K.G.F Chapter 2: ರಾಕಿ ಭಾಯ್ ಅಡ್ಡಾಗೆ ಎಂಟ್ರಿ ಕೊಟ್ಟ ಕಾಲಿವುಡ್ ಯುವನಟ..!

K.G.F Chapter 2: K.G.F Chapter 2: ಸದ್ಯ ಕೆ.ಜಿ.ಎಫ್ ಸೆಟ್​ನಲ್ಲಿ ಬೀಡು ಬಿಟ್ಟಿರುವ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರದ ಭರ್ಜರಿ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರದ ಪ್ರಮುಖ ಸೀನ್​ಗಳ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ.

zahir | news18-kannada
Updated:August 8, 2019, 6:34 PM IST
K.G.F Chapter 2: ರಾಕಿ ಭಾಯ್ ಅಡ್ಡಾಗೆ ಎಂಟ್ರಿ ಕೊಟ್ಟ ಕಾಲಿವುಡ್ ಯುವನಟ..!
PC: @VavvetiUsha
  • Share this:
ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನಲ್ಲಿ ರೆಡಿಯಾಗುತ್ತಿರುವ 'ಕೆ.ಜಿ.ಎಫ್ ಚಾಪ್ಟರ್ 2' ಚಿತ್ರ ತಾರಾಬಳಗದ ಪಟ್ಟಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಮೊದಲ ಭಾಗದಲ್ಲಿ ರಾಕಿ ಭಾಯ್​ಯ ಸುತ್ತ ಸುತ್ತಿದ ಕಥೆಯು 2ನೇ ಭಾಗದಲ್ಲಿ ಹೊಸ ಆಯಾಮ ಪಡೆಯಲಿದೆ. ಹೀಗಾಗಿಯೇ ಅಧೀರನಾಗಿ ಬಾಲಿವುಡ್ ನಟ ಸಂಜಯ್ ದತ್, ಪ್ರಧಾನಿ ರಿಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿರುವುದು. ಇದೀಗ ಚಿತ್ರಕ್ಕೆ ಮತ್ತೊಬ್ಬ ನಟ ಸಹ ಎಂಟ್ರಿಯಾಗುತ್ತಿದ್ದಾರೆ. ಕಳೆದ ಬಾರಿ ಬಾಲಿವುಡ್ ನಟನಿಗೆ ಮಣೆ ಹಾಕಿದ್ದ ಪ್ರಶಾಂತ್ ನೀಲ್ ಈ ಬಾರಿ ಕಾಲಿವುಡ್ ಯುವನಟನನ್ನು ಕರೆ ತಂದಿದ್ದಾರೆ.

ಹೆಸರು ಸರಣ್. ಈಗಷ್ಟೇ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿರುವ ಯುವ ನಟ ಸಿಕ್ಕಿರುವ ಸಣ್ಣ ಪುಟ್ಟ ಪಾತ್ರಗಳ ಮೂಲಕವೇ ಎಲ್ಲರನ್ನು ಮೋಡಿ ಮಾಡಿದ್ದರು. ಅದರಲ್ಲೂ ಧನುಷ್ ಅಭಿನಯದ ವಡ ಚೆನ್ನೈ(ಉತ್ತರ ಚೆನ್ನೈ) ಚಿತ್ರದಲ್ಲಿನ ಪಾತ್ರವು ಸರಣ್​​ಗೆ ಈಗ ಸೂಪರ್ ಡೂಪರ್ ಹಿಟ್​ ಚಿತ್ರದ ಭಾಗವಾಗುವ ಅವಕಾಶ ಒದಗಿಸಿದೆ.

ನಟ ಸರಣ್


'ನರಾಚಿ' ಚಿನ್ನದ ಗಣಿಯ ಸುತ್ತ ಹಣೆಯಲಾಗಿದ್ದ ಕಥೆಗೆ ಸರಣ್ ಎಂಟ್ರಿ ಸಿನಿಪ್ರಿಯರಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದೆ. ಏಕೆಂದರೆ ಮೊದಲ ಭಾಗದಲ್ಲಿದ್ದ ಪಾತ್ರಗಳೇ ಚಾಪ್ಟರ್ 2 ನಲ್ಲೂ ಇರಲಿದೆ. ಇಲ್ಲಿ ಸರಣ್ ಮಾಡಲಿರುವ ಪಾತ್ರವೇನು ಎಂಬ ಪ್ರಶ್ನೆಯೊಂದು ಗಾಂಧಿನಗರದಲ್ಲಿ ಎದ್ದಿದೆ.

ನಟ ಧನುಷ್ ಜೊತೆ ಸರಣ್


ಈ ಪ್ರಶ್ನೆಗೆ ಸದ್ಯಕ್ಕೆ ಸಿಗುವ ಉತ್ತರ ಯಂಗ್ ರಾಕಿ ಭಾಯ್. ಹೌದು, 'ಕೆ.ಜಿ.ಎಫ್ 2'ನಲ್ಲಿ ಸರಣ್ ರಾಕಿಂಗ್ ಸ್ಟಾರ್ ಯಶ್​ನ ಯೌವ್ವನದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ 'ಕೆ.ಜಿ.ಎಫ್' ಸೆಟ್​ಗೆ ತಮಿಳು ನಟನ ಎಂಟ್ರಿ ಸುದ್ದಿಗಳು ಭರ್ಜರಿ ಹರಿದಾಡುತ್ತಿದ್ದು, ಶೀಘ್ರದಲ್ಲೇ ಯುವ ರಾಕಿ ಭಾಯ್​ಯ ಪಾತ್ರದ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.

ಸದ್ಯ 'ಕೆ.ಜಿ.ಎಫ್' ಸೆಟ್​ನಲ್ಲಿ ಬೀಡು ಬಿಟ್ಟಿರುವ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರದ ಭರ್ಜರಿ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರದ ಪ್ರಮುಖ ಸೀನ್​ಗಳ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ  ಎಂದು ಹೇಳಲಾಗಿದೆ. ಅದರೊಂದಿಗೆ ಇದೀಗ ಸರಣ್ ಎಂಟ್ರಿಯು ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ ಎನ್ನಬಹುದು.
Loading...

First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...