Rajinikanth: ಸಿನಿಮಾಗೆ ಬರೋ ಮುಂಚಿನಿಂದಲೂ ರಜನಿಕಾಂತ್ ಸೂಪರ್ ಸ್ಟಾರ್! ವೈರಲ್ ಆಗಿದೆ ತಲೈವಾ ಹಳೆಯ ಫೋಟೋ, ನೀವೂ ನೋಡಿ

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಅವರು ಹಿಂದೊಮ್ಮೆ ನಾಟಕದಲ್ಲಿ ನಟಿಸುತ್ತಿರುವಾಗ ಬೆಂಗಳೂರಿನಲ್ಲಿ ತೆಗೆಸಿಕೊಂಡ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ ಚಲನ ಚಿತ್ರೋದ್ಯಮದ ಹಿರಿಯ ನಟರಾದ ದಿವಂಗತ ನಟ ಡಾ. ರಾಜ್ ಕುಮಾರ್ (Dr. Rajkumar), ರಜನೀಕಾಂತ್ (Rajinikanth) ಹೀಗೆ ಅನೇಕ ನಟರು ತಾವು ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವ ಮೊದಲು ನಾಟಕಗಳಲ್ಲಿ (Drama) ಅಭಿನಯಿಸಿ ಸೈ ಎನಿಸಿಕೊಂಡು ಸರಳವಾದ ನಟನೆಯನ್ನು ಮೈಗೂಡಿಸಿಕೊಂಡು ನಂತರ ಚಿತ್ರೋದ್ಯಮಕ್ಕೆ ಕಾಲಿಟ್ಟವರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಿರಿಯ ನಟರು ಆಗಿನ ನಾಟಕಗಳಲ್ಲಿ ನಟಿಸಿದ ಫೋಟೋಗಳನ್ನು (Photo) ನೋಡುವುದೇ ಈಗಿನ ಯುವ ನಟರಿಗೆ ಮತ್ತು ಯುವ ಪೀಳಿಗೆಗೆ ಒಂದು ಪ್ರೇರಣೆ ಎಂದು ಹೇಳಬಹುದು. ಆದರೆ ಈಗೇಕೆ ನಟರ ಹಿಂದಿನ ದಿನಗಳಲ್ಲಿ ಅವರು ನಟಿಸಿದ ನಾಟಕದ ಫೋಟೋಗಳ ಬಗ್ಗೆ ಮಾತಾಡುತ್ತಿದ್ದೇವೆ ಎಂದು ನಿಮಗೆ ಕೊಂಚ ಆಶ್ಚರ್ಯವಾಗಿರಬಹುದು. ಆದರೆ ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಅವರು ಹಿಂದೊಮ್ಮೆ ನಾಟಕದಲ್ಲಿ ನಟಿಸುತ್ತಿರುವಾಗ ತೆಗೆಸಿಕೊಂಡ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೊದಲು ಬೆಳ್ಳಿ ತೆರೆ ಮೇಲೆ ರಜನಿ:

1975 ರಲ್ಲಿ ಕಮಲ್ ಹಾಸನ್ ನಟಿಸಿದ ಕೆ. ಬಾಲಚಂದರ್ ಅವರ ನಿರ್ದೇಶನದ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸುವುದರ ಮೂಲಕ ನಟ ರಜನೀಕಾಂತ್ ಬೆಳ್ಳಿ ಪರದೆಯ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ ಅವರ ವಿಭಿನ್ನ ನಟನೆ ಮತ್ತು ಅವರ ಸ್ಟೈಲ್ ಸಹ ತುಂಬಾ ಜನರಿಗೆ ಇಷ್ಟವಾಗುವುದರೊಂದಿಗೆ ದೊಡ್ಡ ನಟನಾಗಿ ಬೆಳೆದರು.

ಆ ಚಿತ್ರ ಮಾಡಿದ ಒಂದು ದಶಕದೊಳಗೆ ಅವರು ಚಿಕ್ಕ ನಟನಿಂದ ಸೂಪರ್ ಸ್ಟಾರ್ ಪಟ್ಟಕ್ಕೆ ತಲುಪಿದರು ಮತ್ತು ಸುಮಾರು ನಾಲ್ಕು ದಶಕಗಳಿಂದ ಅವರ ಸ್ಥಾನವನ್ನು ತಮ್ಮ ವಿಭಿನ್ನವಾದ ನಟನೆಯಿಂದ ಕಾಯ್ದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: Rajinikanth ಅಭಿಮಾನಿಗಳಿಗೆ ಗುಡ್ ನ್ಯೂಸ್: ತಲೈವಾ ಹೊಸಾ ಸಿನಿಮಾ ಫಸ್ಟ್ ಲುಕ್ ರಿಲೀಸ್, ವಿಡಿಯೋ ನೋಡಿ

ಬೆಂಗಳೂರಲ್ಲಿ ತೆಗೆದ ರಜನಿ ಫೋಟೋ ವೈರಲ್:

ಆದರೆ 70ರ ದಶಕದಲ್ಲಿ ರಜನಿ ತಮ್ಮ ಹುಟ್ಟೂರು ಬೆಂಗಳೂರಿನಲ್ಲಿ ಕನ್ನಡ ರಂಗನಾಟಕದಲ್ಲಿ ನಟಿಸುತ್ತಿರುವ ಅಪರೂಪದ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು ಎಲ್ಲಡೆ ವೈರಲ್ ಆಗಿದೆ. ಸಹಜವಾಗಿ ಅವರು ಆ ಸಮಯದಲ್ಲಿ ಅವರ ಹೆಸರು ಶಿವಾಜಿರಾವ್ ಗಾಯಕ್ವಾಡ್ ಆಗಿತ್ತು ಎನ್ನುವುದು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

Tamil superstar rajinikanth rare pic viral in drama before movie debut

ಈ ವೈರಲ್ ಆದ ಫೋಟೋದಲ್ಲಿ ಅವರು ಬುಡಕಟ್ಟು ಜನರ ಉಡುಪನ್ನು ಧರಿಸಿದ್ದು ಮತ್ತು ಕೈಯಲ್ಲಿ ಬೆಂಕಿಯನ್ನು ಹಿಡಿದುಕೊಂಡಿರುವುದನ್ನು ಅದರಲ್ಲಿ ನೋಡಬಹುದು. ಈ ಫೋಟೋ ಕೆಳಗಡೆ 70ರ ದಶಕದಲ್ಲಿ ನಟ ಶಿವಾಜಿರಾವ್ ಅವರಿಂದ ಕರ್ನಾಟಕ ಬಿಟಿಎಸ್ ಶೋ ಎಂದು ಬರೆಯಲಾಗಿದೆ

ನಟನೆಯ ಬಗ್ಗೆ ಅವರಿಗಿದ್ದ ಆ ಉತ್ಸಾಹವೇ ಅವರನ್ನು 70ರ ದಶಕದ ಆರಂಭದಲ್ಲಿ ಮದ್ರಾಸ್‌ಗೆ ಹೋಗಿ ಒಬ್ಬ ಸಣ್ಣ ನಟನಾಗುವಂತೆ ಪ್ರೇರೇಪಿಸಿತು ಮತ್ತು ಆನಂತರ ಆದದೆಲ್ಲವೂ ಈಗ ಒಂದು ಹಿಂದಿನ ಕಥೆ ಎಂದು ಹೇಳಬಹುದು.

ರಜನಿಯ 'ತಲೈವರ್ 169':

ರಜನಿ ಅವರ ಇತ್ತೀಚಿನ ಬಿಡುಗಡೆಯಾದ 'ಅನ್ನಾಥೆ' ಸಿರುತಾಯಿ ಶಿವ ನಿರ್ದೇಶನದ ಮತ್ತು ಸನ್ ಪಿಕ್ಚರ್ಸ್ ನಿರ್ಮಿಸಿರುವ ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆಗಳು ಬಂದರೂ ಸಹ ಬಾಕ್ಸ್ ಆಫೀಸ್‌ ಗಲ್ಲಾ ಪೆಟ್ಟಿಗೆಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.

ಇದನ್ನೂ ಓದಿ: Rajinikanth: `ತಲೈವಾ’ ಸಿನಿಮಾಗೆ ದುಡ್ಡು ಹಾಕಲ್ಲ ಎಂದ ಬೋನಿ ಕಪೂರ್​.. ಟ್ರೋಲರ್ಸ್​ ಕೈಲಿ ಸಿಕ್ಕಿ ಫುಲ್​ ರೋಸ್ಟ್​!

ಅವರು ಶೀಘ್ರದಲ್ಲಿಯೇ ನೆಲ್ಸನ್ ನಿರ್ದೇಶನದ 'ತಲೈವರ್ 169' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಮತ್ತೊಮ್ಮೆ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟರಾದ ವಡಿವೇಲು ಅವರು ಸಹ ರಜನಿ ಅವರ ಜೊತೆಗೆ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಜೋಡಿಯು ಈಗಾಗಲೇ ಅನೇಕ ತಮಿಳು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದು, ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.
Published by:shrikrishna bhat
First published: