• Home
  • »
  • News
  • »
  • entertainment
  • »
  • Ponniyin Selvan: 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೂ ಎದುರಾಯ್ತು ಸಂಕಷ್ಟ, ನೋಟಿಸ್ ಜಾರಿ ಮಾಡಿದ ಕೋರ್ಟ್

Ponniyin Selvan: 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೂ ಎದುರಾಯ್ತು ಸಂಕಷ್ಟ, ನೋಟಿಸ್ ಜಾರಿ ಮಾಡಿದ ಕೋರ್ಟ್

ಪೊನ್ನಿಯಿನ್ ಸೆಲ್ವನ್

ಪೊನ್ನಿಯಿನ್ ಸೆಲ್ವನ್

ಈ ಐತಿಹಾಸಿಕ ಚಿತ್ರಗಳಿಗೆ ಹಾಗೂ ವಿವಾದಗಳಿಗೆ ಮೊದಲಿನಿಂದಲೂ ಏನಾದರೂ ನಂಟಿದೆಯೇ ಎಂದೆನಿಸಿದರೂ ತಪ್ಪಾಗಲಿಕ್ಕಿಲ್ಲ. ಪ್ರಸ್ತುತ, ತಮಿಳು ಚಿತ್ರರಂಗದ ಇನ್ನೊಂದು ಐತಿಹಾಸಿಕ ಕಥಾಹಂದರವುಳ್ಳ ಚಿತ್ರಕ್ಕೀಗ ಇನ್ನೊಂದು ವಿವಾದ ಸುತ್ತಿಕೊಂಡಂತೆ ತೋರುತ್ತಿದೆ.

  • News18 Kannada
  • Last Updated :
  • Tamil Nadu | Vikramgad
  • Share this:

ಈಗ ಏನಿದ್ದರೂ ಪಿರಿಯಡ್ ಚಿತ್ರಗಳದ್ದೇ ಹೆಚ್ಚಿನ ಕಾರುಬಾರು. ಐತಿಹಾಸಿಕವಾಗಿ ಯೋಧರನ್ನುಳ್ಳ ಚಿತ್ರಕಥೆಗಳಿಗೆ ಭಾರತದಲ್ಲೇನೂ (India) ಕಮ್ಮಿ ಇಲ್ಲ. ಆದರೆ, ಅದನ್ನು ದೊಡ್ಡ ಪರದೆಯಲ್ಲಿ ತೋರಿಸುವುದು ಪ್ರತಿ ನಿರ್ದೇಶಕನಿಗೆ (Director) ದೊಡ್ಡ ಸವಾಲೇ ಹೌದು. ಆದಾಗ್ಯೂ ಇತ್ತೀಚಿನ ಕೆಲ ಸಮಯದಿಂದ ಈ ರೀತಿಯ ಸಾಹಸಮಯ ಐತಿಹಾಸಿಕ ಚಿತ್ರಗಳು ಸಿನಿ ಪ್ರೇಕ್ಷಕರನ್ನು (Cinema Audience) ಚಿತ್ರಮಂದಿರಗಳತ್ತ ಆಕರ್ಷಿಸುತ್ತಿದೆ. ಹಾಗಾಗಿ ಹಲವು ಚಿತ್ರ ನಿರ್ಮಾಣಕಾರರು ಇಂತಹ ಐತಿಹಾಸಿಕ ಚಿತ್ರಕಥೆಗಳನ್ನು ನಿರ್ಮಿಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಸಾಮಾನ್ಯವಾಗಿ ಐತಿಹಾಸಿಕ ಚಿತ್ರಗಳನ್ನು (Historical Film) ನಿರ್ಮಿಸುವಾಗ ನಿರ್ಮಾಣಕಾರರು ಹೆಚ್ಚಿನ ಜಾಗರೂಕತೆವಹಿಸುವುದು ಅವಶ್ಯಕ.


ಏಕೆಂದರೆ ಇಂತಹ ಕಥಾವಸ್ತುಗಳು ಸಾಮಾನ್ಯವಾಗಿ ಸೂಕ್ಷ್ಮ ವಿಷಯಗಳನ್ನು ಹೊಂದಿದ್ದು ಜನರಲ್ಲಿ ಭಾವನೆ ಪ್ರಚೋದಿಸುವಂತಿರುತ್ತದೆ. ಚಿಕ್ಕ ಚಿಕ್ಕ ವಿಷಯಗಳೂ ಸಹ ದೊಡ್ಡ ದೊಡ್ಡ ವಿವಾದಗಳನ್ನೇ ಎಬ್ಬಿಸುತ್ತವೆ. ಈ ಹಿಂದೆಯು ಪೃಥ್ವಿರಾಜ್ ಸಿಂಗ್ ಎಂಬ ಹಿಂದಿ ಚಿತ್ರ ಬಂದಾಗ ಅದರ ಟೈಟಲ್ಲಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಅದಕ್ಕೂ ಮುಂಚೆ ಪದ್ಮಾವತ್ ಎಂಬ ಚಿತ್ರಕ್ಕೂ ವಿವಾದ ಹತ್ತಿಕೊಂಡಿದ್ದನ್ನು ಗಮನಿಸಬಹುದು.


"ಪೊನ್ನಿಯಿನ್ ಸೆಲ್ವನ್"  ಸಿನೆಮಾಕ್ಕೆ ಎದುರಾಯ್ತು ಸಂಕಷ್ಟ
ಹಾಗಾಗಿ, ಈ ಐತಿಹಾಸಿಕ ಚಿತ್ರಗಳಿಗೆ ಹಾಗೂ ವಿವಾದಗಳಿಗೆ ಮೊದಲಿನಿಂದಲೂ ಏನಾದರೂ ನಂಟಿದೆಯೇ ಎಂದೆನಿಸಿದರೂ ತಪ್ಪಾಗಲಿಕ್ಕಿಲ್ಲ. ಪ್ರಸ್ತುತ, ತಮಿಳು ಚಿತ್ರರಂಗದ ಇನ್ನೊಂದು ಐತಿಹಾಸಿಕ ಕಥಾಹಂದರವುಳ್ಳ ಚಿತ್ರಕ್ಕೀಗ ಇನ್ನೊಂದು ವಿವಾದ ಸುತ್ತಿಕೊಂಡಂತೆ ತೋರುತ್ತಿದೆ.


ಇದನ್ನೂ ಓದಿ:  Naga Chaitanya: ಥ್ಯಾಂಕ್ಯೂ ಹೇಳೋಕೆ ನಾಚಿಕೆ ಪಡ್ಬಾರ್ದು ಅಂದ ನಾಗ ಚೈತನ್ಯ, ಸಿನಿಮಾ ಪ್ರಮೋಷನ್​​ನಲ್ಲಿ ಫುಲ್ ಬ್ಯುಸಿ ನಟ


ಸದ್ಯ, ತಮಿಳುನಟ ವಿಕ್ರಮ್ ಅಭಿನಯಿಸಿರುವ ಹಾಗೂ ಪ್ರಸಿದ್ಧ ನಿರ್ದೇಶಕರಾದ ಮಣಿರತ್ನಂ ಅವರು ನಿರ್ದೇಶಿಸಿರುವ "ಪೊನ್ನಿಯಿನ್ ಸೆಲ್ವನ್" ಚಿತ್ರದ ಟೀಸರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿತ್ತು. ಅಷ್ಟರಲ್ಲಾಗಲೇ ಚಿತ್ರವನ್ನು ವಿವಾದವೊಂದು ಹುಡುಕಿಕೊಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ಹಾಗೂ ನಿರ್ದೇಶಕ ಮಣಿರತ್ನಂ ಅವರಿಗೆ ನ್ಯಾಯಾಲಯದ ನೋಟಿಸ್ ಹೊರಡಿಸಲಾಗಿದೆ.


ಚಿತ್ರದ ಕುರಿತು ವಿವಾದ ಸೃಷ್ಟಿಯಾಗಲು ಕಾರಣವೇನು?
ಅಸಲಿಗೆ, ಈ ಚಿತ್ರದಲ್ಲಿ ವಿಕ್ರಮ್ ಐತಿಹಾಸಿಕವಾಗಿ ತಮಿಳುನಾಡನ್ನು ಆಳಿದ್ದ ಚೋಳರ ಸಾಮ್ರಾಜ್ಯದ ಆದಿತ್ಯ ಕರಿಕಾಲನ್ ಎಂಬ ರಾಜನ ಪಾತ್ರ ನಿರ್ವಹಿಸಿದ್ದಾರೆ. ಸದ್ಯಕ್ಕೆ ವಿವಾದ ಉಂಟಾಗಿರುವ ವಿಷಯವೆಂದರೆ ಈ ಚಿತ್ರದಲ್ಲಿ ಚೋಳರನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸೆಲ್ವಂ ಎಂಬ ವಕೀಲರು ದೂರಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅವರ ಪ್ರಕಾರ, ಚೋಳರು ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ, ಚಿತ್ರದಲ್ಲಿ ವಿಕ್ರಮ್ ಅವರು ಹಣೆಯ ಮೇಲೆ ತಿಲಕವಿಟ್ಟುಕೊಂಡಿರುವುದನ್ನು ತೋರಿಸಲಾಗಿದ್ದು ಇದು ಚೋಳರನ್ನು ತಪ್ಪಾಗಿ ಬಿಂಬಿಸುವಂತಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರ ಸಿನಿಮಾದ ಕೇಸರಿಯಾ ಸಾಂಗ್ ರಿಲೀಸ್​, ಮೋಡಿ ಮಾಡಿದ ಆಲಿಯಾ - ರಣಬೀರ್​ ಜೋಡಿ


ವಕೀಲರಾಗಿರುವ ಸೆಲ್ವಂ ಅವರು ಈ ಬಗ್ಗೆ ತಮಗೆ ಈ ಚಿತ್ರದ ವಿಶೇಷವಾದ ಪ್ರದರ್ಶನವನ್ನು ಏರ್ಪಡಿಸಬೇಕೆಂದು ಹೇಳಿದ್ದು ಆ ಮೂಲಕ ಅವರು ಈ ಚಿತ್ರದ ಮೊದಲ ಭಾಗದಲ್ಲಿ ಚೋಳರನ್ನು ಹೇಗೆ ತೋರಿಸಲಾಗಿದೆ, ಐತಿಹಾಸಿಕವಾಗಿ ಅವರನ್ನು ತಪ್ಪಾಗಿ ಪ್ರತಿಬಿಂಬಿಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಿದ್ದಾರೆಂದು ತಿಳಿದುಬಂದಿದೆ.


ಸಿನೆಮಾ ಬಿಡುಗಡೆ ಯಾವಾಗ?
ಮಣಿರತ್ನಂ ಅವರ ನಿರ್ದೇಶನವಿರುವ ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲ ಭಾಗವು ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗುತ್ತಿದ್ದು ಚಿತ್ರದ ಬಗ್ಗೆ ಜನರಲ್ಲಿ ಆಸಕ್ತಿ ಮೂಡುವಂತೆ ಭರ್ಜರಿ ಪ್ರಚಾರ ಕಾರ್ಯಗಳನ್ನೂ ಸಹ ಮಾಡಲಾಗುತ್ತಿದೆ.


ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಸಿನೆಮಾ
'ಪೊನ್ನಿಯಿನ್ ಸೆಲ್ವನ್' ಚೋಳರ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಚಿತ್ರಕಥೆಯನ್ನು ಹೊಂದಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುಂಚೆ ಈ ಚಿತ್ರದ ನಿರ್ಮಾಣಕಾರರು ಚಿತ್ರವು ಅದ್ದೂರಿಯಾದ ಪ್ರದರ್ಶನ ಕಾಣಬೇಕೆಂಬ ದೃಷ್ಟಿಯಿಂದ ಚೋಳರ ಬಗ್ಗೆ ಜನರಿಗೆ ಇಂತಿಷ್ಟು ಮಾಹಿತಿ ಸಿಗಲಿ ಎಂಬ ದೃಷ್ಟಿಯಿಂದ ಇತ್ತೀಚಿಗಷ್ಟೇ ಚೋಳರಿಗೆ ಸಂಬಂಧಿಸಿದ ಚಿಕ್ಕ ಶಾರ್ಟ್ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದರು. ಈ ಶಾರ್ಟ್ ಚಿತ್ರ ಈಗ ಜನರಿಂದ ಅಪಾರವಾಗಿ ಮೆಚ್ಚಲ್ಪಟ್ಟಿದ್ದು ಪೊನ್ನಿಯಿನ್ ಸೆಲ್ವನ್ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಚಿತ್ರವು ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ನಟ ವಿಕ್ರಮ್ ಸ್ವತಃ ಐದೂ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ.

Published by:Ashwini Prabhu
First published: