MeeToo: ಮೀಟೂ ಬಳಿಕ ಕೊಲೆ ಬೆದರಿಕೆ ಬಗ್ಗೆ ಬಾಯ್ಬಿಟ್ಟ ತನುಶ್ರೀ, ಮರ್ಡರ್​​ ಮಾಡಲು ನಡೆದಿತ್ತಂತೆ ಮಾಸ್ಟರ್​ ಪ್ಲ್ಯಾನ್​!

MeeToo: ನಾನಾ ಪಾಟೇಕರ್ ವಿರುದ್ಧ ಮಾತನಾಡಿದಾಗಿನಿಂದಲೂ ತನುಶ್ರೀ ದತ್ತಾ ತಮ್ಮ ಜೀವನದಲ್ಲಿ ಅಕ್ಷರಶಃ ಹೋರಾಟ ನಡೆಸುತ್ತಿದ್ದಾರಂತೆ. ಎರಡು ಬಾರಿ ಜೀವ ಬೆದರಿಕೆಗೂ ಬಂದಿದೆ ಎಂದಿದ್ದಾರೆ ತನುಶ್ರೀ ದತ್ತಾ

ನಾನಾ ಪಾಟೇಕರ್, ತನುಶ್ರೀ ದತ್

ನಾನಾ ಪಾಟೇಕರ್, ತನುಶ್ರೀ ದತ್

  • Share this:
ಬಾಲಿವುಡ್ (Bollywood) ನಟಿ ತನುಶ್ರೀ ದತ್ತಾ ಈ ಹಿಂದೆ, ನಟ ನಾನಾ ಪಾಟೆಕರ್​ ಅವರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಎಲ್ಲರಿಗೂ ತಿಳಿದಿರುವ ಸಂಗತಿ ಆಗಿದೆ. ನಾನಾ ಪಾಟೇಕರ್ ವಿರುದ್ಧ ಮಾತನಾಡಿದಾಗಿನಿಂದಲೂ ತನುಶ್ರೀ ದತ್ತಾ ತಮ್ಮ ಜೀವನದಲ್ಲಿ ಅಕ್ಷರಶಃ ಹೋರಾಟ ನಡೆಸುತ್ತಿದ್ದಾರೆ ಎಂದೇ ಹೇಳಬಹುದು.  2008ರಲ್ಲಿ 'ಹಾರ್ನ್ ಓಕೆ ಪ್ಲೀಸ್​' ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ನಾನಾ ಪಾಟೇಕರ್ (Nana Patekar)​ ಲೈಂಗಿಕ ಕಿರುಕುಳ (Sexual Harassment) ನೀಡಲು ಪ್ರಯತ್ನಿಸಿದ್ದರು ಎಂದು ತನುಶ್ರೀ (Tanushree Dutta) ಆರೋಪಿಸಿದ್ದರು. ಆಕೆ ಕೇವಲ ದಿಟ್ಟ ಧ್ವನಿಯಿಂದ ಇದನ್ನು ಹೇಳಿರಲಿಲ್ಲ. ಇದರ ಜೊತೆಗೆ ಆಕೆಯು ಭಾರತದಲ್ಲಿ MeeToo ಚಳವಳಿಯ ನಾಯಕಿಯೂ ಆಗಿದ್ದರು.ಆದರೆ ದುರದೃಷ್ಟವಶಾತ್, ಅಂದಿನಿಂದ ಈ ನಟಿಯು ಪ್ರತಿದಿನವೂ ಜೀವ ಬೆದರಿಕೆಯ ಸಂದರ್ಭಗಳನ್ನು ಎದುರಿಸುತ್ತಿದ್ದಾರೆ.  ಈ ಕುರಿತು ಮತ್ತಷ್ಟು ವಿವರಗಳಿಗಾಗಿ ಮುಂದೆ ಓದಿ.

ತನುಶ್ರೀ ತನ್ನ ವೃತ್ತಿಜೀವನದಲ್ಲಿ ಮತ್ತೆ ಮುಂದುವರಿಯಬೇಕೆಂಬ ಇಂಗಿತವನ್ನು ಮಾಧ್ಯಮಗಳ ಎದುರು ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. ಆದರೆ ನಾನಾ ಪಾಟೇಕರ್‌ ವಿರುದ್ಧ ಮಾತನಾಡಿದ ಸಂದರ್ಭದಿಂದ ನನಗೆ ಯಾವುದೇ ಅವಕಾಶಗಳು ದೊರೆಯುತ್ತಿಲ್ಲ.ಈ ಸಿನಿಮಾ ಉದ್ಯಮದಲ್ಲಿ ಕೆಲಸ ಪಡೆಯಲು ನಾನು ಸಾಕಷ್ಟು ಹೆಣಗಾಡುತ್ತಿದ್ದೇನೆ ಎಂದು ಅವರು ಹಲವು ಬಾರಿ ಈ ವಿಷಯವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಆದರೆ ತನುಶ್ರೀ ದತ್ತಾ ಅವರು ಹೇಳಿದ ಮಾತುಗಳನ್ನು ಯಾರು ಕಿವಿಗೆ ಹಾಕಿಕೊಂಡಿಲ್ಲವೆಂಬಂತೆ ಕಾಣಿಸುತ್ತದೆ. ಏಕೆಂದರೆ ಅವರಿಗೆ ಸಿನಿಮಾ ಉದ್ಯಮದಲ್ಲಿ ಒಂದೇ ಒಂದು ಅವಕಾಶಗಳು ಕೂಡ ಸಿಗುತ್ತಿಲ್ಲ. ಎಲ್ಲರೂ ಆಕೆಯೊಂದಿಗೆ ಕೆಲಸ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ: ನನ್ನ ಮಗಳು ಕ್ರಿಕೆಟ್​ ಆಡಿದ್ರೆ ಆ ಆಟಗಾರ್ತಿಯಂತೆ ಆಗು ಅಂತಿದ್ದೆ, ಬಿಗ್​ ಸೀಕ್ರೆಟ್​ ಬಿಚ್ಚಿಟ್ಟ ದಾದಾ!

ಇಂತಹ ಪ್ರಕರಣಗಳು ನಡೆದಾಗ, ಸಮಾಜ ನಡೆಸುಕೊಳ್ಳುವ ರೀತಿಗೆ ಕೆಲವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಗಳೇ ಹೆಚ್ಚು. “ನಾನು ಕಿರುಕುಳದ ಬಗ್ಗೆ ಮಾತನಾಡಿದ್ದೇನೆ. ಅದರಿಂದ ನನಗೆ ಆಗುತ್ತಿರುವ ತೊಂದರೆಗಳ ಕುರಿತು ಕೂಡ ಮಾತನಾಡಿರುವೆ. ಆದರೆ ಇವೆಲ್ಲವುಗಳಿಂದ ನಾನು ಬಹಳಷ್ಟು ನೊಂದಿದ್ದೇನೆ, ಆದರೆ ಅದಕ್ಕೆ ಆತ್ಮಹತ್ಯೆ ಒಂದೇ ಪರಿಹಾರ ಎಂದು ನಾನೆಂದು ತಿಳಿದಿಲ್ಲ. ಅದಕ್ಕೆ ಹೇಡಿ ತರ ನಾನೆಂದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ” ಎಂದು ಮಾಧ್ಯಮಗಳ ಮುಂದೆ ಭರವಸೆ ನೀಡಿದ್ದರು.

ಕನೆಕ್ಟ್ ಎಫ್‌ಎಂ ಕೆನಡಾದೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ತನುಶ್ರೀ ದತ್ತಾ ನಾನಾ ಪಾಟೇಕರ್ ವಿರುದ್ಧ ಮಾತನಾಡಿದಾಗಿನಿಂದ ಅವರನ್ನು ಕೊಲ್ಲುವ ಪ್ರಯತ್ನಗಳು ಸಾಕಷ್ಟು ಬಾರಿ ಹೇಗೆ ನಡೆದಿವೆ ಎಂಬುದನ್ನು ಬಹಿರಂಗಪಡಿಸಿದರು.

ಇದನ್ನೂ ಓದಿ: ಬ್ರಿಟನ್ ಯುವರಾಣಿ ಕೇಟ್​ ಸೌಂದರ್ಯದ ರಹಸ್ಯ ಇದಂತೆ, ನೀವ್ಯಾಕೆ ಇದನ್ನು ಟ್ರೈ ಮಾಡ್ಬಾರ್ದು?

ಕಾರ್ ಆಕ್ಸಿಡೆಂಟ್​​ನಿಂದ ಗಾಯಗೊಂಡ ತನುಶ್ರೀ

"ತಾನು ಉಜ್ಜಯಿನಿಯಲ್ಲಿದ್ದಾಗ ತನ್ನ ಕಾರಿನ ಬ್ರೇಕ್‌ಗಳನ್ನು ಹಲವು ಬಾರಿ ಟ್ಯಾಂಪರ್ ಮಾಡಲಾಗಿತ್ತು. ಇದರಿಂದ ನಾನು ಅನೇಕ ಅಪಘಾತಗಳನ್ನು ಎದುರಿಸಿದ್ದೇನೆ. ಆದರೆ ಇದು ಒಂದು ಅಪಘಾತ ಮಾತ್ರ ಬಹಳ ಭೀಕರತೆಯಿಂದ ಕೂಡಿತ್ತು. ಇದರಿಂದ ನನ್ನ ಮೈ ಮೂಳೆಗಳೆಲ್ಲ ಪುಡಿ ಪುಡಿಯಾಗಿದ್ದವು. ಇದರಿಂದ ನಾನು ಎರಡು ತಿಂಗಳ ಕಾಲ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕಾಯಿತು. ಆ ಅಪಘಾತದಲ್ಲಿ ಸಾಕಷ್ಟು ರಕ್ತ ಸೋರಿದ್ದರಿಂದ ಆ ಗಾಯಗಳು ಗುಣವಾಗಲು ನನಗೆ ಬಹಳಷ್ಟು ಸಮಯ ಹಿಡಿಯಿತುʼ ಎಂದು ತನುಶ್ರೀ ಹೇಳಿಕೊಂಡಿದ್ದಾರೆ.

ವಿಷಬೆರಿಕೆ ಮಾಡಿದ ಕೆಲಸದಾಕೆ

ತನುಶ್ರೀ ದತ್ತಾ ಅವರು “ನನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಕೆಲಸದಾಕೆಯು ಒಂದು ಸಲ ನನಗೆ ವಿಷ ನೀಡಲು ಪ್ರಯತ್ನಿಸಿದ್ದಳು” ಎಂಬ ಭಯಾನಕ ಸಂಗತಿಯನ್ನು ಹಂಚಿಕೊಂಡರು."ನನ್ನ ಮಾತಿನಲ್ಲಿ ಹೇಳುವುದಾದರೆ, ನನ್ನ ಮನೆಯಲ್ಲಿ ಇದ್ದ ಸೇವಕಿಯು ನೀಡುತ್ತಿದ್ದ ಆಹಾರ ಸೇವಿಸಿ ನಾನು ಅನಾರೋಗ್ಯಕ್ಕೆ ಒಳಗಾಗುತ್ತಿದ್ದೆ. ಇದು ಏಕೆ ಹೀಗೆ ಎಂದು ನನ್ನನ್ನು ನಾನು ಪ್ರಶ್ನೆ ಮಾಡಿಕೊಂಡು, ಆಸ್ಪತ್ರೆಯಲ್ಲಿ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಾಗ, ನನಗೆ ತಿಳಿಯಿತು ನೀರಿನಲ್ಲಿ ವಿಷದ ಅಂಶವನ್ನು ಬೆರೆಸಲಾಗಿದೆ ಎಂದು ತಿಳಿಯಿತು. ಇದರಿಂದ ನನಗೆ ಅನುಮಾನ ಬಂದಿತು” ಎಂದು ಅವರು ಹೇಳಿದರು.
First published: