Anitha EAnitha E
|
news18-kannada Updated:January 18, 2021, 9:58 AM IST
ತಾಂಡವ್ ವೆಬ್ ಸರಣಿ
ಬಾಬಿ ಡಿಯೋಲ್ ನಟಿಸಿರುವ ಆಶ್ರಮ್ ಹಾಗೂ ಈ ಹಿಂದೆ ಅನುಷ್ಕಾ ಶರ್ಮಾ ನಿರ್ಮಾಣದ ಪಾತಾಳ್ ಲೋಕ್ ಸೇರಿದಂತೆ ಹಾಲವಾತು ವೆಬ್ ಸರಣಿಗಳ ಮೇಲೆ ದೂರು ದಾಖಲಾಗಿವೆ. ವೆಬ್ ಸರಣಿಗಳಲ್ಲಿ ಒಂದು ಸಮುದಾಯದವರ ಧಾರ್ಮಿಕ ಭಾವನೆ ಅಥವಾ ನಿಂದನಾತ್ಮಕ ಪದಗಳ ಬಳಕೆ ಹೀಗೆ ನಾನಾ ಕಾರಣಗಳಿಂದ ವೆಬ್ ಸರಣಿಗಳ ವಿರುದ್ಧ ದೂರು ದಾಖಲಾಗುತ್ತಿದೆ. ಈಗ ಲೆಟೆಸ್ಟ್ ಆಗಿ ರಿಲೀಸ್ ಆಗಿರುವ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ತಾಂಡವ್ ವೆಬ್ ಸರಣಿ ವಿರುದ್ಧ ಸಹ ಎಫ್ ಐ ಆರ್ ದಾಖಲಿಸಲಾಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಹಿನ್ನಲೆಯಲ್ಲಿ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿರುವ ತಾಂಡವ್ ವೆಬ್ ಸರಣಿಯ ವಿರುದ್ಧ ದೂರು ದಾಖಲಿಸಲಾಗಿದೆ. ಅಲಿ ಅಬ್ಬಾಸ್ ಜಫರ್ ನಿರ್ದೇಶನ ಈ ತಾಂಡವ್ ವೆಬ್ ಸರಣಿ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ.
ರಿಲೀಸ್ಗೆ ಮುನ್ನ ಸಖತ್ ಸದ್ದು ಮಾಡಿದ್ದ ತಾಂಡವ್ ವೆಬ್ ಸರಣಿಯಲ್ಲಿ ನಟ ಸೈಫ್ ಅಲಿ ಖಾನ್ ಜೊತೆ ಡಿಂಪಲ್ ಕಪಾಡಿಯಾ, ಸುನಿಲ್ ಗ್ರೋವರ್, ತಿಗ್ಮಾಂಶು ಧೂಲಿಯಾ, ದಿನೂ ಮಾರಿಯಾ ಸೇರಿದಂತೆ ಹಲವಾರು ಬಾಲಿವುಡ್ ನಟ-ನಟಿಯರು ಅಭಿನಯಿಸಿದ್ದಾರೆ.

ಸೈಫ್ ಅಲಿ ಖಾನ್
ಈ ವೆಬ್ ಸರಣಿಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ವಿಷಯಗಳಿವೆ. ಈ ಕಾರಣದಿಂದಾಗಿ ಈ ವೆಬ್ ಸರಣಿಯ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಿಜೆಪಿ ಸಂಸದ ಮನೋಜ್ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಅಮೆಜಾನ್ ಪ್ರೈಂಗೆ ನೋಟೀಸ್ ನೀಡಲಾಗಿದೆ.
ಅಲಿ ಅಬ್ಬಾಸ್ ಜಫರ್ ನಿರ್ಮಿಸಿ, ನಿರ್ದೇಶನ ಮಾಡಿರುವ ಈ ವೆಬ್ ಸರಣಿಗೆ ಗೌರವ್ ಸೋಲಂಕಿ ಕಥೆ ಬರೆದಿದ್ದಾರೆ. ಈ ವೆಬ್ ಸರಣಿಯ ವಿರುದ್ಧ ಸದ್ಯ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ತಾಂಡವ್ ವೆಬ್ ಸರಣೀ ರಿಲೀಸ್ ಆಗುತ್ತಿದ್ಧಂತೇ ಅದರ ವಿರುದ್ಧ ಸಾಕಷ್ಟು ಪ್ರತಿಭಟನೆ ಸಹ ನಡೆಯಿತು, ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ತಾಂಡವ್ ಎಂದು ಟ್ರೆಂಡ್ ಮಾಡಲಾಗುತ್ತಿದೆ.
Published by:
Anitha E
First published:
January 18, 2021, 9:58 AM IST