Pooja Lokesh: ಮೀರಾ ಸೀರಿಯಲ್ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ ನಟಿ ಪೂಜಾ ಲೋಕೇಶ್!

ನಟಿ ಪೂಜಾ ಲೋಕೇಶ್ (Pooja lokesh) ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ?. ಇವರು ಮೂಲತಃ ಕನ್ನಡ ಚಿತ್ರರಂಗದ ನಟಿ ಆಗಿದ್ದು, ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೆ, ತಮಿಳು (Tamil) ಭಾಷೆಯ ಧಾರವಾಹಿಗಳಲ್ಲಿಯೂ ಸಹ ನಟಿಸಿ ಹೆಸರು ಮಾಡಿದ್ದಾರೆ.

ಪೂಜಾ ಲೋಕೇಶ್, ಖುಷ್ಬು

ಪೂಜಾ ಲೋಕೇಶ್, ಖುಷ್ಬು

  • Share this:
ನಟ ರಮೇಶ್ ಅರವಿಂದ್ (Ramesh Aravind) ಅವರ ಜೊತೆಗೆ 90 ರ ದಶಕದಲ್ಲಿ ‘ಉಲ್ಟಾ ಪಲ್ಟಾ’ ಎಂಬ ಹೆಸರಿನ ಚಿತ್ರದಲ್ಲಿ (Movie) ನಟಿಸಿದ ನಟಿ ಪೂಜಾ ಲೋಕೇಶ್ (Pooja lokesh) ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ?. ಇವರು ಮೂಲತಃ ಕನ್ನಡ ಚಿತ್ರರಂಗದ ನಟಿ ಆಗಿದ್ದು, ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೆ, ತಮಿಳು (Tamil) ಭಾಷೆಯ ಧಾರವಾಹಿಗಳಲ್ಲಿಯೂ ಸಹ ನಟಿಸಿ ಹೆಸರು ಮಾಡಿದ್ದಾರೆ. ಇನ್ನೂ ಈ ಚಿತ್ರ ನೋಡದವರು ಯಾರಾದರೂ ಇದ್ದರೆ ಅವರಿಗೆ ಪೂಜಾ ಲೋಕೇಶ್ ಯಾರು ಎಂದರೆ ಕನ್ನಡ ಚಿತ್ರರಂಗ ಕಂಡ ಅದ್ಬುತ ನಟ ಲೋಕೇಶ್ (Lokesh) ಮತ್ತು ಹಿರಿಯ ನಟಿ ಗಿರೀಜಾ ಲೋಕೇಶ್ ಅವರ ಮಗಳು ಮತ್ತು ನಟ ಸೃಜನ್ ಲೋಕೇಶ್ ಅವರ ಸಹೋದರಿ ಎಂದು ಹೇಳಿದರೆ ಬಹುತೇಕವಾಗಿ ಎಲ್ಲರಿಗೂ ಈ ನಟಿಯ ಮುಖ ಕಣ್ಮುಂದೆ ಬರುತ್ತದೆ.

ಧಾರವಾಹಿಗಳಿಗೆ ಮರಳಿದ ಪೂಜಾ ಲೋಕೇಶ್:

ನಟಿ ಪೂಜಾ ಲೋಕೇಶ್ ಅವರ ಬಗ್ಗೆ ಇಷ್ಟೊಂದು ಮಾತೇಕೆ ಎಂದು ನೀವು ಅಂದು ಕೊಳ್ಳಬಹುದು. ನಟಿ ಪೂಜಾ ಅವರು ತಮಿಳು ಧಾರವಾಹಿಗಳಿಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅವರು ಸೆಲ್ವಿ, ಕುಂಗುಮಾಮ್, ಮುಂಡನೈ ಮುಡಿಚು, ಮಹಾಭಾರತಂ, ಕಲ್ಕಿ, ಗೀತಾಂಜಲಿ, ಉಯಿರ್ಮೇ, ಅಟ್ಟಿಪೋಕ್ಕಲ್ ಮತ್ತು ಮುತಾರಾಮ್ ನಂತಹ ಟಿವಿ ಸೀರಿಯಲ್ ಗಳಲ್ಲಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮಿಳು ಭಾಷಿಗರ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ಅವರು ಕಳೆದ ಏಳು ವರ್ಷಗಳಿಂದ ಈ ಧಾರವಾಹಿಗಳಿಂದ ದೂರವಿದ್ದರು ಎಂದು ಹೇಳಲಾಗುತ್ತಿದೆ.

ಆಗಸ್ಟ್ 2014 ರಿಂದ ಜನವರಿ 2015ರ ವರೆಗೆ ನಡೆದ ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿದ್ದ ‘ಉಯಿರ್ಮೇ’ ಧಾರವಾಹಿಯಲ್ಲಿ ನಟಿ ಪೂಜಾ ಅವರು ಕೊನೆಯ ಬಾರಿಗೆ ಕಾಣಿಸಿ ಕೊಂಡಿದ್ದರು. ಈ ನಡುವೆ ಅವರು ಬೆಂಗಳೂರಿನಲ್ಲಿಯೇ ಹೇರ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಈಗ ನಟಿ ತಮಿಳು ಟಿವಿ ಸೀರಿಯಲ್ ಗಳಿಗೆ ಮತ್ತೆ ಮರಳಿದ್ದಾರೆ. ಅವರು ಇತ್ತೀಚೆಗೆ ತಮ್ಮ ಮುಂಬರುವ ತಮಿಳು ಸೀರಿಯಲ್ ಮೀರಾ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: Happy Birthday Lokesh: ಅಪ್ಪನ ಹುಟ್ಟುಹಬ್ಬದಂದು ಕೋವಿಡ್​ ಲಸಿಕೆ ಹಾಕಿಸಿಕೊಂಡ ಸೃಜನ್​ ಲೋಕೇಶ್​..!

ಮೀರಾ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ ನಟಿ ಪೂಜಾ:

ಮೀರಾ ಸೀರಿಯಲ್ ನಲ್ಲಿ ನಟಿಸುತ್ತಿರುವ ಬೇರೆ ನಟ, ನಟಿಯರ ಜೊತೆಗೆ ತೆಗೆಸಿಕೊಂಡ ತನ್ನ ಫೋಟೋವನ್ನು ಹಂಚಿಕೊಂಡು "ಕ್ಯಾಮೆರಾದ ಮುಂದೆ ಬರಲಿದ್ದೇನೆ, ತಮಿಳಿನ ಧಾರವಾಹಿಗೆ ಮತ್ತೆ ನನ್ನನ್ನು ಮರಳಿ ಕರೆತಂದ ನನ್ನ ಪ್ರೀತಿಯ ನಟಿ ಖುಷ್ಬು ಸುಂದರ್ ಗೆ ಮತ್ತೊಮ್ಮೆ ಧನ್ಯವಾದಗಳು. ಈ 7 ವರ್ಷಗಳಲ್ಲಿ ತುಂಬಾನೇ ಬದಲಾಗಿದೆ. ಆದರೆ ಪ್ರತಿ ಬಿಟ್ ನಲ್ಲಿಯೂ ನನ್ನನ್ನು ಪ್ರೀತಿಸಿ ಮತ್ತು ಯಾವಾಗಲೂ ನಿಮ್ಮ ಬೆಂಬಲದ ಅಗತ್ಯವಿದೆ. ನನ್ನ ಪಾತ್ರಕ್ಕೆ ನೀವು ನನ್ನನ್ನು ದ್ವೇಷಿಸುತ್ತೀರಿ" ಎಂದು ಬರೆದು ಕೊಂಡಿದ್ದಾರೆ.

ನೆಗೆಟಿವ್ ರೂಲ್​ ನಲ್ಲಿ ಪೂಜಾ:

ಅವರು ಮಾಡಲಿರುವ ಪಾತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಪ್ರೇಕ್ಷಕರು ಅವಳನ್ನು ದ್ವೇಷಿಸುತ್ತಾರೆ ಎಂದು ಅವಳು ಬಹಿರಂಗಪಡಿಸಿರುವುದರಿಂದ ಇದು ಸಹ ನೆಗೆಟಿವ್ ಪಾತ್ರವೆ ಇರಬೇಕು ಎಂದು ನಾವು ಸುಲಭವಾಗಿ ಊಹಿಸಬಹುದು. ಮೀರಾ ಧಾರಾವಾಹಿ ಇದೇ ಮಾರ್ಚ್ ತಿಂಗಳ 28 ರಿಂದ ಕಲರ್ಸ್ ಟಿವಿ ತಮಿಳಿನಲ್ಲಿ ಶುರುವಾಗಲಿದೆ.

ಇದನ್ನೂ ಓದಿ: ‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ‘; ಇದು ಟಾಕಿಂಗ್ ಸ್ಟಾರ್ ಸೃಜನ್ ಹೊಸ ಪ್ರಯತ್ನ

ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದ ಪೂಜಾ ಲೋಕೇಶ್:

ಬೆಂಗಳೂರಿನಲ್ಲಿ ಜನಿಸಿದ ಪೂಜಾ ಲೋಕೇಶ್ ಕಲಾವಿದರ ಕುಟುಂಬದಿಂದ ಬಂದವರು. ಅವರ ತಂದೆ ಲೋಕೇಶ್ ಕನ್ನಡದಲ್ಲಿ ಅನೇಕ ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದರೆ, ತಾಯಿ ಗಿರಿಜಾ ಲೋಕೇಶ್ ಕೂಡ ರಂಗಭೂಮಿ ಮತ್ತು ಚಲನಚಿತ್ರ ಅಭಿನಯಿಸಿದ್ದಾರೆ. ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವುದರ ಜೊತೆಗೆ, ಪೂಜಾ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೀರಾ ಧಾರಾವಾಹಿಯಲ್ಲಿ ಬರಹಗಾರರಾಗಿ ಪಾದಾರ್ಪಣೆ ಮಾಡುತ್ತಿರುವ ನಟಿ ಮತ್ತು ರಾಜಕಾರಣಿ ಖುಷ್ಬು ಸುಂದರ್ ಅವರು ಈ ಹಿಂದೆ ಈ ಯೋಜನೆಯನ್ನು ಘೋಷಿಸಿದ್ದರು. ಫೆಬ್ರವರಿ 14 ರಂದು ಚಿತ್ರೀಕರಣ ಪ್ರಾರಂಭವಾಗಿತ್ತು. ಚಿತ್ರೀಕರಣದ ಮೊದಲ ದಿನದ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು.
Published by:shrikrishna bhat
First published: