ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಕಾಲಿಟ್ಟು ವರ್ಷಗಳೇ ಆಗಿದೆ. ಮೊದಲಿಗೆ ಅಲ್ಲೊಂದು ಇಲ್ಲೊಂದು ಸಿನಿಮಾ ರಿಲೀಸ್ ಆಗುತ್ತಿತ್ತು. ಆದರೋಗ ಡಬ್ಬಿಂಗ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ತೆಲುಗು ತಮಿಳಿನ ಬಿಗ್ ಬಜೆಟ್ ಸಿನಿಮಾಗಳೆಲ್ಲಾ ಕನ್ನಡದ ಮಾರುಕಟ್ಟೆ ಬಗ್ಗೆ ಗಮನ ಹರಿಸುತ್ತಿವೆ.
ಅದರಂತೆ ಈಗ ವಿಶಾಲ್ ನಟನೆಯ ಚಕ್ರ ಸಿನಿಮಾ ಸಹ ಕನ್ನಡಕ್ಕೆ ಡಬ್ ಆಗುತ್ತಿದೆ. ವಿಶಾಲ್ ಇಲ್ಲಿ ಆರ್ಮಿ ಆಫೀಸರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಇದೊಂದು ಪಕ್ಕಾ ಆಕ್ಷನ್ ಫಿಲಂ ಎನ್ನಲಾಗುತ್ತಿದೆ. ನವ ನಿರ್ದೇಶಕ ಆನಂದನ್ ಆಕ್ಷನ್ ಕಟ್ ನಲ್ಲಿ ಚಕ್ರ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ವಿಶಾಲ್ ಗೆ ನಾಯಕಿಯರಾಗಿ ರೆಜಿನಾ ಕಸ್ಸಂದ್ರ ಹಾಗೂ ಶ್ರದ್ದಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ. ವಿಶಾಲ್ ಫಿಲಂ ಫ್ಯಾಕ್ಟರಿ ಮೂಲಕ ಸ್ವತಃ ವಿಶಾಲ್ ಚಕ್ರ ಸಿನಿಮಾಗೆ ಹಣ ಹೂಡಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಜೂನ್ 27ರಂದು ತಮಿಳು, ತೆಲುಗು, ಮಲಯಾಳಂ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
![]()
ಚಕ್ರ- ನಟ ವಿಶಾಲ್
ಇನ್ನು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾದ ಪರಭಾಷೆಯ ಸಿನಿಮಾಗಳ ಬಗ್ಗೆ ಹೇಳೋದಾದರೆ ಸೈರಾ, ದಬಾಂಗ್-3, ಡಿಯರ್ ಕಾಮ್ರೆಡ್, ವರ್ಲ್ಡ್ ಫೇಮಸ್ ಲವರ್ ಹೀಗೆ ಸಾಕಷ್ಟು ಸಿನಿಮಾಗಳು ಸಿಕ್ತಾವೆ. ಆದರೆ ಈ ಯಾವ ಸಿನಿಮಾ ಸಹ ಕನ್ನಡ ಡಬ್ಬಿಂಗ್ ಬಾಕ್ಸಾಫೀಸಿನಲ್ಲಿ ನಲ್ಲಿ ಅಷ್ಟೇನೂ ಜಾದು ಮಾಡಿಲ್ಲ.
ಆದರೆ ಕಿರುತೆರೆಯಲ್ಲಿ ಡಬ್ಬಿಂಗ್ ಯಶಸ್ವಿಯಾಗ್ತಿದೆ. ಅಜಿತ್ ನಟನೆಯ ಸಿನಿಮಾಗಳು ಕಿರುತೆರೆ ವಾಹಿನಿಯಲ್ಲಿ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿವೆ. ಹಾಗೆ ಹಿಂದಿ ಮೂಲದ ಧಾರಾವಾಹಿ ಗಳು ಸಹ ಕನ್ನಡಕ್ಕೆ ಡಬ್ ಆಗಿ ತಕ್ಕ ಮಟ್ಟಿಗೆ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಡಬ್ಬಿಂಗ್ ಮಾಡೋರಿಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತೆ ಮಾಡಿವೆ.
ಪುರುಷರಿಗಿಂತ ಮಹಿಳೆಯರೇ ಈ ಕೆಲಸವನ್ನು ಹೆಚ್ಚು ಮಾಡೋದಂತೆ!
ಸ್ಯಾಂಡಲ್ವುಡ್ನ ಈ ನಟ, ನಿರ್ಮಾಪಕನಿಗೆ ಗೋಶಾಲೆಯೇ ಸ್ವರ್ಗ! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ