Kiccha Sudeep: ಕಿಚ್ಚನ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕರ ಆ್ಯಕ್ಷನ್ ಕಟ್

Kiccha Sudeep Film: ಕಿಚ್ಚನ ಮುಂದಿನ ಚಿತ್ರ ಯಾವುದು ಎಂಬ ಕೂತುಹಲ ಅಭಿಮಾನಿಗಳನ್ನು ಕಾಡುತ್ತಿದ್ದು, ಸುದೀಪ್ ತಮಿಳಿನ ಖ್ಯಾತ ನಿರ್ದೇಶಕರ ಜೊತೆ ಮುಂದಿನ ಸಿನೆಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

  • Share this:
Sandalwood: ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಮುಗಿಸಿರುವ ಕಿಚ್ಚ ಸುದೀಪ್, ಅದರ  ಬಿಡುಗಡೆಗೆ ಕಾಯುತ್ತಿದ್ದಾರೆ. ಅಲ್ಲದೇ ಈ ಚಿತ್ರಗಳು ಅವರ ಅಭಿಮಾನಿಗಳಲ್ಲಿ ಕೂತುಹಲ ಮೂಡಿಸಿದ್ದು, ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಕೋಟಿಗೊಬ್ಬ-3 ಸಿನಿಮಾ ಬಗ್ಗೆ ಅಪ್ ಡೇಟ್  ಬಂದಿದ್ದು, ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ ಎನ್ನುವ ಗುಸು ಗುಸು ಗಾಂಧಿನಗರದಲ್ಲಿ ಕೇಳಿ ಬಂದಿದೆ. ಇನ್ನು ಇದರ ನಡುವೆ ಕಿಚ್ಚನ ಮುಂದಿನ ಚಿತ್ರ ಯಾವುದು ಎಂಬ ಕೂತುಹಲ ಅಭಿಮಾನಿಗಳನ್ನು ಕಾಡುತ್ತಿದ್ದು, ಸುದೀಪ್ ತಮಿಳಿನ ಖ್ಯಾತ ನಿರ್ದೇಶಕರ ಜೊತೆ ಮುಂದಿನ ಸಿನೆಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟಕ್ಕೂ  ಸುದ್ದಿಗೆ ಕಾರಣ  ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಕಿಚ್ಚ ಸುದೀಪ್ ಭೇಟಿ ಮಾಡಿದ್ದು. ಹೌದು, ಬೆಂಗಳೂರಿಗೆ ಆಗಮಿಸಿದ್ದ ವೆಂಕಟ್ ಪ್ರಭು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.  ಈ ಮೂಲಕ  ಸುದೀಪ್ ಮುಂದಿನ ಚಿತ್ರಕ್ಕೆ ಯಾರು  ಆಕ್ಷನ್ ಕಟ್ ಹೇಳುತ್ತಾರೆ ಎಂಬ ಪ್ರಶ್ನೆಗೆ  ಅಭಿಮಾನಿಗಳಿಗೆ ಉತ್ತರ ಸಿಕ್ಕಂತಾಗಿದೆ. ಆದರೆ ಇನ್ನು ಅಧಿಕೃತವಾಗುವುದು ಬಾಕಿ ಇದೆ.

ವೆಂಕಟ್ ಪ್ರಭು ಕಿಚ್ಚನ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಸುದೀಪ್ ತಮ್ಮ ಕೈಯಾರೆ ವಿಶೇಷ  ಅಡುಗೆ ಮಾಡಿ ಬಡಿಸಿದ್ದು, ಅವರ  ಆತಿಥ್ಯಕ್ಕೆ ವೆಂಕಟ್ ಪ್ರಬು ಫಿದಾ ಆಗಿದ್ದಾರೆ. ಸುದೀಪ್ ಭೇಟಿ ಮಾಡಿರುವ ಫೋಟೋವನ್ನು ತಮ್ಮ ಖಾತೆಯಲ್ಲಿ  ಶೇರ್ ಮಾಡಿಕೊಂಡಿರುವ  ವೆಂಕಟ್ ಪ್ರಭು, ಕಿಚ್ಚನ ಆತಿಥ್ಯ ಹೊಗಳಿದ್ದಾರೆ. ಜೊತೆಗೆ, ಕಿಚ್ಚನ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ  ಟ್ಟಿಟ್ಟರ್ ಖಾತೆಯಲ್ಲಿ ಇಂಥ ಅದ್ಭುತ ಆತಿಥ್ಯ ನೀಡಿದ್ದೀರಿ,  ನೀವು ಅದ್ಭುತವಾಗಿ ಅಡುಗೆ ಮಾಡುತ್ತೀರ. ಧನ್ಯವಾದಗಳು. ನಮ್ಮ ಮುಂದಿನ ಚಿತ್ರಕ್ಕಾಗಿ ಉತ್ಸುಕನಾಗಿದ್ದೇನೆ. ಮುಂಚಿತವಾಗಿ  ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ಧಾರೆ.

ಸುದೀಪ್ ಹೊಸ ಸಿನಿಮಾ  ಅವರ ಹುಟ್ಟುಹಬ್ಬದ ದಿನ ಘೋಷಣೆಯಾಗುವ ಸಾಧ್ಯತೆ ಇದೆ. ನಿರ್ದೇಶಕ ವೆಂಕಟ್ ಪ್ರಭು ತಮಿಳಿನಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶಕ ಮಾಡಿದ್ದಾರೆ. ಸದ್ಯ ಮಾನಾಡು ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಮಾನಾಡು  ಚಿತ್ರದಲ್ಲಿ ನಟ ಸಿಂಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಸಿಂಬು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ಸಿನಿಮಾ ಜೊತೆಗೆ ವೆಂಕಟ್ ಪ್ರಭು ಲೈವ್ ಟೆಲಿಕಾಸ್ಟ್ ಸಿನಿಮಾ ನಿರ್ದೇಶನದಲ್ಲಿ ಬ್ಯೂಸಿಯಾಗಿದ್ದಾರೆ.

ಚಿತ್ರೀಕರಣ ಮುಗಿಸಿರುವ ಕೋಟಿಗೊಬ್ಬ 3 ಶಿವ ಕಾರ್ತಿಕ್  ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಸೂರಪ್ಪ ಬಾಬು ಬಂಡವಾಳ  ಹಾಕಿದ್ದಾರೆ.ಇನ್ನು ಈ  ಚಿತ್ರದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: