• Home
  • »
  • News
  • »
  • entertainment
  • »
  • Actress Suicide: ಆತ್ಮಹತ್ಯೆೆಗೆ ಶರಣಾದ ಯುವನಟಿ! ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆ!

Actress Suicide: ಆತ್ಮಹತ್ಯೆೆಗೆ ಶರಣಾದ ಯುವನಟಿ! ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆ!

ಆತ್ಮಹತ್ಯೆಗೆ ಶರಣಾದ ಯುವನಟಿ

ಆತ್ಮಹತ್ಯೆಗೆ ಶರಣಾದ ಯುವನಟಿ

ಪ್ರತಿಭಾನ್ವಿತ ಯುವನಟಿಯೊಬ್ಬಳು (Young Actress) ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಈ ನಟಿಯ ಹೊಸ ಸಿನಿಮಾ ಕಳೆದ 2 ವಾರಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಸಿನಿಮಾದ ಜೊತೆಗೆ ಈ ಯುವನಟಿ ಅಭಿನಯಕ್ಕೂ ಪ್ರೇಕ್ಷಕರು ತಲೆದೂಗಿದ್ದರು. ಇನ್ನೆನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದಳು ಅಂದುಕೊಳ್ಳುತ್ತಿರುವಾಗಲೇ ನಟಿ ಬಾಳು ದುರಂತ ಅಂತ್ಯ ಕಂಡಿದೆ.

ಮುಂದೆ ಓದಿ ...
  • Share this:

ಮುಂಬೈ: ಭಾರತೀಯ ಚಿತ್ರರಂಗಕ್ಕೆ (Indian Film Industry) ಮತ್ತೊಂದು ಆಘಾತ (Shock) ಎದುರಾಗಿದೆ. ಕೊರೋನ (Corona) ಬಂದ ಬಳಿಕ ಚಿತ್ರರಂಗದ ಅನೇಕಾನೇಕ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ತಂತ್ರಜ್ಞರ ಅಕಾಲಿಕವಾಗಿ ನಿಧನರಾಗಿದ್ದಾರೆ. ಇದೀಗ ಆ ಸಾವಿನ ಸರಣಿ (Death Series) ಮತ್ತೆ ಮುಂದುವರೆದಿದೆ. ತಮಿಳು ಚಿತ್ರರಂಗದ (Tamil Film Industry) ಪ್ರತಿಭಾನ್ವಿತ ಯುವನಟಿಯೊಬ್ಬಳು (Young Actress) ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಈ ನಟಿಯ ಹೊಸ ಸಿನಿಮಾ ಕಳೆದ 2 ವಾರಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಸಿನಿಮಾದ ಜೊತೆಗೆ ಈ ಯುವನಟಿ ಅಭಿನಯಕ್ಕೂ ಪ್ರೇಕ್ಷಕರು ತಲೆದೂಗಿದ್ದರು. ಇನ್ನೆನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದಳು ಅಂದುಕೊಳ್ಳುತ್ತಿರುವಾಗಲೇ ನಟಿ ಬಾಳು ದುರಂತ ಅಂತ್ಯ ಕಂಡಿದೆ. ಪ್ರತಿಭಾನ್ವಿತ ಯುವನಟಿಯ ಸಾವಿನ ಸುದ್ದಿಯಿಂದ ತಮಿಳು ಚಿತ್ರರಂಗಕ್ಕೆ ಶಾಕ್ ಆಗಿದೆ. ಬೇರೆ ಭಾಷೆಯ ಚಿತ್ರರಂಗದವರೂ ಕೂಡ ನಟಿ ಸಾವಿಗೆ ಕಂಬನಿ ಮಿಡಿದಿದ್ದಾರೆ.


ನಟಿ ಆಕಾಂಕ್ಷಾ ಮೋಹನ್ ಶವವಾಗಿ ಪತ್ತೆ


ತಮಿಳು ಚಿತ್ರರಂಗದ ಯುವನಟಿ ಆಕಾಂಕ್ಷಾ ಮೋಹನ್ ಸಾವಿನ ಮನೆ ಕದ ತಟ್ಟಿದ್ದಾರೆ. ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ಕೋಣೆಯೊಂದರಲ್ಲಿ ಆಕಾಂಕ್ಷಾ ಶವವಾಗಿ ಪತ್ತೆಯಾಗಿದ್ದಾರೆ. ಸೆಪ್ಟಂಬರ್ 28 ರಂದು ರೂಮ್ ಪಡೆದಿದ್ದ ಇವರು, ಸೆ.30 ರಂದು ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು.


ನಟಿ ಆಕಾಂಕ್ಷಾ


ಹೋಟೆಲ್‌ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ


ಆಕಾಂಕ್ಷಾ ಮೋಹನ್ ಬುಧವಾರ ರಾತ್ರಿ 8 ಗಂಟೆಗೆ ಹೋಟೆಲ್‌ಗೆ ಚೆಕ್ ಇನ್ ಮಾಡಿ ಒಂದೆರಡು ದಿನಗಳ ಕಾಲ ಉಳಿದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಕೆ  ಹಲವು ಗಂಟೆಗಳ ನಂತರ ಸಿಬ್ಬಂದಿ ಬಾಗಿಲು ತಟ್ಟಿದಾಗ ಆಕೆ ತನ್ನ ಕೊಠಡಿಯಿಂದ ಹೊರಬಂದಿರಲಿಲ್ಲ. ಅಲ್ಲದೇ ಕರೆಗೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಬಳಿಕ ಪೊಲೀಸರು ಹೋಟೆಲ್‌ ಕೋಣೆಗೆ ಬಂದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.


ಡೆತ್ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣು


ಆಕಾಂಕ್ಷಾ ಮೋಹನ್ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. "ನನ್ನನ್ನು ಕ್ಷಮಿಸಿ. ಇದಕ್ಕೆ ಯಾರೂ ಜವಾಬ್ದಾರರಲ್ಲ. ನನಗೆ ಸಂತೋಷವಿಲ್ಲ. ನನಗೆ ಶಾಂತಿ ಬೇಕು" ಎಂದು ಬರೆದಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Kantara Review: ಇದು ಶಿವನ ಸಂಘರ್ಷದ ದಂತಕಥೆ: ಕಾಂತಾರದಲ್ಲಿ ರಿಷಬ್ ಹೊಸ ಅವತಾರ!


ಒಂಟಿಯಾಗಿ ವಾಸ, ಮಾನಸಿಕ ಖಿನ್ನತೆಯಿಂದ ತೊಳಲಾಟ


30 ವರ್ಷದ ಆಕಾಂಕ್ಷಾ ಮೋಹನ್ ಮುಂಬೈ ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರದ ಸೊಸೈಟಿಯಲ್ಲಿ ಒಂಟಿಯಾಗಿ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಮಾನಸಿಕ ಖಿನ್ನತೆಗೂ ಅವರು ಒಳಗಾಗಿದ್ದರಂತೆ. ಈ ಕಾರಣದಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.


ಯಾರು ಈ ಆಕಾಂಕ್ಷಾ ಮೋಹನ್?


ಆಕಾಂಕ್ಷಾ ಮೋಹನ್ ಮಾಡೆಲ್ ಮತ್ತು ನಟಿಯಾಗಿದ್ದರು. ಕೆಲವು ಚಿತ್ರಗಳಲ್ಲಿ ನಟಿಸಿದ್ದಳು. ಸೆಪ್ಟೆಂಬರ್ 16 ರಂದು ಬಿಡುಗಡೆಯಾದ ಸಿಯಾ ಚಿತ್ರದಲ್ಲಿ ಆಕಾಂಕ್ಷಾ ಶೆಫಾಲಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕಾಂಕ್ಷಾ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಆಕಾಂಕ್ಷಾ 11 ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಇಂಜಿನಿಯರಿಂಗ್ ಮತ್ತು ಎಂಬಿಎ ಮಾಡಿದ್ದೇನೆ ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Jothe Jotheyali: ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಹೇಗಿದೆ? ಹರೀಶ್ ರಾಜ್‌ ಪಾತ್ರ ಒಪ್ಪಿಕೊಂಡರಾ ಫ್ಯಾನ್ಸ್?


ಹಲವು ಜಾಹೀರಾತುಗಳಲ್ಲಿ ಅಭಿನಯ


ಸಿಯಾ ಚಿತ್ರದ ಚಿತ್ರೀಕರಣದ ವೇಳೆ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಆಕಾಂಶಾ ಅವರು ವಿವಿಧ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ. ಬೇರೆ ಬೇರೆ ಬ್ರಾಂಡ್‌ಗಳಿಗೆ ಫೋಟೋ ಶೂಟ್ ಕೂಡ ಮಾಡಿದ್ದಾರೆ. ಇದೀಗ ನಟಿ ಸಾವಿನ ಸುದ್ದಿಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.

Published by:Annappa Achari
First published: