ ಸಾಕ್ಷಿ ಸಿಕ್ಕಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಹಾಗಾಗಿ, ಭಾರೀ ಸಂಚಲನ ಸೃಷ್ಟಿಸಿದ್ದ  ದೇಶದ ಮೊದಲ #MeToo ಪ್ರಕರಣ ಕೊನೆಗೂ ಇತ್ಯರ್ಥವಾಗಿದೆ.

ಚಿತ್ರೀಕರಣದ ವೇಳೆ ಪಾಟೇಕರ್​ ಲೈಂಗಿಕ ಕಿರುಕುಳ ನೀಡಿದ್ದರು. ಆದರೆ, ಸೆಟ್​ನಲ್ಲಿ ಯಾರೂ ಕೂಡ ನೆರವಿಗೆ ಬಂದಿರಲಿಲ್ಲ ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. “ನಾನಾ ಪಾಟೇಕರ್ ಮಹಿಳೆಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬುದು ಇಡೀ ಬಾಲಿವುಡ್​ಗೆ ಗೊತ್ತಿದೆ. ಶೂಟಿಂಗ್ ಸಮಯದಲ್ಲಿ ನಟಿಯರೊಂದಿಗೆ ಅವರ ನಡವಳಿಕೆ ಸರಿಯಾಗಿರುವುದಿಲ್ಲ. ಅಷ್ಟೇ ಅಲ್ಲದೆ ಹಲವು ನಟಿಯರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಆದರೆ ಎಲ್ಲೂ ಕೂಡ ಈ ಸುದ್ದಿಗಳು ಮಾಧ್ಯಮಗಳಲ್ಲಿ ಬರದಂತೆ ಅವರು ಕಾಪಾಡಿಕೊಂಡಿದ್ದಾರೆ,” ಎಂದು ತನುಶ್ರೀ ಆರೋಪಿಸಿದ್ದರು.

ಇಷ್ಟೇ ಅಲ್ಲದೆ, “ಹಾಡಿನ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ಪಾಟೇಕರ್​ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ನಾನು ನಿರ್ದೇಶಕ ಮತ್ತು ನಿರ್ಮಾಪಕರಿಗೂ ತಿಳಿಸಿದ್ದರೂ, ಯಾವುದೇ ರೀತಿಯ ಬೆಂಬಲ ಸಿಕ್ಕಿರಲಿಲ್ಲ. ನಾನಾ ಪಾಟೇಕರ್​ ಸ್ವತಃ ನನಗೆ ನೃತ್ಯವನ್ನು ಕಲಿಸಲು ಬಯಸಿದ್ದರು. ಇಂತಹ ನೀಚತನವನ್ನು ಮರೆಮಾಚಲೆಂದೇ ನಾನಾ ಪಾಟೇಕರ್ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ,” ಎಂದು ತನುಶ್ರೀ ದತ್ತಾ ಹೇಳಿದ್ದರು.

ಇದನ್ನೂ ಓದಿ: ತಣ್ಣಗಾದ MeToo ಅಭಿಯಾನ; ಆರೋಪದ ಬಳಿಕ ಅಮೆರಿಕಕ್ಕೆ ಹೊರಟುನಿಂತ ನಟಿ ತನುಶ್ರೀ ದತ್ತಾ

ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ನಾನಾ ಪಾಟೇಕರ್​ ವಿರುದ್ಧ ಚಾರ್ಜ್​ಶೀಟ್​ ದಾಖಲು ಮಾಡಲು ಯಾವುದೇ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ. ಹಾಗಾಗಿ ಪ್ರಕರಣವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನುಶ್ರೀ ದತ್​ ಅಸಮಾಧಾನಗೊಂಡಿದ್ದಾರೆ. ಈ ರೀತಿ ಆಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿಕೊಂಡಿದ್ದಾರೆ.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...