ತಮಿಳು ನಟ ವಿಶಾಲ್​ಗೆ 45 ಲಕ್ಷ ರೂ ಟೋಪಿ; ತನ್ನದೇ ಸಂಸ್ಥೆಯ ಮಹಿಳಾ ಉದ್ಯೋಗಿಯಿಂದ ವಂಚನೆ

Vishal: ಇತ್ತೀಚೆಗೆ ಆ ಮಹಿಳಾ ಉದ್ಯೋಗಿ  ಮನೆಯೊಂದನ್ನು ಖರೀದಿಸಿದ್ದರು. ಹೊಸ ಮನೆಗೆ 45 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್​​ ವಿಚಾರಣೆ ಮಾಡಿದ್ದಾರೆ. ಈ ವೇಳೆ ನೈಜ ಸತ್ಯ ಬೆಳಕಿಗೆ ಬಂದಿದೆ.

ನಟ ವಿಶಾಲ್

ನಟ ವಿಶಾಲ್

 • Share this:
  ಟಾಲಿವುಡ್​ ನಟ ವಿಶಾಲ್​​ ‘ಚಕ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ತಮಿಳಿನಲ್ಲಿ ಮಾತ್ರವಲ್ಲದೆ ಕನ್ನಡ, ತೆಲುಗು, ಮಲಯಾಳಂ  ಭಾಷೆಯಲ್ಲಿ ಮೂಡಿಬರುತ್ತಿದೆ. ವಿಶಾಲ್​ ಫಿಲಂ ಫ್ಯಾಕ್ಟರಿ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ‘ಚಕ್ರ’ ಸಿನಿಮಾ ಟ್ರೇಲರ್​ ಕೂಡ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಅವರದೇ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ವಿಶಾಲ್​​ ಅವರಿಗೆ 45 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  ಈ ವಿಚಾರ ತಿಳಿದಂತೆ ವಿಶಾಲ್​ ಫಿಲಂ ಫ್ಯಾಕ್ಟರಿ ಮ್ಯಾನೇಜರ್​​ ಹರಿ ಎಂಬವರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ವಡಾಪಳನಿ ಠಾಣೆಯಲ್ಲಿ ವಂಚಿಸಿದ ಮಹಿಳಾ ಉದ್ಯೋಗಿ ಬಗ್ಗೆ ದೂರು ದಾಖಲಿಸಿದ್ದಾರೆ. ಆರು ವರ್ಷಗಳಿಂದ ವಿಶಾಲ್​ ಫಿಲ್ಮ್​​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ 45 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

  ಇತ್ತೀಚೆಗೆ ಆ ಮಹಿಳಾ ಉದ್ಯೋಗಿ  ಮನೆಯೊಂದನ್ನು ಖರೀದಿಸಿದ್ದರು. ಹೊಸ ಮನೆಗೆ 45 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್​​ ವಿಚಾರಣೆ ಮಾಡಿದ್ದಾರೆ. ಈ ವೇಳೆ ನೈಜ ಸತ್ಯ ಬೆಳಕಿಗೆ ಬಂದಿದೆ.

  ‘ಚಕ್ರ’ ಸಿನಿಮಾದಲ್ಲಿ ನಟ ವಿಶಾಲ್  ಆರ್ಮಿ ಆಫೀಸರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು,‌ ಇದೊಂದು ಪಕ್ಕಾ ಆಕ್ಷನ್ ಫಿಲಂ‌ ಎನ್ನಲಾಗುತ್ತಿದೆ. ನವ ನಿರ್ದೇಶಕ ಆನಂದನ್ ಆಕ್ಷನ್ ಕಟ್ ನಲ್ಲಿ ಚಕ್ರ ಸಿನಿಮಾ‌ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ವಿಶಾಲ್ ಗೆ ನಾಯಕಿಯರಾಗಿ ರೆಜಿನಾ ಕಸ್ಸಂದ್ರ ಹಾಗೂ ಶ್ರದ್ದಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ. ವಿಶಾಲ್ ಫಿಲಂ ಫ್ಯಾಕ್ಟರಿ ಮೂಲಕ ಸ್ವತಃ ವಿಶಾಲ್ ಚಕ್ರ ಸಿನಿಮಾಗೆ ಹಣ ಹೂಡಿದ್ದಾರೆ.

  PUBG: ಪಾಕಿಸ್ತಾನದಲ್ಲಿ ಬ್ಯಾನ್​ ಆಯ್ತು ಪಬ್​ಬಿ; ಯಾವ ಕಾರಣಕ್ಕೆ ಗೊತ್ತಾ?

   
  Published by:Harshith AS
  First published: