• Home
  • »
  • News
  • »
  • entertainment
  • »
  • Puneeth Rajkumar: ತಮಿಳುನಾಡು ಅಧಿವೇಶನದಲ್ಲೂ `ರಾಜರತ್ನ’ನಿಗೆ ಗೌರವ: ಮನಸ್ಸು ಏಕೋ ಭಾರ.. ಅಪ್ಪು ನೆನೆದು ನಾಯಕರು ಭಾವುಕ!

Puneeth Rajkumar: ತಮಿಳುನಾಡು ಅಧಿವೇಶನದಲ್ಲೂ `ರಾಜರತ್ನ’ನಿಗೆ ಗೌರವ: ಮನಸ್ಸು ಏಕೋ ಭಾರ.. ಅಪ್ಪು ನೆನೆದು ನಾಯಕರು ಭಾವುಕ!

ನಟ ಪುನೀತ್​ ರಾಜ್​ಕುಮಾರ್​

ನಟ ಪುನೀತ್​ ರಾಜ್​ಕುಮಾರ್​

ನಿನ್ನೆಯಿಂದ ತಮಿಳುನಾಡಿನ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದು ನಿಯಮ. ಅಂತೆಯೇ ತಮಿಳು ನಾಡು ವಿಧಾನಸಭೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ‘ಪವರ್​ ಸ್ಟಾರ್​’ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸ್ಮರಿಸಲಾಗಿದೆ.

ಮುಂದೆ ಓದಿ ...
  • Share this:

ನಟ ಪುನೀತ್ ರಾಜ್‌ಕುಮಾರ್‌(Puneeth Rajkumar)ಗೆ ಕರ್ನಾಟಕದಲ್ಲಿ ಮಾತ್ರವೇ ಅಲ್ಲ ದೇಶ-ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದರು. ಪುನೀತ್ ಅಗಲಿದಾಗ ನೆರೆ ರಾಜ್ಯಗಳ ಸಿಎಂಗಳು ಟ್ವೀಟ್(Tweet) ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಕೇವಲ ನಟನಾಗಿ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕವೂ ಜನರಿಗೆ ಹತ್ತಿರ ಆಗಿದ್ದರು. ಪುನೀತ್ ಕೇವಲ ಕನ್ನಡ(Kannada)ದ ಆಸ್ತಿ ಆಗಿರಲಿಲ್ಲ, ಅವರು ದೇಶದ ಆಸ್ತಿಯಾಗಿದ್ದರು. ಅವರು ಮಾಡುತ್ತಿದ್ದ ಕೆಲಸ ಯಾರಿಗೂ ಗೊತ್ತಿರಲಿಲ್ಲ. ಅವರು ನಮ್ಮನ್ನೆಲ್ಲ ಬಿಟ್ಟುಹೋದ ಬಳಿಕವಷ್ಟೇ ಅಪ್ಪು ಮಾಡುತ್ತಿದ್ದ ಸಮಾಜಮುಖಿ ಕೆಲಸಗಳು ಎಲ್ಲರಿಗೂ ತಿಳಿದಿದೆ. ಅಪ್ಪು(Appu) ಇದ್ದಷ್ಟು ದಿನ ರಾಯಲ್(Royal)​ ಆಗಿದ್ದ ಇದ್ದವರು, ಹೋಗಬೇಕಾದರೂ ರಾಯಲ್​ ಆಗಿ ಹೋದ ಎಂಬ ಮಾತನ್ನು ಶಿವಣ್ಣ(Shivanna) ನೋವಿನಿಂದ ಹೇಳಿದ್ದರು. ಅಪ್ಪು ಹೋದ ಬಳಿಕವೂ ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದ್ದಾರೆ. ಅಪ್ಪು ನೆನೆಯದ ದಿನವಿಲ್ಲ. ಪ್ರತಿ ಮನೆಯಲ್ಲೂ ಒಂದೊಲ್ಲ ಒಂದು ಬಾರಿ ಅಪ್ಪು ನೆನಪಾಗುತ್ತಾರೆ. ಯಾಕೆಂದರೆ ಅಪ್ಪು ಈ ಕರುನಾಡಿನ ಮಗ. ಅಭಿಮಾನಿಗಳೇ ನಮ್ಮನೆ ದೇವ್ರು ಅಂದ ಅಣ್ಣಾವ್ರ ಮಗ. ಹೆಚ್ಚಾಗಿ ಈ ಕರುನಾಡಿನ ‘ರಾಜರತ್ನ’ . ಪ್ರತಿ ದಿನ ಅಪ್ಪು ಅವರನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆಯತ್ತಲೇ ಇದೆ. ಆದರೆ, ನಿನ್ನೆ ಆರಂಭವಾದ ತಮಿಳುನಾಡು ಅಧಿವೇಶನ(Tamil nadu Assembly)ದಲ್ಲೂ ಅಪ್ಪು ಅವರನ್ನು ನೆನೆದು ರಾಜಕಾರಣಿಗಳು ಭಾವುಕರಾಗಿದ್ದಾರೆ. 


ತಮಿಳುನಾಡಿನ ಅಧಿವೇಶನದಲ್ಲಿ ಅಪ್ಪು ನೆನಪು!


ನಿನ್ನೆಯಿಂದ ತಮಿಳುನಾಡಿನ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದು ನಿಯಮ. ಅಂತೆಯೇ ತಮಿಳು ನಾಡು ವಿಧಾನಸಭೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ‘ಪವರ್​ ಸ್ಟಾರ್​’ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸ್ಮರಿಸಲಾಗಿದೆ. ಇದು ಅಪ್ಪು ಅಭಿಮಾನಿಗಳಿಗೆ ನಿಜಕ್ಕೂ ಹೆಮ್ಮೆ ಎನಿಸುವ ಕ್ಷಣ. ಪುನೀತ್​ ನಿಧನರಾದಾಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಸಂತಾಪ ಸೂಚಿಸಿದ್ದರು. ಈಗ ಅಲ್ಲಿನ ವಿಧಾನಸಭೆಯಲ್ಲಿ ಕನ್ನಡದ ನಟನಿಗೆ ಗೌರವ ಸಲ್ಲಿಕೆ ಆಗಿದೆ.


ಇದನ್ನು ಓದಿ : Golden Gang ಜೊತೆ ಬಂದ್ರು ಗೋಲ್ಡನ್​ ಸ್ಟಾರ್​ ಗಣೇಶ್: ಜ.8ರಿಂದ ಜೀ ಕನ್ನಡದಲ್ಲಿ ಪ್ರತಿ ವೀಕೆಂಡ್​ ಫುಲ್​ ಮಸ್ತಿ!


ಅಪ್ಪು ಬಗ್ಗೆ ಹೇಳುವ ವಿಡಿಯೋ ಸಖತ್​ ವೈರಲ್​!


ಇನ್ನೂ ಅಪ್ಪು ಅವರ ಬಗ್ಗೆ ತಮಿಳುನಾಡು ಅಧಿವೇಶನದಲ್ಲಿ ಮಾತನಾಡುವ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಗಳು ಈ ವಿಡಿಯೋವನ್ನು ಶೇರ್​ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಬೌಂಡಿರಿ ಹಾಕಿಕೊಳ್ಳದೇ ಅಪ್ಪು ಅವರು ಬದುಕಿದ್ದರು. ಹಾಗೇ ಅವರ ಬಗ್ಗೆಯೂ ಎಲ್ಲ ಕಡೆ ಮಾತನಾಡುತ್ತಿದ್ದಾರೆ ಎಂದು ಕಮೆಂಟ್​ ಮಾಡುತ್ತಿದ್ದಾರೆ.


ಇದನ್ನು ಓದಿ : ನಾಳೆ ನಮ್​ ಬಾಸ್​ ಬರ್ತ್​ಡೇ ಮಾಡ್ಲೇಬೇಕು... ಒಂದಿನ ಕಾಲೇಜಿಗೆ ರಜೆ ಕೊಡಿ ಎಂದು ಪತ್ರ ಬರೆದ ಯಶ್ ಅಭಿಮಾನಿ!​ 


ಅಪ್ಪು ನಿಧನಕ್ಕೆ ಪತ್ರ ಬರೆದಿದ್ದ ಸ್ಟಾಲಿನ್​!


ಪುನೀತ್ ರಾಜ್​ಕುಮಾರ್ ನಿಧನದ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶಿವರಾಜ್​ಕುಮಾರ್​ಗೆ ಸಂತಾಪ ಪತ್ರ ಬರೆದಿದ್ದರು. ‘ಸಹೋದರ ಪುನೀತ್​ ಅವರ ದಿಢೀರ್ ಸಾವು ನನಗೆ ಭರಿಸಲಾಗದ ನೋವುಂಟು ಮಾಡಿದೆ. ಸಂತಾಪ ಸೂಚಿಸಲು ನನಗೆ ಮಾತೇ ಬರುತ್ತಿಲ್ಲ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿವೆ. ನನಗೆ ಪುನೀತ್ ಅಗಲಿಕೆ ವೈಯಕ್ತಿಕವಾಗಿ ನಷ್ಟವನ್ನುಂಟು ಮಾಡಿದೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.‘ನನ್ನ ತಂದೆ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಲು ಗೋಪಾಲಪುರಂಗೆ ಬಂದಿದ್ದ ಪುನೀತ್​ ಅವರ ಆ ಕ್ಷಣಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದಯಬಿಟ್ಟು ನನ್ನ ಸಂತಾಪವನ್ನು ನಿಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ’ ಎಂದು ಪತ್ರ ಬರೆದಿದ್ದರು.

Published by:Vasudeva M
First published: