Puneeth Rajkumar : ಅಪ್ಪು ಓದಿಸುತ್ತಿದ್ದ 1800 ಮಕ್ಕಳ ಹೊಣೆ ಹೊತ್ತ ತಮಿಳು ನಟ ವಿಶಾಲ್​: ಕನ್ನಡಿಗರಿಂದ ಬಹುಪರಾಕ್!​

Puneeth Rajkumar : 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ಮುಂದಿನ ವರ್ಷದಿಂದ ನಿಮ್ಮ ಫೌಂಡೇಷನ್, ನಿಮ್ಮ ಸಮಾಜಸೇವೆಯನ್ನು ನಾನು ಮುಂದುವರೆಸುತ್ತೇನೆ ಅಂತ ವಿಶಾಲ್​ ಭರವಸೆ ನೀಡಿದ್ದಾರೆ.

ಪುನೀತ್​ ನೆನದು ಭಾವುಕರಾದ ನಟ ವಿಶಾಲ್​

ಪುನೀತ್​ ನೆನದು ಭಾವುಕರಾದ ನಟ ವಿಶಾಲ್​

  • Share this:
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​(Power star Puneeth Rajkumar) ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಅವರಿಗೆ ಅವರೇ ಸಾಟಿ. ಸಿನಿಮಾದಲ್ಲಿ ಅಷ್ಟೇ ಅಲ್ಲದೇ ಸಮಾಜಮುಖಿ ಕಾರ್ಯ(Social Works)ದಲ್ಲಿ ಪುನೀತ್​ ರಾಜ್​ಕುಮಾರ್​ ತೊಡಗಿಸಿಕೊಂಡಿದ್ದವರು. ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಅವರು ನಡೆಸುತ್ತಿದ್ದ ಹಲವಾರು ಸಮಾಜಮುಖಿ ಕಾರ್ಯಗಳ ನಡುವೆ ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ(Education) ಕೊಡಿಸುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದರು. ಆದರೆ ಅವರ ನಿಧನದ ಬಳಿಕ ಈ ಮಕ್ಕಳ ಜವಾಬ್ದಾರಿಯನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಪುನೀತ್​ ಕುಟುಂಬಸ್ಥರು(Family) ಈ ಕಾರ್ಯವನ್ನು ಮುಂದುವರಿಸುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಆತ್ಮೀಯ ಗೆಳೆಯ ಕಾಲಿವುಡ್ ನಟ(Kollywood Hero) ವಿಶಾಲ್(Vishal) ಅಷ್ಟು ಮಕ್ಕಳ ಹೊಣೆಯನ್ನು ನಾನು ಹೊರುತ್ತೇನೆ ಎಂದು ಹೇಳುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ತಮಿಳು ನಟ ವಿಶಾಲ್​ರ ಈ ಕಾರ್ಯ ಕನ್ನಡಿಗರ ಮನ ಗೆದ್ದಿದೆ.

ಪುನೀತ್​ ನೆನದು ನಟ ವಿಶಾಲ್​ ಭಾವುಕ

ತಮಿಳು ಸಿನಿಮಾದ ಕಾರ್ಯಕ್ರಮವೊಂದರಲ್ಲಿ ವಿಶಾಲ್​ ಭಾಗಿಯಾಗಿದ್ದರು. ಈ ವೇಳೆ ಅಪ್ಪುಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ವಿಶಾಲ್​ ಅಗಲಿದ ತಮ್ಮ ಗೆಳೆಯ ಪುನೀತ್​ರನ್ನ ನೆನೆದು ಭಾವುಕರಾದರು. ನನ್ನ ಸ್ನೇಹಿತ ಪುನೀತ್​ ಒಳ್ಳೆಯ ನಟ ಮಾತ್ರ  ಅಲ್ಲ, ಒಳ್ಳೆಯ ಸ್ನೇಹಿತ, ಒಳ್ಳೆಯ ವ್ಯಕ್ತಿ. ಇಂದು ಪುನೀತ್​ ರಾಜ್​ಕುಮಾರ್ ನಮ್ಮ ನಡುವೆ ಇಲ್ಲ ಅನ್ನೋದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಆಗಿಲ್ಲ. ಭಾರತ ಸಿನಿಮಾ ರಂಗಕ್ಕೆ ಇದು ದೊಡ್ಡ ನಷ್ಟ. ಪುನೀತ್​ ರಾಜ್​ಕುಮಾರ್​ ಅವರಿಗೆ ಅವರೇ ಸಾಟಿ. ಅವರಂತೆ ಮತ್ತೊಬ್ಬ ವ್ಯಕ್ತಿ ಬರಲ್ಲ. ಐ ಮಿಸ್​​ ಯೂ ಅಪ್ಪು ಎಂದು ವಿಶಾಲ್​ ಭಾವುಕರಾಗಿ ಹೇಳಿದರು.


ಇದನ್ನು ಓದಿ : ಅಪ್ಪು ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ: ರಮ್ಯಾ ಭಾವನಾತ್ಮಕ ಪೋಸ್ಟ್

ಮಕ್ಕಳ ಜವಾಬ್ದಾರಿ ನಂದು ಎಂದು ವಿಶಾಲ್​

ಪುನೀತ್​​ 1800 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಬಗ್ಗೆ ನಮಗೆ ಗೊತ್ತಿದೆ. ಅದರ ಜೊತೆ ಅನಾಥಶ್ರಮ, ವೃದ್ಧಾಶ್ರಮ, ಗೋಶಾಲೆ ಸೇರಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮಾಡುತ್ತಿದ್ದರು. ಅವರು ಇಹಲೋಕ ತ್ಯಜಿಸಿದ ಬಳಿಕ ಈ ಕಾರ್ಯಗಳನ್ನು ಯಾರು ಮುಂದುವರಿಸುತ್ತಾರೆ ಎಂಬ ಪ್ರಶ್ನೆ ಮೂಡಿತ್ತು.  ತಮಿಳು ನಟ ವಿಶಾಲ್​ ಈ ಜವಾಬ್ದಾರಿಯನ್ನು ಹೊತ್ತಿದ್ದಾರೆ. `ಪುನೀತ್​ ಸಾವಿನ ಬಳಿಕವೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದನ್ನೆಲ್ಲ ನೆನೆಸಿಕೊಳ್ಳುವಾಗ, ಪುನೀತ್ ಇಲ್ಲ ಅನ್ನೋದನ್ನು ನಂಬಲು ಆಗುತ್ತಿಲ್ಲ. ಪುನೀತ್​ ಗೆಳೆಯನಾಗಿ ಮಾತು ಕೊಡುತ್ತಿದ್ದೇನೆ. ಆ 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ಮುಂದಿನ ವರ್ಷದಿಂದ ನಿಮ್ಮ ಫೌಂಡೇಷನ್, ನಿಮ್ಮ ಸಮಾಜಸೇವೆಯನ್ನು ನಾನು ಮುಂದುವರೆಸುತ್ತೇನೆ’ ಅಂತ ವಿಶಾಲ್​ ಭರವಸೆ ನೀಡಿದ್ದಾರೆ.

ಇದನ್ನು ಓದಿ : ಮಂತ್ರಾಲಯದಲ್ಲಿ ವೀಣೆ ಜಾರಿಕೊಂಡಿದ್ದು ಪುನೀತ್ ಸಾವಿನ ಮುನ್ಸೂಚನೆಯಾ? ವಿಡಿಯೋ ವೈರಲ್

25 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ಅಂತಿಮ ದರ್ಶನ

ಅಪ್ಪು ಮೃತಪಟ್ಟಿರುವುದನ್ನ ಯಾರಿಂದಲೂ ನಂಬಲು ಸಾಧ್ಯವಿಲ್ಲ. ನಿನ್ನೆ ಬೆಳಗ್ಗೆ ಅವರ ಅಂತ್ಯಕ್ರಿಯೆಯನ್ನ ಕಂಠೀರವ ಸ್ಟೂಡಿಯೋದಲ್ಲಿ ನೇರವೇರಿಸಲಾಯ್ತು. ಇದಕ್ಕೂ ಮುನ್ನ ಕಂಠೀರವ ಸ್ಟೇಡಿಯಂನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 25 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಬಂದು ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಹೊರ ರಾಜ್ಯಗಳಿಂದಲೂ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದಿದ್ದಾರೆ.
Published by:Vasudeva M
First published: