News18 India World Cup 2019

ಮಗುವಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ!

news18
Updated:July 19, 2018, 5:10 PM IST
ಮಗುವಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ!
news18
Updated: July 19, 2018, 5:10 PM IST
ನ್ಯೂಸ್​ 18 ಕನ್ನಡ 

ತಮಿಳಿನ ಕಿರುತೆರೆ ನಟಿ ಪ್ರಿಯಾಂಕಾ ಎಂಬುವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಚೆನ್ನೈನ ವಲಸವಕ್ಕಂನಲ್ಲಿರುವ ಮನೆಯಲ್ಲಿ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಜ್ ​ತಕ್​ ವರದಿ ಮಾಡಿದೆ.

ಬುಧವಾರ (ಜು.18) ಬೆಳಿಗ್ಗೆ ಮನೆಯ ಕೆಲಸದಾಕೆ ಪ್ರಿಯಾಂಕಾ ಅವರ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಿಯಾಂಕಾ ಮನೆಯಲ್ಲಿ ಕುಟುಂಬದವರೊಂದಿಗೆ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಫ್ಯಾನ್​ಗೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಪ್ರಿಯಾಂಕಾ ಅವರ ವಿವಾಹವಾಗಿ 3 ವರ್ಷಗಳು ಕಳೆದಿದ್ದು, ಇನ್ನೂ ಅವರಿಗೆ ಮಕ್ಕಳಾಗಿಲ್ಲ. ಈ ಕಾರಣಕ್ಕಾಗಿಯೇ ಗಂಡನ ಮನೆಯಲ್ಲಿ ನಿತ್ಯ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ.  ಈ ಕಾರಣದಿಂದಲೇ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಪ್ರಿಯಾಂಕಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಿಯಾಂಕಾ ರಮ್ಯಾ ಕೃಷ್ಣ ಅವರೊಂದಿಗೆ ತಮಿಳಿನಲ್ಲಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, 'ವಂಶಂ' ಧಾರಾವಾಹಿಯಲ್ಲಿ ಜೋತಿಕಾ ಎಂಬ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...