Actress Suicide: ಚಿತ್ರರಂಗಕ್ಕೆ ಮತ್ತೊಂದು ಆಘಾತ, ಖ್ಯಾತ ಯುವನಟಿ ಆತ್ಮಹತ್ಯೆಗೆ ಶರಣು!

ಪ್ರತಿಭಾನ್ವಿತ ಯುವನಟಿಯೊಬ್ಬಳು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಮಧ್ಯಾಹ್ನ ಆ ಯುವನಟಿ ನೇಣಿಗೆ ಶರಣಾಗಿದ್ದಾರೆ. ಪ್ರತಿಭಾನ್ವಿತ ಯುವನಟಿಯ ಆತ್ಮಹತ್ಯೆ ಸುದ್ದಿಯಿಂದ ಚಿತ್ರರಂಗಕ್ಕೆ ಶಾಕ್ ಆಗಿದೆ.

ಆತ್ಮಹತ್ಯೆಗೆ ಶರಣಾದ ನಟಿ ದೀಪಾ

ಆತ್ಮಹತ್ಯೆಗೆ ಶರಣಾದ ನಟಿ ದೀಪಾ

  • Share this:
ಚೆನ್ನೈ, ತಮಿಳುನಾಡು: ಭಾರತೀಯ ಚಿತ್ರರಂಗಕ್ಕೆ (Indian Film Industry) ಮತ್ತೊಂದು ಆಘಾತ (Shock) ಎದುರಾಗಿದೆ. ಕೊರೋನ (Corona) ಬಂದ ಬಳಿಕ ಚಿತ್ರರಂಗದ ಅನೇಕಾನೇಕ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ತಂತ್ರಜ್ಞರ ಅಕಾಲಿಕವಾಗಿ ನಿಧನರಾಗಿದ್ದಾರೆ. ಇದೀಗ ಆ ಸಾವಿನ ಸರಣಿ (Death Series) ಮತ್ತೆ ಮುಂದುವರೆದಿದೆ. ತಮಿಳು ಚಿತ್ರರಂಗದ (Tamil Film Industry) ಪ್ರತಿಭಾನ್ವಿತ ಯುವನಟಿಯೊಬ್ಬಳು (Young Actress) ಇದೀಗ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ. ಚೆನ್ನೈನಲ್ಲಿರುವ (Chennai) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ (Apartment) ಇಂದು ಮಧ್ಯಾಹ್ನ ಆ ಯುವನಟಿ ನೇಣಿಗೆ ಶರಣಾಗಿದ್ದಾರೆ. ಪ್ರತಿಭಾನ್ವಿತ ಯುವನಟಿಯ ಆತ್ಮಹತ್ಯೆ ಸುದ್ದಿಯಿಂದ ತಮಿಳು ಚಿತ್ರರಂಗಕ್ಕೆ ಶಾಕ್ ಆಗಿದೆ. ಬೇರೆ ಭಾಷೆಯ ಚಿತ್ರರಂಗದವರೂ ಕೂಡ ನಟಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವ ನಟಿ ದೀಪಾ

ತಮಿಳು ಚಿತ್ರರಂಗದ ಪ್ರತಿಭಾನ್ವಿತ ಯುವ ನಟಿ ದೀಪಾ ಅಲಿಯಾಸ್ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 29 ವರ್ಷದ ದೀಪಾ ಈಗಾಗಲೇ ಹಲವು ತಮಿಳು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದರು. ದೀಪಾ ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ಖಾಸಗಿ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಇಂದು ಮಧ್ಯಾಹ್ನ ತಮ್ಮ ಅಪಾರ್ಟ್‌ಮೆಂಟ್‌ನ ಫ್ಲಾಟ್ ಒಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸ್ನೇಹಿತೆ ಬಂದು ನೋಡಿದಾಗ ಘಟನೆ ಬೆಳಕಿಗೆ

ವಿರುಗಂಬಾಕ್ಕಂನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ದೀಪಾ ಏಕಾಂಗಿಯಾಗಿ ವಾಸಿಸುತ್ದಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ ತಮ್ಮ ಕೋಣೆಯಲ್ಲಿ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಆಕೆ ಮೊಬೈಲ್‌ಗೆ ಕರೆ ಮಾಡಿದ್ದಾರೆ. ನಿತಂರವಾಗಿ ಕರೆ ಮಾಡಿದ್ರೂ ಸ್ವೀಕರಿಸದೇ ಇದ್ದುದ್ದರಿಂದ ಮನೆಯವರು ಗಾಬರಿಗೊಂಡಿದ್ದಾರೆ. ಬಳಿಕ ಸ್ನೇಹಿತೆಗೆ ವಿಚಾರ ತಿಳಿಸಿದ್ದು, ಆಕೆ ದೀಪಾ ಇರುವ ಫ್ಲಾಟ್‌ಗೆ ಹೋಗಿ ನೋಡಿದ್ದಾರೆ. ಈ ವೇಳೆ ಕೋಣೆಯಲ್ಲಿ ದೀಪಾ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Director No More: ಸಿನಿಮಾರಂಗಕ್ಕೆ ಮತ್ತೊಂದು ಆಘಾತ, ಹಾರ್ಟ್‌ ಅಟ್ಯಾಕ್‌ಗೆ ಬಲಿಯಾದ ಪ್ರತಿಭಾವಂತ ನಿರ್ದೇಶಕ

ಪ್ರೇಮ ವೈಫಲ್ಯದಿಂದ ನೊಂದಿದ್ದರಾ ಯುವನಟಿ?

ನಟಿ ದೀಪಾ ಹಲವು ವರ್ಷಗಳಿಂದ ಮನೆಯವರಿಂದ ದೂರವಿದ್ದು, ಒಬ್ಬರೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಅಲ್ಲದೇ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರವೂ ಬಹುದು ಅಂತ ಶಂಕಿಸಲಾಗಿದೆ.

ಮದುವೆ ಆಗುವಂತೆ ಒತ್ತಡ ಹೇರಿದ್ದರಾ ಹೆತ್ತವರು?

ಮತ್ತೊಂದು ಮೂಲಗಳ ಪ್ರಕಾರ ಮದುವೆ ಆಗುವಂತೆ ದೀಪಾ ಮೇಲೆ ಆಕೆಯ ತಂದೆ, ತಾಯಿ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಆ ಒತ್ತಡ ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರಬಹುದು ಅಂತಲೂ ಶಂಕಿಸಲಾಗಿದೆ. ಇನ್ನು ಆತ್ಮಹತ್ಯೆಗೂ ಮುನ್ನ ಆಕೆ ಡೆತ್‌ ನೋಟ್ ಬರೆದ್ದಿದ್ದು, ಅದೀಗ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.

ಪೊಲೀಸರಿಂದ ಆರಂಭವಾದ ತನಿಖೆ

ಆಂಧ್ರದಲ್ಲಿರುವ ಆಕೆಯ ಸಂಬಂಧಿಕರು ಚೆನ್ನೈಗೆ ಬಂದ ನಂತರ ದೀಪಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅಲ್ಲದೆ, ದೀಪಾ ಪಾಲಿನ್ ಯಾರನ್ನು ಇಷ್ಟಪಟ್ಟಿದ್ದರು ಅಂತ ವಿಚಾರಣೆ ನಡೆಸಲಾಗುತ್ತಿದೆ. ದೀಪಾ ಅವರ ಸೆಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆಕೆ ಪ್ರೀತಿಯಲ್ಲಿ ಏಕೆ ವಿಫಲಳಾಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Viral Video: ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗೆ ಎಸೆದ ಪಾಕಿಸ್ತಾನಿ ನಟಿ, ಸಿಟ್ಟಿಗೆದ್ದ ನೆಟ್ಟಿಗರು

ಯಾರು ಈ ದೀಪಾ?

ತಮಿಳಿನ ಖ್ಯಾತ ನಟ ವಿಶಾಲ್ ಅಭಿನಯದ ತುಪ್ಪರಿವಾಲನ್ ಚಿತ್ರದಲ್ಲಿ ದೀಪಾ ಪಾಲಿನ್ ಸೇವಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಣ್ಣ ಪಾತ್ರವಿದ್ದರೂ, ಅವರ ಅತ್ಯುತ್ತಮ ಅಭಿನಯದಿಂದ ಚಿತ್ರದಲ್ಲಿ ಉತ್ತಮ ಸ್ಥಾನ ಪಡೆದಿದ್ದರು. ಅಲ್ಲದೆ, ನಾಸರ್ ಅಭಿನಯದ ವೈದಾ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
Published by:Annappa Achari
First published: