ಕಾಲಿವುಡ್ನ ಹೆಸರಾಂತ ನಾಯಕ ನಟ ವಿಜಯ್ ಸೇತುಪತಿ (Vijay Sethupathi) ಕನ್ನಡಕ್ಕೆ ಬರ್ತಾರೆ ಅನ್ನುವ ಸುದ್ದಿ ಸಾಕಷ್ಟು ಹರಡಿದೆ. ಕನ್ನಡದ ಘೋಸ್ಟ್ ಚಿತ್ರಕ್ಕೆ ವಿಜಯ್ ಅಪ್ರೋಚ್ ಕೂಡ ಆಗಿದೆ. ಅದರ ಮಧ್ಯ ವಿಜಯ್ ಸೇತುಪತಿ ಕನ್ನಡ ನಿರ್ಮಾಪಕರ (Kannada Producer) ಚಿತ್ರವೊಂದಕ್ಕೆ ಹಾಡು ಹಾಡಿದ್ದಾರೆ. ಬಹು ಭಾಷೆಯಲ್ಲಿ ರೆಡಿ ಆಗಿರೋ ಈ ಚಿತ್ರಕ್ಕೆ ತಮಿಳಿನಲ್ಲಿ ವಿಜಯ್ ಸೇತುಪತಿ ಹಾಡು ಹಾಡಿದ್ದಾರೆ. ಈ ಚಿತ್ರದಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ (Prabhu Deva) ಅಭಿನಯಿಸಿದ್ದಾರೆ. ಬೆಳಗಾವಿ ಹುಡುಗಿ ಲಕ್ಷ್ಮೀ ರೈ ನಟಿಸಿದ್ದಾರೆ. ಇಡೀ ಚಿತ್ರ ಬೆಂಗಳೂರಲ್ಲಿ ಚಿತ್ರೀಕರಣ ಆಗಿದ್ದು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಚಿತ್ರದ ನಿರ್ಮಾಪಕ (Sandesh Nagaraj) ಸಂದೇಶ್ ನಾಗರಾಜ್ ಮತ್ತು ನಿರ್ದೇಶಕ ವಿನೂ ವೆಂಕಟೇಶ್ ಈ ವಿಷಯವನ್ನ ಹಂಚಿಕೊಂಡಿದ್ದಾರೆ.
ಪ್ರಭು ದೇವ ಚಿತ್ರದಲ್ಲಿ ವಿಜಯ್ ಸೇತುಪತಿ ಗಾಯನ!
ಇಂಡಿಯನ್ ಮೈಕಲ್ ಜಾಕ್ಸನ್ ನಟ-ನಿರ್ದೇಶಕ-ಡ್ಯಾನ್ಸರ್ ಪ್ರಭು ದೇವ ಅಭಿನಯದಲ್ಲಿ ಒಂದು ಸಿನಿಮಾ ರೆಡಿ ಆಗಿದೆ. ಈ ಚಿತ್ರಕ್ಕೆ ವೂಲ್ಫ್ ಅನ್ನುವ ಹೆಸರನ್ನ ಇಡಲಾಗಿದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ.
ಚಿತ್ರೀಕರಣದ ನಂತರದ ಕೆಲಸಗಳಲ್ಲಿ ಚಿತ್ರದ ನಿರ್ದೇಶಕ ವಿನೂ ವೆಂಕಟೇಶ್ ಬ್ಯುಸಿ ಆಗಿದ್ದಾರೆ. ಇವರ ಸಿನಿಮಾದ ಈಗೀನ ವಿಶೇಷ ವಿಷಯ ಏನೂ ಅನ್ನೋದು ಈಗ ಇಂಟ್ರಸ್ಟಿಂಗ್ ಆಗಿದೆ.
ವೂಲ್ಪ್ ತಮಿಳು ಚಿತ್ರಕ್ಕೆ ವಿಜಯ್ ಸೇತುಪತಿ ಗಾನ
ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಈಗ ಗಾಯಕರೂ ಆಗಿದ್ದಾರೆ. ಪ್ರಭು ದೇವ ಅಭಿನಯದ ವೂಲ್ಫ್ ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಅಂಬರೀಷನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.
ಅಂಬರೀಷನ್ ಸಂಗೀತದ ಹಾಡನ್ನು ವಿಜಯ್ ಸೇತುಪತಿ ಹಾಡಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಚಿತ್ರದ ನಿರ್ದೆಶಕ ವಿನೂ ವೆಂಕಟೇಶ್ ಹೇಳಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ಈ ವಿಷವಯನ್ನ ಖಚಿತಪಡಿಸಿದ್ದಾರೆ.
ನಮ್ಮ ಚಿತ್ರಕ್ಕೆ ವಿಜಯ್ ಸೇತುಪತಿ ಹಾಡುತ್ತಿದ್ದಾರೆ. ಈಗ ಹಾಡಿನ ರೆಕಾರ್ಡಿಂಗ್ ಕೂಡ ನಡೆಯುತ್ತಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಮಾರ್ಚ್ ಕೊನೆಯಲ್ಲಿ ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಇನ್ನು ಚಿತ್ರದ ನಿರ್ದೇಶಕ ವಿನೂ ವೆಂಕಟೇಶ್ ಹೇಳುವ ಪ್ರಕಾರ ವೂಲ್ಫ್ ಒಂದು ಸ್ಪೆಷಲ್ ಸಿನಿಮಾ. ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ವೆಸ್ಟರ್ನ್ ಶೈಲಿಯ ಚಿತ್ರಕತೆ ಸಿಗುತ್ತದೆ. ಈ ಹಿಂದಿನ ಸಿನಿಮಾಗಳ ರೀತಿ ಈ ಸಿನಿಮಾ ಇರೋದಿಲ್ಲ ಅಂತಲೂ ವಿನೂ ಹೇಳಿಕೊಂಡಿದ್ದಾರೆ.
ಘೋಸ್ಟ್ ಮತ್ತು ವೂಲ್ಫ್ ಚಿತ್ರದ ನಿರ್ಮಾಪಕರು ಒಬ್ಬರೇ!
ಹೌದು, ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಮತ್ತು ಪ್ರಭು ದೇವ ಅಭಿನಯದ ವೂಲ್ಫ್ ಚಿತ್ರವನ್ನ ಸಂದೇಶ್ ನಾಗರಾಜ್ ಅವರೇ ನಿರ್ಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಘೋಸ್ಟ್ ಚಿತ್ರಕ್ಕೆ ವಿಜಯ್ ಸೇತುಪತಿ ಅವರನ್ನ ಅಪ್ರೋಚ್ ಕೂಡ ಮಾಡಲಾಗಿದೆ.
ಅದಕ್ಕೂ ಮೊದಲು ವಿಜಯ್ ಈಗ ವೂಲ್ಫ್ ಚಿತ್ರಕ್ಕೆ ಹಾಡಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಹಾಡಿನ ರೆಕಾರ್ಡಿಂಗ್ ಕೂಡ ನಡೆಯುತ್ತಿದೆ.
ಮಾರ್ಚ್ ತಿಂಗಳಲ್ಲಿ ವೂಲ್ಫ್ ಸಿನಿಮಾ ರಿಲೀಸ್
ಇನ್ನುಳಿದಂತೆ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿರೋ ವೂಲ್ಫ್ ಚಿತ್ರದ ಒಂದು ವಿಶೇಷ ವಿಡಿಯೋವನ್ನ ಶಿವರಾಜ್ ಕುಮಾರ್ ರಿಲೀಸ್ ಮಾಡಿ ಬಹುವಾಗಿಯೂ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Kabzaa Movie: ಬಿಗ್ ಸಿನಿಮಾ, ಬಿಗ್ ಫೈಟ್ಸ್-ಒಂದೇ ಚಿತ್ರದಲ್ಲಿ 8 ಫೈಟ್ಸ್, 8 ಸೆಟ್ಸ್; ಇದು ಕಬ್ಜ ಸ್ಪೆಷಲ್!
ವೂಲ್ಫ್ ಸಿನಿಮಾ ಮಾರ್ಚ್-ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾ ತಂಡ ಈ ಹಿನ್ನೆಲೆಯಲ್ಲಿ ಕೆಲಸವನ್ನ ಕೂಡ ತೀವ್ರಗತಿಯಲ್ಲಿಯೇ ಮಾಡುತ್ತಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ