ಹೇಗಿದೆ ವಿಜಯ್ Beast ಸಿನಿಮಾ? ಇಲ್ಲಿದೆ ನೋಡಿ ಬೀಸ್ಟ್ ಚಿತ್ರದ ಫಸ್ಟ್‌ ರಿವ್ಯೂ..!

ಬೀಸ್ಟ್ ಸಿನಿಮಾ ವಿಮರ್ಶಕರೊಬ್ಬರಿಂದ ಈ ಚಿತ್ರದ ಪ್ರಥಮ ವಿಮರ್ಶೆ ಹೊರಬಂದಿದೆ. ಯುಎಇಯಲ್ಲಿ ಬೀಸ್ಟ್ ಸಿನಿಮಾ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ, ಕುವೈತ್ ಮತ್ತು ಕತಾರ್‌ನಲ್ಲಿ ಇದರ ಬಿಡುಗಡೆಗೆ ನಿಷೇಧ ಹೇರಲಾಗಿದೆ.

ಬೀಸ್ಟ್ ಚಿತ್ರ

ಬೀಸ್ಟ್ ಚಿತ್ರ

  • Share this:
‘ಬೀಸ್ಟ್’ (Beast) ಕಾಲಿವುಡ್‍ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ. ವಿಜಯ್ (Vijay) ಅಭಿಮಾನಿಗಳಂತೂ ‘ಬೀಸ್ಟ್‌' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು, ಈ ಸಿನಿಮಾ ಹಲವು ಬಾಕ್ಸ್ ಆಫೀಸ್ (Box Office) ದಾಖಲೆಗಳನ್ನು ಮುರಿಯಬಹುದು ಎಂದು ಊಹಿಸಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶಿಸಿದರುವ ಈ ಸಿನಿಮಾದಲ್ಲಿ, ಪೂಜಾ ಹೆಗ್ಡೆ (Pooja Hegde), ಸೆಲ್ವ ರಾಘವನ್, ಯೋಗಿ ಬಾಬು ಸೇರಿದಂತೆ ಘಟಾನುಘಟಿ ಕಲಾವಿದರ ತಾರಗಣವಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಏಪ್ರಿಲ್ 13 ರಂದು ಸಿನಿಮಾ ಮಂದಿರಗಳಲ್ಲಿ ತೆರೆ ಕಂಡಿದೆ. ಸಿನಿಮಾ ವಿಮರ್ಶಕರೊಬ್ಬರಿಂದ ಈ ಚಿತ್ರದ ಪ್ರಥಮ ವಿಮರ್ಶೆ ಹೊರಬಂದಿದೆ. ಯುಎಇಯಲ್ಲಿ ಬೀಸ್ಟ್ ಸಿನಿಮಾ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ, ಕುವೈತ್ ಮತ್ತು ಕತಾರ್‌ನಲ್ಲಿ ಇದರ ಬಿಡುಗಡೆಗೆ ನಿಷೇಧ ಹೇರಲಾಗಿದೆ.

ವರದಿಗಳ ಪ್ರಕಾರ, ಬೀಸ್ಟ್ ಸಿನಿಮಾವು ಭಯೋತ್ಪಾದನೆಗೆ ಸಂಬಂಧಿಸಿದ ಕಥೆಯನ್ನು ಹೊಂದಿದೆ ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದಕರು ಎಂಬಂತೆ ತೋರಿಸಿದೆ ಎಂಬ ಕಾರಣಕ್ಕಾಗಿ ಈ ಸಿನಿಮಾವನ್ನು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದೆ.

ಕುವೈತ್ ಮತ್ತು ಕತಾರ್‌ನಲ್ಲಿ ಮಾತ್ರವಲ್ಲ, ತಮಿಳುನಾಡಿನ ಕರೂರಿನಲ್ಲಿಯೂ, ಬೇರೆ ಕಾರಣವೊಂದಕ್ಕಾಗಿ ಸಿನಿಮಾ ಮಂದಿರಗಳಲ್ಲಿ ಬೀಸ್ಟ್ ಸಿನಿಮಾ ತೆರೆ ಕಾಣುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ಇದರಿಂದ ಅಲ್ಲಿನ ವಿಜಯ್ ಅಭಿಮಾನಿಗಳು ನಿರಾಶರಾಗಿದ್ದಾರೆ.

ಇದನ್ನೂ ಓದಿ: Beast: ಬಿಡುಗಡೆ ಮುನ್ನವೇ ವಿಘ್ನ, ಕುವೈತ್‌ನಲ್ಲಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬ್ಯಾನ್..!

ಅಚ್ಚುಕಟ್ಟಾದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ:

ಯುಎಇಯ ಸಿನಿಮಾ ವಿಮರ್ಶಕ ಉಮರ್ ಸಂಧು ಎಂಬುವರು, ಇನ್‍ಸ್ಟಾಗ್ರಾಂನಲ್ಲಿ ‘ಬೀಸ್ಟ್’ ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಇದು “ಅಚ್ಚುಕಟ್ಟಾದ ಆ್ಯಕ್ಷನ್ ಥ್ರಿಲ್ಲರ್” ಸಿನಿಮಾ. ನಟ ವಿಜಯ್ , ಬೀಸ್ಟ್ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ ಮತ್ತು ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವ ದೃಶ್ಯಗಳಲ್ಲಿ ಒಂದೇ ಒಂದು ನೀರಸ ಕ್ಷಣಗಳು ಇಲ್ಲ” ಎಂದು ಅವರು ಹೇಳಿದ್ದಾರೆ.

ವಿಜಯ್ ಅಭಿನಯವೇ ಪ್ಲಸ್ ಪಾಯಿಂಟ್:

ಇಡೀ ‘ಬೀಸ್ಟ್’ ಸಿನಿಮಾದಲ್ಲಿ ವಿಜಯ್ ಅಭಿನಯವೇ ಎದ್ದು ಕಾಣುತ್ತದೆ. ಅಷ್ಟೇ ಅಲ್ಲ, ಸಿನಿಮಾ ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ ಎಂದು ಉಮರ್ ಸಂಧು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾ ಅತ್ಯಂತ ತೀಕ್ಷ್ಣವಾದ ಚಿತ್ರಕಥೆಯನ್ನು ಹೊಂದಿದೆ ಎಂದಿರುವ ಅವರು, ಇದರಲ್ಲಿ ವಿಜಯ್ ಅಭಿನಯ ಅಚ್ಚರಿ ಹುಟ್ಟಿಸುವಂತಿದೆ ಮತ್ತು ಚಪ್ಪಾಳೆಗೆ ಯೋಗ್ಯವಾಗಿದೆ ಎನ್ನುವ ಮೂಲಕ ತಮ್ಮ ವಿಮರ್ಶೆಯನ್ನು ಮುಗಿಸಿದ್ದಾರೆ.

ಬೀಸ್ಟ್ ಸಿನಿಮಾಗೆ ಯುಎಇ ಯಿಂದ ಬಂದಿರುವ ಮೊದಲ ವಿಮರ್ಶೆ ಇದು. ಭಾರತದಲ್ಲಿ ಈ ಸಿನಿಮಾ ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರ ಸಿನಿಮಾದ ಬಗ್ಗೆ ಅತ್ಯಧಿಕ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಸಿನಿಮಾಗೆ ‘ರಾ’ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: Beast Movie: ರೋಲ್ಸ್ ರಾಯ್ಸ್ ಕಾರಿನಲ್ಲಿ 'ಬೀಸ್ಟ್' ತಂಡದ ಜಾಲಿ ರೈಡ್! ವೈರಲ್ ವಿಡಿಯೋ ಇಲ್ಲಿದೆ ನೋಡಿ

ರಾ ಏಜೆಂಟ್‍ನ ಪಾತ್ರದಲ್ಲಿ ವಿಜಯ್:

ನಾಯಕ ವಿಜಯ್ ಅವರು ಬೀಸ್ಟ್ ಸಿನಿಮಾದಲ್ಲಿ, ವೀರ ರಾಘವನ್ ಎಂಬ ರಾ ಏಜೆಂಟ್‍ನ ಪಾತ್ರವನ್ನು ನಿರ್ವಹಿಸಿದ್ದಾರೆ. ಪತ್ತೆದಾರನ ಪಾತ್ರವಿದು. ಭಯೋತ್ಪಾದಕರು ಮಾಲ್ ಅನ್ನು ಆವರಿಸಿಕೊಂಡಾಗ ಅವರು ಕೂಡ ಸಾಮಾನ್ಯ ಜನರೊಂದಿಗೆ ಒತ್ತೆಯಾಳಾಗುತ್ತಾರೆ. ರಾ ಏಜೆಂಟ್ ಆಗಿರುವ ನಾಯಕ ವಿಜಯ್, ಮಾಲ್‍ನಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಿ, ಅವರನ್ನು ಕೊಲ್ಲಲು ಪ್ರಯತ್ನಿಸುತ್ತಾನೆ.

ಇದು ನಿರ್ದೇಶಕ ನೆಲ್ಸನ್ ವಿಜಯ್ ಕುಮಾರ್ ಅವರ ಮೂರನೇ ಚಿತ್ರವಾಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಅವರ ಇನ್ನೆರಡು ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಒಂದು ವೇಳೆ ‘ಬೀಸ್ಟ್’ ಚಿತ್ರವೂ ಕೂಡ ಬಾಕ್ಸ್ ಆಫೀಸ್‍ನಲ್ಲಿ ಯಶಸ್ಸು ಪಡೆದರೆ, ನಿರ್ದೇಶಕರ ಪಾಲಿಗೆ ಇದೊಂದು ಹ್ಯಾಟ್ರಿಕ್ ಆಗುವುದರಲ್ಲಿ ಸಂಶಯವಿಲ್ಲ.

‘ಬಿಸ್ಟ್’ ಸಿನಿಮಾ, ಪ್ಯಾನ್ ಇಂಡಿಯನ್ ಸಿನಿಮಾ ಕೆಜಿಎಫ್ 2 ಜೊತೆ ಮುಖಾಮುಖಿಯಾಗಲಿದೆ. ‘ಬೀಸ್ಟ್’ ಬಿಡುಗಡೆಯ ಮಾರನೆಯ ದಿನ, ಅಂದರೆ ಏಪ್ರಿಲ್ 14 ರಂದು ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಲಿದೆ. ತಮಿಳುನಾಡಿನ 800 ಸಿನಿಮಾ ಮಂದಿರಗಳನ್ನು ‘ಬೀಸ್ಟ್’ ಸಿನಿಮಾಕ್ಕಾಗಿ ಮೀಸಲಿಡಲಾಗಿದೆ ಮತ್ತು ಅದಕ್ಕೆ ಪ್ರಥಮ ಆದ್ಯತೆಯನ್ನು ನೀಡಲಾಗಿದೆ.
Published by:shrikrishna bhat
First published: