Tamil Rockerz: ತಮಿಳ್ ರಾಕರ್ಸ್ ವೆಬ್ ಸರಣಿಯನ್ನೇ ಹ್ಯಾಕ್ ಮಾಡಿದ ತಮಿಳ್ ರಾಕರ್ಸ್

ಟ್ರೈಲರ್ ಮೂಲಕ ಭಾರೀ ಕುತೂಹಲ ಸೃಷ್ಟಿಸಿದ್ದ ತಮಿಳ್ ರಾಕರ್ಸ್ ವೆಬ್ ಸರಣಿ ಆಗಸ್ಟ್ 19ರಂದು ಬಿಡುಗಡೆಯಾಗಿದೆ. ಆದರೆ ದೊಡ್ಡ ಸವಾಲು ಎಂದರೆ ಈ ಸರಣಿಯನ್ನು ಕೂಡಾ ತಮಿಳ್ ರಾಕರ್ಸ್ ಸುಮ್ಮನೆ ಬಿಟ್ಟಿಲ್ಲ. ಆಗಲೇ ಹ್ಯಾಕ್ ಮಾಡಿ ಕಾಪಿ ಲೀಕ್ ಮಾಡಿದ್ದಾರೆ.

ತಮಿಳ್ ರಾಕರ್ಸ್

ತಮಿಳ್ ರಾಕರ್ಸ್

  • Share this:
ಪೈರಸಿ ಕಾಟದ ಕುರಿತು, ತಮಿಳ್ ರಾಕರ್ಸ್ (Tamil Rockerz) ಕುರಿತು ವೆಬ್ ಸಿರೀಸ್ (Web Series) ತಯಾರಿಸಿ ರಿಲೀಸ್ ಮಾಡಿದರೆ ಅದನ್ನೂ ಹ್ಯಾಕ್ ಮಾಡಿದ್ದಾರೆ ತಮಿಳ್ ರಾಕರ್ಸ್.  ಹೌದು, ಸೌತ್ ಸಿನಿ (South Cinema) ಇಂಡಸ್ಟ್ರಿಯಲ್ಲಿ (South Cinema Industry) ಕರಿ ನೆರಳಾಗಿ ಕಾಡುವ ತಮಿಳ್ ರಾಕರ್ಸ್ ಈಗ ತಮ್ಮದೇ ಕುರಿತಾದ ಕಥಾ (Story) ಹಂದರವನ್ನು ಹೊಂದಿರುವ ವೆಬ್ ಸರಣಿಯನ್ನು  ಹ್ಯಾಕ್ (Hacking) ಮಾಡಿ ಆನ್​ಲೈನ್​ನಲ್ಲಿ  (Online) ಹರಿಯಬಿಟ್ಟಿದ್ದಾರೆ. ಒಂದು ಕಡೆ ಈ ವಿಚಾರವಾಗಿ ಟ್ರೋಲ್ (Troll) ಆಗುತ್ತಿದ್ದರೆ ಇನ್ನೊಂದು ಕಡೆ ತಮಿಳ್ ರಾಕರ್ಸ್ ಬಗ್ಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಟ್ರೈಲರ್ (Trailer) ಮೂಲಕ ಭಾರೀ ಕುತೂಹಲ ಸೃಷ್ಟಿಸಿದ್ದ ತಮಿಳ್ ರಾಕರ್ಸ್ ವೆಬ್ ಸರಣಿ ಆಗಸ್ಟ್ 19ರಂದು ಬಿಡುಗಡೆಯಾಗಿದೆ. ಆದರೆ ದೊಡ್ಡ ಸವಾಲು (Challenge) ಎಂದರೆ ಈ ಸರಣಿಯನ್ನು ಕೂಡಾ ತಮಿಳ್ ರಾಕರ್ಸ್ ಸುಮ್ಮನೆ ಬಿಟ್ಟಿಲ್ಲ.

ಟ್ರೈಲರ್ ಮೂಲಕ ಸದ್ದು ಮಾಡಿದ್ದ ವೆಬ್ ಸರಣಿಯನ್ನು ರಿಲೀಸ್ ಆದ ದಿನವೇ ಹ್ಯಾಕ್ ಮಾಡಿ ಲೀಕ್ ಮಾಡಿದ್ದಾರೆ ತಮಿಳ್ ರಾಕರ್ಸ್. ಇದು ಈಗ ಇನ್ನಷ್ಟು ಫನ್ನಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ತಮ್ಮದೇ ಕುರಿತ ಸರಣಿಯನ್ನೂ ಬಿಡದೆ ಲೀಕ್ ಮಾಡಿರುವುದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ತಮಿಳುರಾಕರ್ಸ್ ಯಾರು?

ತಮಿಳ್ ರಾಕರ್ಸ್ ಒಂದು ಪೈರಸಿ ವೆಬ್‌ಸೈಟ್ ಆಗಿದ್ದು, ಅದೇ ಹೆಸರಿನಿಂದ ಕರೆಯಲ್ಪಡುವ ಗುಂಪಿನಿಂದ ನಡೆಸಲ್ಪಡುತ್ತದೆ. ಗುಂಪಿನ ಮೂಲಗಳ ಬಗ್ಗೆ ಹೆಚ್ಚಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ಕೆಲವು ವರದಿಗಳನ್ನು ನಂಬುವುದಾದರೆ ಅವು 2011 ರ ಸುಮಾರಿಗೆ ಅಸ್ತಿತ್ವಕ್ಕೆ ಬಂದವು. ಪೈರೇಟ್ ಬೇ ನಂತಹ ಟೊರೆಂಟ್ ಸೈಟ್‌ಗಳು ಪೈರೇಟೆಡ್ ವಿಷಯವನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಗೋ-ಟು ಪ್ಲಾಟ್‌ಫಾರ್ಮ್‌ಗಳಾಗಿದ್ದವು.

ಇದನ್ನೂ ಓದಿ: Actress Trisha: ಆ ನಟನ ಪ್ರೇರಣೆಯಿಂದ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ನಟಿ ತ್ರಿಷಾ!

ಬಿಗ್​ ಬಜೆಟ್ ಸಿನಿಮಾಗಳಿಗೆ ದೊಡ್ಡ ಸವಾಲು

ಈ ಮೂಲಕ ಬಹುತೇಕ ಬಿಗ್ ಬಜೆಟ್ ಸಿನಿಮಾಗಳು ಲೀಕ್ ಆಗುತ್ತಿದ್ದು ಭಾರೀ ಬಂಡವಾಳದಲ್ಲಿ ರಿಲೀಸ್ ಆದ ಸಿನಿಮಾಗಳು ಕೂಡಾ ರಿಲೀಸ್ ದಿನವೇ ಆನ್​ಲೈನ್​ನಲ್ಲಿ ಲಭ್ಯವಾಗುತ್ತಿವೆ. ಸೌತ್ ಸಿನಿ ಇಂಡಸ್ಟ್ರಿಗೆ ದೊಡ್ಡ ತಲೆನೋವಾಗಿರುವ ತಮಿಳ್ ರಾಕರ್ಸ್ ಮೂಲವನ್ನು ಮಾತ್ರ ಈವರೆಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Tamil Rockerz Series Review: ತಮಿಳ್ ರಾಕರ್ಸ್ ಸಿರೀಸ್​ಗೆ ಭಾರೀ ರೆಸ್ಪಾನ್ಸ್, ಹೇಗಿದೆ ಕಥೆ?

ಆರಂಭದಲ್ಲಿ, ಅವರು ತಮ್ಮ ವೆಬ್‌ಸೈಟ್‌ನಲ್ಲಿ ತಮಿಳು ಚಲನಚಿತ್ರಗಳನ್ನು ಮಾತ್ರ ಅಪ್‌ಲೋಡ್ ಮಾಡುವುದರಿಂದ ಈ ಗುಂಪು ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಅವರು ಇತರ ಪ್ರಾದೇಶಿಕ ಭಾಷೆಗಳಿಂದಲೂ ಸಿನಿಮಾಗಳನ್ನು ಹ್ಯಾಕ್ ಮಾಡಲಾರಂಭಿಸಿದಾಗ ಇದರ ನೆಟ್​ ವರ್ಕ್ ಇನ್ನಷ್ಟು ವ್ಯಾಪಿಸಿದೆ. ಗುಂಪಿನ ಗಾತ್ರ, ಸದಸ್ಯರ ಸಂಖ್ಯೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೂ ಅವರ ಕಾರ್ಯಾಚರಣೆಯ ವ್ಯಾಪ್ತಿಯು ಅವರು ಭಾರತದ ಹೊರಗೆ ಅಸ್ತಿತ್ವವನ್ನು ಹೊಂದಿದ್ದಾರೆಂದು ಸೂಚಿಸುತ್ತದೆ.



ಕೇರಳದಲ್ಲಿ ಅರೆಸ್ಟ್ ಆದ ಯುವಕರು

ಮಾರ್ಚ್ 2008 ರಲ್ಲಿ, ಕೇರಳ ಪೊಲೀಸರು ಪೈರಸಿ ಆರೋಪದ ಮೇಲೆ ತಮಿಳು ರಾಕರ್ಸ್‌ಗೆ ಸಂಪರ್ಕ ಹೊಂದಿದ್ದ ಮೂವರನ್ನು ಬಂಧಿಸಿದರು. ತಮಿಳ್‌ರಾಕರ್ಸ್‌ನ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾದ ಕಾರ್ತಿ ಅವರನ್ನು ತಮಿಳುನಾಡಿನ ವಿಲ್ಲುಪುರಂನಲ್ಲಿ ಅವರ ಇಬ್ಬರು ಸಹಾಯಕರಾದ ಪ್ರಭು ಮತ್ತು ಸುರೇಶ್ ಅವರೊಂದಿಗೆ ಬಂಧಿಸಲಾಯಿತು.
Published by:Divya D
First published: