ನೇಣು ಬಿಗಿದ ಸ್ಥಿತಿಯಲ್ಲಿ ಜನಪ್ರಿಯ ನಟಿಯ ಪತಿ ಮೃತದೇಹ ಪತ್ತೆ: ಕೊಲೆ ಶಂಕೆ?

43ರ ಹರೆಯದ ಸಸಿಕುಮಾರ್ (43) ಅವರು ಬೆಂಗಳೂರಿಗೆ ಪ್ರಯಾಣಿಸುತ್ತಿರುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಬುಧವಾರ ಹೊರಟ್ಟಿದ್ದರು. ವೆಲ್ಲೂರಿಗೆ ಬಸ್ ಹತ್ತಿದ ಅವರು ಅಂಬೂರ್ ಬಳಿ ಇಳಿದು ಜೋಲರ್‌ಪೇಟೆ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾರೆ.

news18-kannada
Updated:October 26, 2019, 2:22 PM IST
ನೇಣು ಬಿಗಿದ ಸ್ಥಿತಿಯಲ್ಲಿ ಜನಪ್ರಿಯ ನಟಿಯ ಪತಿ ಮೃತದೇಹ ಪತ್ತೆ: ಕೊಲೆ ಶಂಕೆ?
ಸಾಂದರ್ಭಿಕ ಚಿತ್ರ
  • Share this:
ತಮಿಳು ಕಿರುತೆರೆಯಲ್ಲಿ ಮನೆಮಾತಾಗಿರುವ ನಟಿ ರಾಘವಿ ಅವರ ಪತಿ ಸಸಿ ಕುಮಾರ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮಿಳುನಾಡಿನ ಜೋಲಾರ್​ಪೇಟೆ ರೈಲ್ವೆ ನಿಲ್ದಾಣದ ಬಳಿ ಮರವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.

ಸಸಿ ಕುಮಾರ್ ಟಿವಿ ಸೀರಿಯಲ್​ಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿಕೊಂಡಿದ್ದರು. ಇವರ ಮರಣದ ವಿಚಾರವನ್ನು ಸಹೋದ್ಯೋಗಿ ಮಹೇಶ್ ಎಂಬವರು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಹರಿಬಿಡುವ ಮೂಲಕ ಬಹಿರಂಗ ಪಡಿಸಿದ್ದರು.

43ರ ಹರೆಯದ ಸಸಿಕುಮಾರ್ (43) ಅವರು ಬೆಂಗಳೂರಿಗೆ ಪ್ರಯಾಣಿಸುತ್ತಿರುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಬುಧವಾರ ಹೊರಟ್ಟಿದ್ದರು. ವೆಲ್ಲೂರಿಗೆ ಬಸ್ ಹತ್ತಿದ ಅವರು ಅಂಬೂರ್ ಬಳಿ ಇಳಿದು ಜೋಲರ್‌ಪೇಟೆ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ ಸಸಿ ಕುಮಾರ್ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಆಗಿರಲಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲೇ ಲಿಪ್​ಲಾಕ್: ಕನ್ನಡ ಚಿತ್ರನಟಿಯ ಫೋಟೋ ವೈರಲ್

ರಜನಿಕಾಂತ್ ಅಭಿನಯದ 'ರಾಜಾ ಚಿನ್ನಾ ರೋಜಾ' ಹಾಗೂ ವಿಜಯ್ ನಟನೆಯ 'ಒನ್ಸ್​ ಮೋರ್' ಚಿತ್ರದಲ್ಲೂ ಸಸಿಕುಮಾರ್ ಕೆಲಸ ಮಾಡಿದ್ದರು. ಹಾಗೆಯೇ ಚಿತ್ರರಂಗದಲ್ಲೂ ಅನೇಕರು ಇವರಿಗೆ ತುಂಬಾ ಆಪ್ತರಾಗಿದ್ದರು. ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಸಿಕುಮಾರ್ ಸಾವಿನ ಸುತ್ತ ಅನುಮಾನಗಳು ಮೂಡಿವೆ.

ಇದನ್ನೂ ಓದಿ: Tanya Hope: ಹೊಸ ಅವತಾರದಲ್ಲಿ ಯಜಮಾನನ ಬಸಣ್ಣಿ..!ಇದು ಆತ್ಮಹತ್ಯೆಯೋ ಅಥವಾ ವ್ಯವಸ್ಥಿತ ಕೊಲೆ ಎಂಬ ಬಗ್ಗೆ ಇನ್ನೂ ಕೂಡ ಪೊಲೀಸರು ದೃಢಪಡಿಸಿಲ್ಲ. ಆದರೆ ಸಸಿಕುಮಾರ್ ಅವರ ಆಪ್ತ ಮೂಲಗಳ ಪ್ರಕಾರ ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಈ ಪ್ರಕರಣ ದಾಖಲಿಸಿರುವ ಪೊಲೀಸರು ನಟಿ ರಾಘವಿ ಸೇರಿದಂತೆ ಒಂದಷ್ಟು ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 
First published: October 26, 2019, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading