Piracy: ಕಂಗನಾ ರನೋತ್ ಅಭಿನಯದ Thalaivii ಸಿನಿಮಾಗೂ ತಪ್ಪಲಿಲ್ಲ ತಮಿಳ್‍ರಾಕರ್ಸ್ ಕಾಟ..!

ನಿನ್ನೆಯಷ್ಟೆ ಬಿಡುಗಡೆಯಾಗಿರುವ ತಲೈವಿ ಸಿನಿಮಾ, ಎಲ್ಲೆಡೆ ಯಸಸ್ವಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಉತ್ತಮ ಪ್ರತಿಕ್ರಿಯೆ ಸಹ ಪಡೆದುಕೊಳ್ಳುತ್ತಿದೆ. ಅದರಲ್ಲೂ ಕಂಗನಾ ಅಭಿನಯಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಈ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ.

ಕಂಗನಾ ರನೋತ್​

ಕಂಗನಾ ರನೋತ್​

  • Share this:
ಬಾಲಿವುಡ್ ನಟಿ ಕಂಗನಾ ರನೋತ್ ಅವರು ಅಭಿನಯಿಸಿರುವ ಚಲನಚಿತ್ರ ತಲೈವಿ ರಿಲೀಸ್ ಆದ ದಿನವೇ ಆನ್‍ಲೈನ್‍ನಲ್ಲಿ ಸೋರಿಕೆ ಆಗಿದೆ. ತಲೈವಿ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರವಾಗಿದೆ.  ಸಿನಿಮಾ ಸೆಪ್ಟೆಂಬರ್ 10 ರಂದು ಅಂದರೆ ನಿನ್ನೆ ಬಿಡುಗಡೆ ಆಗಿತ್ತು. ಓಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದರೂ ಕೂಡ ಕೆಲವು ಸಿನಿಮಾಗಳು ಪೈರೆಸಿ ಸಮಸ್ಯೆ ಎದುರಿಸುತ್ತಿವೆ. ತಮಿಳ್‍ರಾಕರ್ಸ್ , ಮೂವಿರೂಲ್ಸ್ , ಟೆಲಿಗ್ರಾಂ ಮತ್ತಿತರ ಜನಪ್ರಿಯ ವೆಬ್‍ಸೈಟ್‍ಗಳು ಇನ್ನೂ ಕೂಡ ಸಿನಿಮಾ ಪೈರೆಸಿಯಲ್ಲಿ ನಿರತವಾಗಿದ್ದು, ಸಿನಿಮಾ ಉದ್ದಿಮೆಗೆ ಹೊಡೆತ ನೀಡುತ್ತಿವೆ.

ಬಾಲಿವುಡ್ ನಟಿ ಕಂಗನಾ ರನೋತ್ ಅಭಿನಯಿಸಿರುವ ಚಲನಚಿತ್ರ ತಲೈವಿ ಸಿನಿಮಾ ಆನ್‍ಲೈನ್‍ನಲ್ಲಿ ಸೋರಿಕೆ ಆಗಿದೆ. ತಲೈವಿ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ದಿವಂಗತ ಜಯಲಲಿತಾ ಅವರ ಜೀವನದ ನಿರೂಪಣೆಯುಳ್ಳ ಸಿನಿಮಾ. ಕಂಗನಾ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ಇದಾಗಿತ್ತು.

kangana ranaut, movie thalaivi, j jayalalitha, kangana ranaut movie thalaivi, Hollywood Movies, Kangana on Hollywood movies, Kangana Ranaut entering Politics, ಕಂಗನಾ ರನೋತ್​, ಕಂಗನಾ ರನೋತ್​ ರಾಜಕೀಯ ಪ್ರವೇಶ, ಹಾಲಿವುಡ್​ ಸಿನಿಮಾಗಳನ್ನು ದೂರವಿಡಿ ಎಂದ ಕಂಗನಾ, Thalaivi star Kangana Ranaut said we need to discourage hollywood movies ae
ಕಂಗನಾ ರನೋತ್


ಕಳೆದ ಕೆಲವು ವರ್ಷಗಳಿಂದ ತಮಿಳ್‍ರಾಕರ್ಸ್ ವೆಬ್‍ಸೈಟ್ ಬ್ಲಾಕ್‍ಬಸ್ಟರ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೂಡಲೇ ಅದನ್ನು ಸೋರಿಕೆ ಮಾಡುವುದರಲ್ಲಿ ನಿರತವಾಗಿದೆ. ಸಿನಿಮಾ ನಿರ್ಮಾಪಕರು ಮತ್ತು ಸಿನಿಮಾ ಮಂದಿರಗಳ ಮಾಲೀಕರು ಅದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡರೂ ತಮಿಳ್‍ರಾಕರ್ಸ್ ಸಿನಿಮಾ ಪೈರಸಿ ಮಾಡುವ ಕೆಲಸವನ್ನು ಮುಂದುವರೆಸಿಕೊಂಡೇ ಬಂದಿದೆ.

ಇದನ್ನೂ ಓದಿ: Bigg Boss Kannada Season 8: ದಿವ್ಯಾ ಸುರೇಶ್​ ಮನೆಯಲ್ಲಿ ವಿಶೇಷ ಭೋಜನ ಸವಿದ ಮಂಜು ಪಾವಗಡ

ತಲೈವಿ ಸಿನಿಮಾವನ್ನು ವಿತರಣೆ ಮಾಡಿರುವುದು ಅಮೆಜಾನ್ ಪ್ರೈಂ ಮತ್ತು ನೆಟ್‍ಫ್ಲಿಕ್ಸ್‌ಗೆ ಮಾತ್ರ. ಆದರೆ ಈಗ ಆ ಸಿನಿಮಾವನ್ನು ಟೆಲಿಗ್ರಾಂ, ತಮಿಳುರಾಕರ್ಸ್ ಮತ್ತು ಮೂವಿರೂಲ್ಸ್‌ನಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ.

ಇದನ್ನೂ ಓದಿ: Thalaivii: ತನ್ನ ಬಯೋಪಿಕ್​ನಲ್ಲಿ ಐಶ್ವಯಾ ರೈ ನಾಯಕಿಯಾಗಬೇಕೆಂದು ಬಯಸಿದ್ದ ಜಯಲಲಿತಾ..!

ಸಿನಿಮಾ ಬಿಡುಗಡೆಗೆ ತೊಂದರೆಗಳು ಎದುರಾಗುತ್ತಿದ್ದ ಕಾರಣದಿಂದಾಗಿ ಕಂಗನಾ ರನೋತ್​ ಮತ್ತು ತಲೈವಿ ಸಿನಿಮಾ ಬಹಳ ದೀರ್ಘಕಾಲದಿಂದ ಸುದ್ದಿಯಲ್ಲಿತ್ತು. ಈ ಸಿನಿಮಾವನ್ನು ಕೇವಲ ಸಿನಿಮಾ ಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಬೇಕು ಎಂದು ಇದರ ನಿರ್ಮಾಪಕರು ಆರಂಭದಿಂದಲೂ ಯೋಜನೆ ಹಾಕಿಕೊಂಡಿದ್ದರು. ಅದೇನೇ ಇದ್ದರೂ, ಈಗ ಸಿನಿಮಾದ ಸೋರಿಕೆಯಿಂದಾಗಿ ಅದರ ಆದಾಯಕ್ಕೆ ತೊಂದರೆ ಉಂಟಾಗಬಹುದು.

ತಲೈವಿ ಸಿನಿಮಾ ಮತ್ತು ಕಂಗನಾ ರನೋತ್ ಅಭಿನಯಕ್ಕೆ ಮೆಚ್ಚುಗೆಯ ಸುರಿಮಳೆ ಆಗುತ್ತಿದೆ. ಕಂಗನಾ ರನೋತ್ ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಇದುವರೆಗೆ ಎಲ್ಲಾ ಚಿತ್ರಗಳಲ್ಲಿ ಬಳಿಕುವ ಬಳ್ಳಿಯಾಗಿಯೇ ಕಾಣಿಸಿಕೊಂಡಿರುವ ಹಾಗೂ ನಿಜ ಜೀವನದಲ್ಲೂ ಅಂತದ್ದೇ ಮೈಮಾಟ ಕಾಪಾಡಿಕೊಂಡಿರುವ ಕಂಗನಾ, ತಲೈವಿ ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಪಾತ್ರ ಆದಷ್ಟು ಸಹಜ ಮತ್ತು ಉತ್ತಮವಾಗಿ ಮೂಡಿ ಬರಲೆಂದು ಕಂಗನಾ , ಜಯಲಲಿತಾ ಜೀವನದ ಬಗ್ಗೆ ತಿಳಿದುಕೊಳ್ಳುವುದರಿಂದ ಹಿಡಿದು ಅವರ ಶೈಲಿಯನ್ನು ತಮ್ಮದಾಗಿಸಿಕೊಳ್ಳುವವರೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಇದನ್ನೂಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty

ಕಂಗನಾ ರನೋತ್ ಅವರು ಜಯಲಲಿತಾ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಈ ಸಿನಿಮಾ ಕುರಿತಾದ ಒಂದು ವಿಷಯ ಈಗ ಹೊರ ಬಿದ್ದಿದೆ. ತಮ್ಮ ಪಾತ್ರದಲ್ಲಿ ಕಂಗನಾ ಬದಲು ಐಶ್ವರ್ಯಾ ರೈ ನಟಿಸಬೇಕು ಅನ್ನೋದು ಜಯಲಲಿತಾರ ಆಸೆಯಾಗಿತ್ತಂತೆ. ಈ ವಿಷಯವನ್ನು ಹಿರಿಯ ನಟಿ ಸಿಮಿ ಗರೆವಾಲ್​ ಅವರು ಟ್ವೀಟ್​ ಮಾಡಿದ್ದಾರೆ.
Published by:Anitha E
First published: