ಚೆಕ್ಬೌನ್ಸ್ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಮತ್ತು ಅವರ ಹೆಂಡತಿ ನಟಿ ರಾಧಿಕಾ ಶರತ್ಕುಮಾರ್ ಅವರಿಗೆ ಇಂದು ವರ್ಷ ಜೈಲು ಶಿಕ್ಷೆ ವಿಧಿಸಿ ಚೆನ್ನೈನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ತಾರಾದಂಪತಿಗಳ ವಿರುದ್ದ ಬಾಕಿ ಇದ್ದ ಎರಡು ಚೆಕ್ಬೌನ್ಸ್ ಪ್ರಕರಣಗಳಲ್ಲಿನ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು 2019ರಲ್ಲಿ ಮದ್ರಾಸ್ ಹೈ ಕೋರ್ಟ್ ನಿರಾಕರಿಸಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ತಾರಾ ದಂಪತಿಗೆ ಒಂದು ವರ್ಷ ಸಜೆ ವಿಧಿಸಿ ಆದೇಶ ನೀಡಿದೆ.
ಶರತ್ ಕುಮಾರ್ ಮತ್ತು ರಾಧಿಕಾ ಪಾಲುದಾರಿಕೆಯ ಮ್ಯಾಜಿಕ್ ಫ್ರೇಂ ಸಂಸ್ಥೆಯು 2014ರಲ್ಲಿ ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್ ನಟನೆಯಲ್ಲಿ ವಾಟ್ ಎ ಮ್ಯಾಜಿಕ್ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ರೆಡಿಯನ್ಸ್ ಎಂಬ ಮೀಡಿಯಾ ಫೈನಾನ್ಸ್ ಕಂಪನಿಯಿಂದ ರಾಧಿಕಾ, ಶರತ್ ಕುಮಾರ್ ಹಾಗೂ ನಿರ್ಮಾಪಕ ಲಿಸ್ಟಿನ್ ಸ್ಟೇಪನ್ನ ಮಾಜ್ಯಿಕ್ ಪ್ರೇಮ್ಸ್ ಎಂಬ ಕಂಪನಿಗಾಗಿ 1. 5 ಕೋಟಿ ಹಣವನ್ನು ಸಾಲ ಪಡೆದಿದ್ದರು.
ಈ ಹಣವನ್ನು 2015ರಲ್ಲಿ ಮರಳಿಸುವುದಾಗಿ ಈ ದಂಪತಿ ಭರವಸೆ ನೀಡಿದ್ದರು. ಅಲ್ಲದೇ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಹಣ ಹಿಂದಿರುಗಿಸುವುದಾಗಿ ಹೇಳಿದ್ದ ಈ ದಂಪತಿ ಮಾತು ತಪ್ಪಿದ್ದರು. ಈ ಹಣವನ್ನು ಬಳಸಿಕೊಂಡು ಈ ತಾರಾ ದಂಪತಿ ಮತ್ತೊಂದು ಚಿತ್ರ ನಿರ್ಮಾಣ ಮಾಡಿದ್ದರು. ಬಳಿಕ ಈ ಹಣವನ್ನು ಎರಡು ಚೆಕ್ ಮೂಲಕ ಹಿಂತಿರುಗಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ