Puneeth Rajkumar: ಅಪ್ಪು ಸಮಾಧಿಗೆ ತಮಿಳು ನಟ ವಿಜಯ್ ಭೇಟಿ, ಪುನೀತ್​ ನೆನೆದು `ದಳಪತಿ’ ಭಾವುಕ!​

ಇತ್ತೀಚೆಗೆ ನಟ ಅಲ್ಲು ಅರ್ಜುನ್​ ಅವರು ಆಗಮಿಸಿ ಪುನೀತ್​ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇಂದು (ಫೆಬ್ರವರಿ 26) ತಮಿಳು ನಟ ‘ದಳಪತಿ’ ವಿಜಯ್​ ಅವರು ಅಪ್ಪು ಸಮಾಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿಗೆ ತಮಿಳು ನಟ ವಿಜಯ್​ ಬರುತ್ತಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ.

ಅಪ್ಪು ಸಮಾಧಿಗೆ ನಟ ವಿಜಯ್​ ಭೇಟಿ

ಅಪ್ಪು ಸಮಾಧಿಗೆ ನಟ ವಿಜಯ್​ ಭೇಟಿ

  • Share this:
    ಸ್ಯಾಂಡಲ್​ವುಡ್​(Sandalwood)ನ ಸರಳತೆಯ ಸಾಮ್ರಾಟ್​, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಎಂದಿಗೂ ಮರೆಯುವುದಿಲ್ಲ. ಅವರ ನೆನಪು, ಅವರ ನಗು ನಮ್ಮನ್ನು ಕಾಡಿ ಕೊಲ್ಲುತ್ತಿದೆ. ದೇವರು (God) ಅವರಿಗೆ ಮಾಡಿದ ಅನ್ಯಾಯವನ್ನು ನೆನೆದು ಅಭಿಮಾನಿಗಳು ಹಿಡಿಶಾಪ ಹಾಕಿದ್ದರು. ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಎಲ್ಲೆ ಹೋಗಲಿ, ಏನೇ ಮಾಡುತ್ತಿರಲಿ ಅಪ್ಪು ಅವರ ನೆನಪು ಮರಳಿ ಮರಳಿ ನಮ್ಮ ಕಣ್ಮುಂದೆ ಬಂದು ಕಾಡುತ್ತಿದೆ. ಎಲ್ಲೇ ನೋಡು ಹಳೇ ಗುರುತು.. ಬಾಳೋದೇಗೆ ಎಲ್ಲ ಮರೆತು.. ಎಂಬ ಹಾಡು (Song) ಕಿವಿಯಲ್ಲಿ ಇನ್ನೂ ಗುನುಗುತ್ತಿದೆ. ಕಾಣದಂತೆ ನಮ್ಮ ಅಪ್ಪು (Appu) ಮಾಯವಾಗಿದ್ದಾರೆ. ಆದರೆ ಅವರು ಮಾಡಿರುವ, ಮಾಡುತ್ತಿದ್ದ ಕೆಲಸಗಳು ಅನೇಕ ಜನರಿಗೆ ಸ್ಪೂರ್ತಿಯಾಗಿದೆ. ಬೇರೆ ಭಾಷೆ ಸ್ಟಾರ್​​ ನಟರು (Star Actors) ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ತಮಿಳು ನಟ ದಳಪತಿ ವಿಜಯ್ (Thalapathy Vijay) ಅಪ್ಪು ಸಮಾಧಿಗೆ ಭೇಟಿ ನೀಡಿದ್ದಾರೆ. 

    ಅಪ್ಪು ಸಮಾಧಿಗೆ ತಮಿಳು ನಟ ವಿಜಯ್​ ಭೇಟಿ!

    ಇತ್ತೀಚೆಗೆ ನಟ ಅಲ್ಲು ಅರ್ಜುನ್​ ಅವರು ಆಗಮಿಸಿ ಪುನೀತ್​ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇಂದು (ಫೆಬ್ರವರಿ 26) ತಮಿಳು ನಟ ‘ದಳಪತಿ’ ವಿಜಯ್​ ಅವರು ಅಪ್ಪು ಸಮಾಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿಗೆ ತಮಿಳು ನಟ ವಿಜಯ್​ ಬರುತ್ತಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಪುನೀತ್​ ನಿಧನದ ನಂತರ ಭಾರತೀಯ ಚಿತ್ರರಂಗದವರೆಲ್ಲ ಅಪ್ಪು ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ, ವಿಜಯ್​ ಅಪ್ಪು ಬಗ್ಗೆ ಏನನ್ನೂ ಮಾತನಾಡಿರಲಿಲ್ಲ. ಈ ಬಗ್ಗೆ ಅಪ್ಪು ಅಭಿಮಾನಿಗಳಿಗೆ ಕೊಂಚ ಬೇಸರವಾಗಿತ್ತು. ಇದೀಗ ವಿಜಯ್​ ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ಪೂಜೆ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸಖತ್​ ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್

    ಇತ್ತೀಚೆಗೆ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್​!

    ಫೆಬ್ರವರಿ 3 ರಂದು ಟಾಲಿವುಡ್​ನ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮುನ್ನ ಅಪ್ಪು ಸಮಾಧಿ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸುವ ಮುನ್ನ ಅಲ್ಲು ಅರ್ಜುನ್ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾದರು. ನಾಗಾವಾರದಲ್ಲಿರುವ ಶಿವಣ್ಣ ನಿವಾಸಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್, ಶಿವಣ್ಣ ಹಾಗೂ ಪತ್ನಿ ಗೀತಾ ಅವರೊಂದಿಗೆ ಮಾತುಕತೆ ನಡೆಸಿದ್ದರು. ಪುನೀತ್ ಸ್ಮರಿಸಿಕೊಂಡ ಅಲ್ಲು ಅರ್ಜುನ್, ಅಪ್ಪು ಸಾಮಾಜಿಕ ಸೇವೆಗಳ ಬಗ್ಗೆ ಮಾತನಾಡಿದ್ದರು.. ತಮ್ಮ ಹಾಗೂ ಪುನೀತ್ ರಾಜ್‌ಕುಮಾರ್ ನಡುವಿನ ಸ್ನೇಹದ ಮೆಲಕು ಹಾಕಿದ್ದರು.

    ಇದನ್ನೂ ಓದಿ: ಅಂತೆ-ಕಂತೆಗಳನ್ನು ನಂಬಬೇಡಿ.. ನಾವೇ ಎಲ್ಲ ಮಾಹಿತಿ ನೀಡ್ತೇವೆ ಎಂದ ಜೇಮ್ಸ್​ ನಿರ್ಮಾಪಕ!

    ‘ಜೇಮ್ಸ್’ ರಿಲೀಸ್​ ದಿನವೇ ಉತ್ಸವ
    ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್​ ಬಿಡುಗಡೆಗೆ ಅಭಿಮಾನಿಗಳು (Fans) ಕಾಯ್ತಿದ್ದಾರೆ. ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಜೇಮ್ಸ್​ ಚಿತ್ರದ ರಿಲೀಸ್ ದಿನವೇ, ಜೇಮ್ಸ್ ಉತ್ಸವ ಮಾಡಲು ಚಿತ್ರತಂಡ ಈಗಾಗಲೇ ಡಿಸೈಡ್ ಮಾಡಿದೆ. ಮಾರ್ಚ್ 17 ರಿಂದ ಮಾರ್ಚ್ 20ರ ವರೆಗೆ ನಾಲ್ಕು ದಿನಗಳು ಅಪ್ಪು ಹೆಸರಲ್ಲಿ ದಾಸೋಹ ಕಾರ್ಯಕ್ರಮ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಇದು ಅಭಿಮಾನಿಗಳ ಅಭಿಮಾನದ ಆರಾಧನೆಯಾಗಿದೆ.

    Published by:Vasudeva M
    First published: