Tamil Rockerz Series Review: ತಮಿಳ್ ರಾಕರ್ಸ್ ಸಿರೀಸ್​ಗೆ ಭಾರೀ ರೆಸ್ಪಾನ್ಸ್, ಹೇಗಿದೆ ಕಥೆ?

ತಮಿಳ್ ರಾಕರ್ಸ್ ವೆಬ್ ಸಿರೀಸ್​ಗೆ ಕಥೆಯಾಗುವ ಎಲ್ಲ ಕಂಟೆಂಟ್​ ಒಳಗೊಂಡಿದೆ. ಸೋನಿ LIV ಯ ಈ ವೆಬ್ ಸರಣಿ ಮೂಲಕ ನಿರ್ದೇಶಕ ಅರಿವಳಗನ್ ಅವರು ತಮಿಳ್ ರಾಕರ್ಸ್ ಬಗ್ಗೆ ಅರೆ-ಕಾಲ್ಪನಿಕ ಕಥೆ ಹೆಣೆದು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ತಮಿಳ್ ರಾಕರ್ಸ್ ಸಿನಿಮಾದ ದೃಶ್ಯ

ತಮಿಳ್ ರಾಕರ್ಸ್ ಸಿನಿಮಾದ ದೃಶ್ಯ

  • Share this:
ಸೌತ್ ಸಿನಿಮಾ (South Cinema) ಇಂಡಸ್ಟ್ರಿಯಲ್ಲಿ ದೊಡ್ಡ ತಲೆನೋವಾಗಿರುವ ತಮಿಳ್ ರಾಕರ್ಸ್ (Tamil Rockerz) ಕುರಿತು ವೆಬ್ ಸಿರೀಸ್ (Web Series) ಬರುತ್ತೆ ಎಂದಾಗಲೇ ಇದು ಭಾರೀ ಕುತೂಹಲ ಸೃಷ್ಟಿಸಿದ ಒಂದು ಕಂಟೆಂಟ್ ಆಗಿತ್ತು. ಸೌತ್ ಸಿನಿಮಾ ಲೋಕದ ಬಿಗ್ ಬಜೆಟ್ ಸಿನಿಮಾಗಳನ್ನೂ ಬಿಡದೆ ಸಿನಿಮಾ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಹೈಕ್ವಾಲಿಟಿ ಸಿನಿಮಾವನ್ನು (Cinema) ಪೂರ್ತಿಯಾಗಿ ಆನ್​ಲೈನ್​ನನಲ್ಲಿ ಹರಿಬಿಡುವ ಇವರ ಕಾಟಕ್ಕೆ ಚಿತ್ರೋದ್ಯಮ ಸುಸ್ತಾಗಿತ್ತು. ದಕ್ಷಿಣ ಸಿನಿಮಾದ ಚರಿತ್ರೆಯಲ್ಲೇ ಕರಿನೆರಳಾಗಿರುವ ತಮಿಳ್ ರಾಕರ್ಸ್ ದೊಡ್ಡ ದೊಡ್ಡ ಸಿನಿಮಾಗಳನ್ನು ಸುಲಭವಾಗಿ ಹ್ಯಾಕ್ ಮಾಡುತ್ತಾರೆ. ಚಿತ್ರರಂಗದ ಮಂದಿಗೆ ತಮಿಳ್ ರಾಕರ್ಸ್ ತಲೆನೋವಾದರೆ ಅವರ ಟ್ಯಾಲೆಂಟ್​ (Talent)​ ನೋಡಿ ಬೆರಗಾಗಿ ಅವರನ್ನೇ ಫಾಲೋ ಮಾಡುವ ಮಂದಿಯೂ ಇದ್ದಾರೆ. ಬಹಳಷ್ಟು ಜನರು ತಮಿಳ್ ರಾಕರ್ಸ್​ ತಂಡವನ್ನು ರಾಬಿನ್ ಹುಡ್ ನಂತೆ ಕಾಣುವವರಿದ್ದಾರೆ. ಈ ತಂಡದ ಅನಾಮಧೇಯತೆಯು ಪೊಲೀಸರಿಗೆ ಸೈಬರ್ ಸೆಕ್ಯುರಿಟಿ (Cyber Security) ಸೇರಿ ಎಲ್ಲರಿಗೂ ತಲೆನೋವಾಗಿದೆ.

ರಿಯಾಲಿಟಿ ಸ್ಟೋರಿಯ ವೆಬ್ ಸಿರೀಸ್

ಕೆಲವರು ಈ ತಂಡವನ್ನು ಅಂತಾರಾಷ್ಟ್ರೀಯ ಸಿಂಡಿಕೇಟ್‌ಗೆ ಲಿಂಕ್ ಮಾಡುತ್ತಾರೆ. ತಮಿಳ್ ರಾಕರ್ಸ್ ಎನ್ನುವ ವಿಚಾರವೇ ಭಾರೀ ಕುತೂಹಲಭರಿತ, ಮುಗಿಯದಷ್ಟೂ ಅಚ್ಚರಿಗಳ ಸಂಗತಿಯಾಗಿದ್ದು ಇದು ಒಂದು ಸಿನಿಮಾ, ಸಿರೀಸ್​ಗೆ ಕಥೆಯಾಗುವ ಎಲ್ಲ ಕಂಟೆಂಟ್​ಒಳಗೊಂಡಿದೆ. ಸೋನಿ LIV ಯ ವೆಬ್ ಸರಣಿ ತಮಿಳ್ ರಾಕರ್ಸ್​ನಲ್ಲಿ ನಿರ್ದೇಶಕ ಅರಿವಳಗನ್ ಅವರು ತಮಿಳ್ ರಾಕರ್ಸ್ ಬಗ್ಗೆ ಅರೆ-ಕಾಲ್ಪನಿಕ ಕಥೆಯನ್ನು ಹೆಣೆದು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಸಿನಿಮಾ ಲೀಕ್ ಆಗೋದೆ ಸ್ಟೋರಿ

ದೊಡ್ಡ ಸ್ಟಾರ್  ಸಿನಿಮಾ ಬಿಡುಗಡೆಯಂದು ಬೆಳಗಿನ 4 ಗಂಟೆಯ ಶೋ ಪ್ರದರ್ಶನದ ಕೆಲವೇ ನಿಮಿಷಗಳಲ್ಲಿ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತದೆ. ಇದು ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕರ ಆತ್ಮಹತ್ಯೆಗೆ ಕಾರಣವಾಗುತ್ತದೆ. ನಿರ್ಮಾಪಕರ ಮಂಡಳಿಯು ಒತ್ತಡವನ್ನು ಎದುರಿಸುತ್ತದೆ.

ಇದನ್ನೂ ಓದಿ: Piracy: ಕಂಗನಾ ರನೋತ್ ಅಭಿನಯದ Thalaivii ಸಿನಿಮಾಗೂ ತಪ್ಪಲಿಲ್ಲ ತಮಿಳ್‍ರಾಕರ್ಸ್ ಕಾಟ..!

ಅದರಲ್ಲೂ 10 ದಿನಗಳಲ್ಲಿ ಬಿಡುಗಡೆಯಾಗಲಿರುವ 'ಅಧಿರಾದಿ ಸ್ಟಾರ್' ಆದಿತ್ಯ ಅವರ 300 ಕೋಟಿ ಸಿನಿಮಾ ಗರುಡಕ್ಕೆ ಬೆದರಿಕೆ ಬರುತ್ತದೆ. ನಿಗದಿತ ಬಿಡುಗಡೆಗೆ ಒಂದು ದಿನ ಮೊದಲು ಚಿತ್ರವನ್ನು ಲೀಕ್ ಮಾಡುತ್ತೇವೆ ಎಂದು ತಮಿಳು ರಾಕರ್ಜ್ ಘೋಷಿಸಿದಾಗ ಬೆದರಿಕೆ ನಿಜವಾಗುತ್ತದೆ.



ಬಿಗ್​ಬಜೆಟ್ ಸಿನಿಮಾಗೆ ಲೀಕ್ ಆಗುವ ಭೀತಿ, ತಡೆಯೋಕೆ ಸಾಧ್ಯವೇ?

ಸಂಬಂಧಪಟ್ಟ ಎಲ್ಲಾ ಪಕ್ಷಗಳಿಂದ ಅಗಾಧವಾದ ಒತ್ತಡವನ್ನು ಎದುರಿಸುವ ಡಿಐಜಿ ಸಂದೀಪ್ ಮೆನನ್ ಅವರು ಸೈಬರ್ ಫೋರೆನ್ಸಿಕ್ ಅಧಿಕಾರಿ ಸಂಧ್ಯಾ (ವಾಣಿ ಭೋಜನ್), ಸೈಬರ್ ಕ್ರೈಮ್ ಎಸ್‌ಐ ಭಾನು (ವಿನೋಧಿನಿ ವೈದ್ಯನಾಥನ್), ಮತ್ತು ಇನ್ಸ್‌ಪೆಕ್ಟರ್ ನೆಲ್ಸನ್ (ವಿನೋದ್ ಸಾಗರ್) ಅವರನ್ನು ಒಳಗೊಂಡ ವಿಶೇಷ ತಂಡಕ್ಕೆ ಎಸಿಪಿ ರುದ್ರ (ಅರುಣ್ ವಿಜಯ್) ಅವರನ್ನು ನೇಮಿಸುತ್ತಾರೆ. ತಮಿಳು ರಾಕರ್ಸ್​ನ್ನು ಹುಡುಕಲು ಮತ್ತು ಗರುಡ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗದಂತೆ ತಡೆಯಲು ಈ ತಂಡ ಪ್ರಯತ್ನಿಸುತ್ತದೆ.

ಇದನ್ನೂ ಓದಿ: ರಜನಿ ದರ್ಬಾರ್​ ಸಿನಿಮಾಗೆ ಎದುರಾಯ್ತು ಕಂಟಕ; ಲೀಕ್ ಆಯ್ತು ಫುಲ್ ಹೆಚ್​ಡಿ ಮೂವಿ

ಅರುಣ್ ವಿಜಯ್ ನಿರ್ದೇಶಿಸಿ ಅಭಿನಯಿಸಿರೋ ವೆಬ್ ಸರಣಿಯನ್ನು ತಮಿಳ್ ರಾಕರ್ಸ್ ಅನ್ನು ಜನಪ್ರಿಯ ನಿರ್ಮಾಣ ಸಂಸ್ಥೆ (ಎವಿಎಂ) ನಿರ್ಮಿಸಿದೆ. ಇದು ತಮಿಳು ಸಿನಿಮಾ ಉದ್ಯಮಕ್ಕೆ ಸವಾಲು ಹಾಕುತ್ತಿರುವ ಪೈರಸಿ ವೆಬ್​ ಕುರಿತ ಸಿನಿಮಾ ಆಗಿದೆ. ಈ ತಮಿಳು ರಾಕರ್ಸ್ ವೆಬ್ ಸರಣಿಯು ಸೋನಿ OTT ಪ್ಲಾಟ್ ಫಾರ್ಮ್​ನಲ್ಲಿ ಬಿಡುಗಡೆಯಾಗಿ ಉತ್ತರ ಪ್ರತಿಕ್ರಿಯೆ ಗಳಿಸುತ್ತಿದೆ.
Published by:Divya D
First published: