ರಕ್ಷಿತ್​ಗೆ ಕಾಲ್ ಮಾಡಿದ ರಜನಿಕಾಂತ್, 777 Charlie ಬಗ್ಗೆ ಏನಂದ್ರು ಸೂಪರ್ ಸ್ಟಾರ್​?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಸಹ 777 ಚಾರ್ಲಿ ಚಿತ್ರವನ್ನು ನೋಡಿ ಮೆಚ್ಚಿಕೊಂಡು ನಟ ರಕ್ಷಿತ್ ಶೆಟ್ಟಿ ಅವರಿಗೆ ಸ್ವತಃ ರಜನಿಕಾಂತ್​ ಅವರೇ ಕಾಲ್ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ.

  • Share this:

ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ ಚಲನಚಿತ್ರ 777 ಚಾರ್ಲಿ (777 Charlie) ಈಗಾಗಲೇ ಬಿಡುಗಡೆಯಾಗಿ ಎಲ್ಲಡೆ ಭರ್ಜರಿ ಪ್ರದರ್ಶನ ತೋರುತ್ತಿದೆ. ಅಲ್ಲದೇ ಅನೇಖ ಗಣ್ಯರು ಈ ಸಿನಿಮಾವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಬಾಲಿವುಡ್​ನ ಜಾನ್​ ಅಬ್ರಹಾಂ ಸೇರಿದಂತೆ ಅನೇಕರು ಚಿತ್ರ ವೀಕ್ಷಿಸಿ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಆದರೆ ಇದೀಗ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಸಹ 777 ಚಾರ್ಲಿ ಚಿತ್ರವನ್ನು ನೋಡಿ ಮೆಚ್ಚಿಕೊಂಡು ನಟ ರಕ್ಷಿತ್ ಶೆಟ್ಟಿ ಅವರಿಗೆ ಸ್ವತಃ ರಜನಿಕಾಂತ್​ ಅವರೇ ಕಾಲ್ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ. ಹಾಗಿದ್ರೆ ರಜನಿಕಾಂತ್ ಏನಂದ್ರು ನೊಡೋನ ಬನ್ನಿ.


ರಕ್ಷಿತ್​ಗೆ ಕರೆ ಮಾಡಿದ ರಜನಿಕಾಂತ್:


777 ಚಾರ್ಲಿ ಚಿತ್ರ ವೀಕ್ಷಿಸಿದ ನಂತರ ಸ್ವತಃ ತಮಿಳಿನ ಸೂಪರ್ ಸ್ಟಾರ್​ ರಜನಿಕಾಂತ್ ಅವರೇ ರಕ್ಷಿತ್ ಶೆಟ್ಟಿ ಅವರಿಗೆ ಕಾಲ್ ಮಾಡಿ ಮಾತನಾಡಿದ್ದಾರಂತೆ. ರಜನಿಕಾಂತ್ ಮಾತನಾಡಿರುವ ಕುರಿತು ಟ್ವೀಟ್ ಮಾಡಿರುವ ರಕ್ಷಿತ್, ‘ಉತ್ತಮ ಸಂಗತಿಯೊಂದಿಗೆ ಇಂದಿನ ದಿನ ಆರಂಭವಾಗಿದೆ. ರಜನಿಕಾಂತ್ ಸರ್ ಅವರಿಂದ ಕರೆ ಬಂದಿತ್ತು. ನಿನ್ನೆ ರಾತ್ರಿ ಅವರು '777 ಚಾರ್ಲಿ' ಸಿನಿಮಾ ನೋಡಿದ್ದಾರೆ. ಸಿನಿಮಾ ನೊಡಿ ಮೆಚ್ಚಿಕೊಂಡಿದ್ದಾರಂತೆ. ಸಿನಿಮಾದ ಮೇಕಿಂಗ್  ಮತ್ತು ಡಿಸೈನ್ ಅವರಿಗೆ ಬಹಳ ಇಷ್ಟವಾಗಿದೆ ಎಂದು ತಿಳಿಸಿದ್ದಾರೆ‘ ಎಂದು ಟ್ವಿಟ್ ಮಾಡಿದ್ದಾರೆ.



ಇದು ನನ್ನ ಜೀವನದ ಅದ್ಭುತ ಅನುಭವ:


ಈ ಕುರಿತು ಸರಣಿ ಟ್ವಿಟ್ ಮಾಡಿರುವ ರಕ್ಷಿತ್ ಶೆಟ್ಟಿ, ‘ರಜನಿಕಾಂತ್ ಅವರಿಗೆ ಸಿನಿಮಾದ ಕ್ಲೈಮ್ಯಾಕ್ಸ್ ಇಷ್ಟವಾಗಿದೆಯಂತೆ. ಜೊತೆಗೆ ಚಿತ್ರವು ಒಂದು ಭಾವನಾತ್ಮ ಅಂತ್ಯವನ್ನು ಕಂಡಿದೆ ನಮ್ಮ ಸಿನಿಮಾ ಬಗ್ಗೆ ಸೂಪರ್ ಸ್ಟಾರ್ ಅವರಿಂದ ಈ ರೀತಿಯ ಮಾತುಗಳು ಕೇಳಿದ್ದು ನನ್ನ ಜೀವನದಲ್ಲಿನ ಅದ್ಭುತ ಅನುಭವವಾಗಿದೆ. ರಜನೀಕಾಂತ್ ಸರ್ ನಿಮಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.



ಸಿನಿಮಾ ನೋಡಿ ಭಾವುಕರಾದ ಸಿಎಂ:


ಚಾರ್ಲಿ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ನಾಯಿ ಪಾತ್ರ ಮೆಚ್ಚುವಂಥದ್ದು. ಜೊತೆಗೆ ನಟ ರಕ್ಷಿತ್ ಶೆಟ್ಟಿ ತುಂಬ ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾ ನೋಡಿದಾಗ ಸತ್ತ ನನ್ನ ನಾಯಿ ನೆನಪಾಯಿತು. ಈಗ  ದಿಯಾ ಎನ್ನುವ ನಾಯಿ ಸಾಕ್ತಿದ್ದೇನೆ.  ಚಾರ್ಲಿ ರೀತಿ ದಿಯಾ ನಾಯಿ ಮನೆಗೆ ಬಂದಾಗ ತಬ್ಬಿಕೊಳ್ಳುತ್ತೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: CM Bommai ಕಣ್ಣಲ್ಲೂ ನೀರು ತರಿಸಿದ ಚಾರ್ಲಿ, ನನಗೆ ಸನ್ನಿ ನೆನಪಾಯ್ತು ಎಂದ ದೊರೆ


777 ಚಾರ್ಲಿಗೆ ತೆರಿಗೆ ವಿನಾಯಿತಿ:


ಕರ್ನಾಟಕ ರಾಜ್ಯದಾದ್ಯಂತ ಚಲನಚಿತ್ರ ಮಂದಿರಗಳು  ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಾರ್ಲಿ ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ದಿನಾಂಕ: 19-06-2022 ರಿಂದ 6 ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ( SGST) ಹಿಂಪಾವತಿ ಸೌಲಭ್ಯವನ್ನು ಈ ಕೆಳಕಂಡ ಷರತ್ತುಗಳೊಂದಿಗೆ ನೀಡಿರೋದಾಗಿ ಸರ್ಕಾರ ತಿಳಿಸಿದೆ.

Published by:shrikrishna bhat
First published: