Big Boss Promo: ಬಿಗ್​ಬಾಸ್​ ಶೋಗೆ ನಿರೂಪಕರಾಗಿ ಬಂದ್ರು ನಟ ಸಿಂಬು, ಕಾರ್ಯಕ್ರಮದ ಪ್ರೋಮೋ ರಿಲೀಸ್

ತಮಿಳಿನ ಬಿಗ್​​ ಬಾಸ್​ನಲ್ಲಿ ನಿರೂಪಕರನ್ನ ಬದಲಾವಣೆ ಮಾಡಲಾಗಿದೆ. ಶೋ ಹೋಸ್ಟ್ ಮಾಡ್ತಿದ್ದ ಕಮಲ್​ ಹಾಸನ್​ ನಿರೂಪಣೆಯಿಂದ ದೂರ ಸರಿದಿದ್ದು, ಅವರ ಜಾಗಕ್ಕೆ ನಟ ಸಿಂಬು ಬಂದಿದ್ದಾರೆ. ಪ್ರೋಮೋ ಸಹ ಬಿಡುಗಡೆಯಾಗಿದೆ.

ನಟ ಸಿಂಬು

ನಟ ಸಿಂಬು

  • Share this:
ತಮಿಳು ಬಿಗ್‌ಬಾಸ್‌ನಿಂದ (Big Boss) ನಟ ಕಮಲ್ ಹಾಸನ್ ಹಿಂದೆ ಸರಿದಿದ್ರು. ಡೇಟ್ಸ್ ಸಮಸ್ಯೆಯಿಂದ  ತಾವು ಬಿಗ್‌ಬಾಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದ್ದರು. ಬಳಿಕ ಬಿಗ್​ಬಾಸ್​​ ಶೋನನ್ನು ಕಮಲ್ ಹಾಸನ್ (Kamal Hassan) ಬದಲಿಗೆ ಯಾರು ನಿರೂಪಣೆ ಮಾಡಲಿದ್ದಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಹಲವು ನಟ-ನಟಿಯರ ಹೆಸರುಗಳು ನಿರೂಪಕ ಸ್ಥಾನಕ್ಕೆ ಕೇಳಿ ಬಂದಿತ್ತು. ಕಮಲ್ ಮಗಳು ಶೃತಿ ಹಾಸನ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿತ್ತು ಆದರೆ ಅದೆಲ್ಲಾ ಸುಳ್ಳಾಗಿದೆ. ಕಮಲ್ ಹಾಸನ್ ಸ್ಥಾನಕ್ಕೆ ತಮಿಳಿನ ಜನಪ್ರಿಯ ನಟ ಸಿಂಬು (Simbu) ಅವರನ್ನು ಕರೆತರಲಾಗಿದೆ.  ಸಿಂಬು ಅವರೇ ಈ ಸೀಸನ್‌ನ ಬಿಗ್‌ಬಾಸ್ ತಮಿಳು ಶೋ ಅನ್ನು ನಡೆಸಿಕೊಡಲಿದ್ದಾರೆ. ಬಿಗ್‌ಬಾಸ್ ಅಲ್ಟಿಮೇಟ್ ಶೋ ಅನ್ನು ಕಮಲ್ ನಡೆಸಿಕೊಡುತ್ತಿದ್ದರು. ಈ ಶೋ ಜನವರಿ 30 ರಂದು ಪ್ರಾರಂಭವಾಗಿತ್ತು. ಶೋ ಕೇವಲ ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗುತ್ತಿದೆ. ಇದೀಗ ಕಮಲ್ ಹಠಾತ್ತನೆ ಶೋನಿಂದ ಹೊರಗೆ ಹೋದ ಕಾರಣ ಆ ಸ್ಥಾನಕ್ಕೆ ಸಿಂಬು ಬಂದಿದ್ದಾರೆ.

ಕಮಲ್ ಜಾಗಕ್ಕೆ ಸಿಂಬು, ಅಧಿಕೃತ ಘೋಷಣೆ

ಕಮಲ್​ ಹಾಸನ್​ ಜಾಗಕ್ಕೆ ಅವರ ಪುತ್ರಿ ಶ್ರುತಿ ಹಾಸನ್​ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಯೂ ಸುಳ್ಳಾಗಿದೆ. ಕಮಲ್​ ಜಾಗಕ್ಕೆ ತಮಿಳಿನ ಸೂಪರ್​ ಸ್ಟಾರ್​ ಬಂದಿದ್ದಾರೆ. ತಮಿಳು ಬಿಗ್​ ಬಾಸ್​ ಅಲ್ಟಿಮೇಟ್​ ಅನ್ನು ಇವರೇ ಹೋಸ್ಟ್​ ಮಾಡಲಿದ್ದಾರೆ. ಹೌದು, ತಮಿಳು ಸ್ಟಾರ್​ ನಟ ಸಿಂಬು ಬಿಗ್​ ಬಾಸ್​ ಶೋ ಹೋಸ್ಟ್​ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.  ಈ ಮೊದಲು ತಮಿಳು ನಟ ಶರತ್​ ಕುಮಾರ್​ ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದಾದ ಬಳಿಕ ಶ್ರುತಿ ಹಾಸನ್​ ಅವರ ಹೆಸರು ಸಹ ಕೇಳಿಬಂದಿತ್ತು.  ಜೊತೆಗೆ ರಮ್ಯಾ ಕೃಷ್ಣ ಹೆಸರು ಸಹ ಕೇಳಿ ಬಂದಿತ್ತು. ಇದೀಗ ನಟ ಸಿಂಬು ಬಿಗ್​ ಬಾಸ್​ ನಡೆಸಿಕೊಡುವುದು ಖಚಿತವಾಗಿದೆ.

ಇದನ್ನೂ ಓದಿ: Big Boss ನಿರೂಪಣೆಗೆ ಈ ಸ್ಟಾರ್ ನಟ ಗುಡ್‌ ಬೈ, ಹಾಗಿದ್ರೆ ಇನ್ಯಾರು ಬರ್ತಾರೆ!

ಸಿಂಬು ನಿರೂಪಕರಾಗಿರುವ ಪ್ರೋಮೋ ರಿಲೀಸ್​ ಆಗಿದೆ!



ಸಿಂಬು ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಬರುತ್ತಿರುವ ಪ್ರೊಮೋ ಇಂದು ಬಿಡುಗಡೆಯಾಗಿದೆ. ಟ್ವಿಟ್ಟರ್​ನಲ್ಲಿ ಫೋಟೋ ಹಾಗೂ ವಿಡಿಯೀಗಳು ಹರಿದಾಡುತ್ತಿದೆ.  ಸಿಂಬು(Simbu) ಒಳ್ಳೆಯ ಮಾತುಗಾರರಾಗಿದ್ದು, ಬಿಗ್​ ಬಾಸ್ ಶೋನನ್ನು ಚೆನ್ನಾಗಿ, ಆಸಕ್ತಿದಾಯಕವಾಗಿ ನಡೆಸಿಕೊಂಡು ಹೋಗಲಿದ್ದಾರೆ ಎಂಬ ನಿರೀಕ್ಷೆ ಆಯೋಜಕರದ್ದು. ಇನ್ನೂ ಸಿಂಬು ಅಭಿಮಾನಿಗಳ ಬಳಗವೂ ದೊಡ್ಡದಿದೆ. ಚಿಕ್ಕವಯಸ್ಸಿನಿಂದಲೂ ಚಿತ್ರರಂಗದಲ್ಲಿರುವ ಸಿಂಬು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಬಿಗ್​ಬಾಸ್​ ಶೋ ಹೋಸ್ಟ್​ ಸಿಂಬು ಎಂದು ತಿಳಿದ ಅಭಿಮಾನಿಗಳು ಫುಲ್ ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ: `ಪುಷ್ಪ’ ಮುಡಿಗೆ ಫಾಲ್ಕೆ ಗೌರವ, ರಣವೀರ್ ಸಿಂಗ್​ಗೂ ಪ್ರಶಸ್ತಿ! ಲಿಸ್ಟ್ ಇಲ್ಲಿದೆ..

 ಕಮಲ್​​ ನಿರೂಪಣೆಯಿಂದ ಹಿಂದೆ ಸರಿದಿದ್ಯಾಕೆ ?

ತಮಿಳು ಬಿಗ್​ ಬಾಸ್​ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ಕಮಲ್​ ಹಾಸನ್​ ತೀರ್ಮಾನಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಮಲ್​ ಹಾಸನ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ, ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ ನಿರ್ದೇಶನ, ನಿರ್ಮಾಣ, ರಾಜಕೀಯ ರಂಗದಲ್ಲೂ ಕಮಲ್​ ಹಾಸನ್​ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವ ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಇದು ತಮಿಳು ಬಿಗ್​ಬಾಸ್ ಒಟಿಟಿ ವರ್ಷನ್​, ಆದರೆ, ಈಗ ಅವರು ಈ ಶೋ ನಿರೂಪಣೆಯಿದ ಹೊರಬರುವುದಾಗಿ ತಿಳಿಸಿದ್ದು , ಡೇಟ್​ ಸಮಸ್ಯೆಯೇ ಕಾರಣ ಅಂತ ತಿಳಿಸಿದ್ದಾರೆ.

‘ವಿಕ್ರಮ್’​ ಸಿನಿಮಾದಲ್ಲಿ ಕಮಲ್ ಬ್ಯುಸಿ​!

ಕಮಲ್​ ಹಾಸನ್​ ಅವರು ಬಹುನಿರೀಕ್ಷಿತ ‘ವಿಕ್ರಮ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಚಿತ್ರಕ್ಕೆ ಆ್ಯಕ್ಷ ನ್​ ಕಟ್​ ಹೇಳುತ್ತಿದ್ದಾರೆ. ಬಿಗ್​ ಬಾಸ್​ನಿಂದಾಗಿ ಈ ಸಿನಿಮಾದ ಶೂಟಿಂಗ್​ ಮತ್ತು ಇತರೆ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಇವರು ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​ ಶೋ ನಿಂದ ಹೊರಬರಲು ತೀರ್ಮಾನಿಸಿದ್ದಾರೆ.

Published by:Pavana HS
First published: