• Home
  • »
  • News
  • »
  • entertainment
  • »
  • 28 ವರ್ಷಗಳ ನಂತರ ಪುನೀತ್​ಗಾಗಿ ಚಂದನವನಕ್ಕೆ ಕಾಲಿಟ್ಟ ನಟಿ ರಾಧಿಕಾ ಶರತ್​ಕುಮಾರ್​

28 ವರ್ಷಗಳ ನಂತರ ಪುನೀತ್​ಗಾಗಿ ಚಂದನವನಕ್ಕೆ ಕಾಲಿಟ್ಟ ನಟಿ ರಾಧಿಕಾ ಶರತ್​ಕುಮಾರ್​

ಪುನೀತ್ ಅಭಿನಯದ 'ಯುವರತ್ನ' ಸಿನಿಮಾಗೆ ಎಂಟ್ರಿ ಕೊಟ್ಟ ರಾಧಿಕಾ ಶರತ್​ ಕುಮಾರ್​

ಪುನೀತ್ ಅಭಿನಯದ 'ಯುವರತ್ನ' ಸಿನಿಮಾಗೆ ಎಂಟ್ರಿ ಕೊಟ್ಟ ರಾಧಿಕಾ ಶರತ್​ ಕುಮಾರ್​

ಸದ್ಯ ಸಿನಿಮಾ ಹಾಗೂ ಧಾರಾವಾಹಿಗಳ ನಿರ್ಮಾಣ ಹಾಗೂ ಕಿರುತೆರೆಯಲ್ಲಿ ಅಭಿನಯಿಸುತ್ತಿರುವ ನಟಿ ರಾಧಿಕಾ ಶರತ್​ ಕುಮಾರ್​. ಬಣ್ಣದ ಲೋಕಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಇವರು ದ್ವಾರಕೀಶ್​, ವಿಷ್ಣುವರ್ಧನ್​, ಶಂಕರ್ ನಾಗ್​ ಜತೆ ತೆರೆ ಹಂಚಿಕೊಂಡಿದ್ದಾರೆ. ಈಗ ಮತ್ತೆ 28 ವರ್ಷಗಳ ನಂತರ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅದು ಸಹ ನಮ್ಮ ಪವರ್​ ಸ್ಟಾರ್​ ಪುನೀತ್​ಗಾಗಿ.

ಮುಂದೆ ಓದಿ ...
  • News18
  • Last Updated :
  • Share this:

ಕೇವಲ ಸಿನಿಮಾದ ಟೈಟಲ್​ ಹಾಗೈ ಫಸ್ಟ್​ ಲುಕ್​ನಿಂದಲೇ ಸಾಕಷ್ಟು ಹವಾ ಹುಟ್ಟಿಸಿದೆ ಪವರ್​ ಸ್ಟಾರ್​ ಪುನೀತ್​ ಅಭಿನಯದ 'ಯುವರತ್ನ' ಸಿನಿಮಾ. 'ರಾಜಕುಮಾರ' ಸಿನಿಮಾದ ನಂತರ ಎರಡನೇ ಬಾರಿಗೆ ಪುನೀತ್ ಹಾಗೂ ಸಂತೋಷ್​ ಆನಂದ್​ ರಾಮ್​ ಒಂದಾಗಿರುವುದು ಈ ಚಿತ್ರದ ಮತ್ತೊಂದು ಹೈಲೈಟ್​.

ಇದನ್ನೂ ಓದಿ: ಪಕ್ಷಿಗಳ ರಕ್ಷಣೆಗೆ ಕರೆ ನೀಡಿದ ನಟಿ ಗೋಲ್ಡನ್​ ಕ್ವೀನ್​ ಅಮೂಲ್ಯ

ಪುನೀತ್​ ಹುಟ್ಟುಹಬ್ಬದಂದೇ (ಮಾ.16) ಈ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಮಾಡಿರುವ ಚಿತ್ರತಂಡ ಈಗ ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದೆ. ಅದು ಈ ಈ ತಂಡಕ್ಕೆ ಬಹು ಭಾಷಾ ನಟಿ ರಾಧಿಕಾ ಶರತ್ ಕುಮಾರ್ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್​ ರಾಮ್​ ಟ್ವೀಟ್​ ಮಾಡಿದ್ದಾರೆ.

Welcome @realradikaa Madam on board 👍 it’s a Privilege to work with u For #YuvaRathnaa🙌Her come back to Kannada films After “Jeevana Chakra” (starring Legendary Vishnu sir ) in 1985... pic.twitter.com/NB7nepg3OLನಟಿ ರಾಧಿಕಾ ಶರತ್ ಕುಮಾರ್ 'ಯುವರತ್ನ' ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನ ನಿರ್ವಹಿಸಲಿದ್ದಾರೆ. ಆನಂದ್​ ರಾಮ್​ ಅವರ ಟ್ವೀಟ್​ಗೆ ರಾಧಿಕಾ ಖುಷಿಯಿಂದಲೇ ಪ್ರತಿಕ್ರಿಯಿಸಿದ್ದಾರೆ.


ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಹಿಂದಿಯಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದ್ವಾರಕೀಶ್​ ಅವರೊಂದಿಗೆ ರಾಧಿಕಾ 'ಪ್ರಚಂಡ ಕುಳ್ಳ' ಸಿನಿಮಾದಲ್ಲಿ ತೆರೆ ಹಂಚಿಕೊಂಡರೆ, ವಿಷ್ಣುವರ್ಧನ್​ ಅವರೊಂದಿಗೆ 'ಜೀವನ ಚಕ್ರ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ ಶಂಕರ್ ನಾಗ್​, ಗೀತಾ ಅಭಿನಯದ 'ನಾಗಿಣಿ' ಸಿನಿಮಾದಲ್ಲೂ ರಾಧಿಕಾ ಅಭಿನಯಿಸಿದ್ದು, ಈಗ 28 ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಈ ಹಿಂದೆ ಸಹ ಈ ಸಿನಿಮಾದ ನಾಯಕಿಯನ್ನು ಬಗ್ಗೆ ತಿಳಿಸುವಾಗಲೂ ಸಂತೋಷ್​ ಆನಂದ್​ ರಾಮ್​ ಟ್ವೀಟ್​ ಮಾಡುವ ಮೂಲಕವೇ ಪರಿಚಯಿಸಿದ್ದರು. ಇನ್ನೂ ಈ ಸಿನಿಮಾ ಕುರಿತಂತೆ ಸಾಕಷ್ಟು ಕೂತುಹಲಗಳು ಬಾಕಿವೆ ಅನ್ನೋದಂತೂ ಖಚಿತ.  ಸದ್ಯ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಶೀಘ್ರದಲ್ಲೇ  ತೆರೆಕಾಣಲಿದೆ.

- ಅನಿತಾ ಈ, 

 PHOTOS: ಮೇಡಮ್​ ಟುಸ್ಸಾಡ್​ನಲ್ಲಿ ತನ್ನದೇ ಮೇಣದ ಪ್ರತಿಮೆಯೊಂದಿಗೆ ನಿಂತು ನಗೆ ಚೆಲ್ಲಿದ ದೀಪಿಕಾ ಪಡುಕೋಣೆ..!

First published: