ಕಾರು ಅಪಘಾತ: ತಮಿಳು ಚಿತ್ರ ನಟ ಸಾವು..!

news18-kannada
Updated:October 29, 2019, 8:26 PM IST
ಕಾರು ಅಪಘಾತ: ತಮಿಳು ಚಿತ್ರ ನಟ ಸಾವು..!
Mano
  • Share this:
ಕಾಲಿವುಡ್​ ಚಿತ್ರರಂಗದಲ್ಲಿ ಮಿಮಿಕ್ರಿ ಹಾಗೂ ಹಾಸ್ಯನಟನೆಯೊಂದಿಗೆ ಗಮನ ಸೆಳೆದಿದ್ದ ಯುವನಟ ಮನೋ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಈ ದುರ್ಘಟನೆಯು ಸಂಭವಿಸಿದೆ.

ಕಾರಿನಲ್ಲಿ ಮನೊ ಹಾಗೂ ಪತ್ನಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಾಸ್ಯ ಕಲಾವಿದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಮನೋ ಅವರ ಪತ್ನಿ ಚೈನೈ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಬಿಗ್ ಬಾಸ್ ಪಟ್ಟ ಗೆಲ್ಲಬಲ್ಲ ಸ್ಪರ್ಧಿ ಇವರಂತೆ: ಚೈತ್ರಾ ಬಿಚ್ಚಿಟ್ರು ಗುಟ್ಟು..!

ಉದಯೋನ್ಮುಖ ನಟನಾಗಿ ಗುರುತಿಸಿಕೊಳ್ಳುತ್ತಿದ್ದ ಮನೊ, ಕಿರುತೆರೆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಹಾಸ್ಯಭರಿತ ನಿರೂಪಣೆಯೊಂದಿಗೆ ಮನೆಮಾತಾಗಿದ್ದ ನಟನ ಸಾವಿನ ಸುದ್ದಿ ಇದೀಗ ಅಭಿಮಾನಿಗಳನ್ನು ಹಾಗೂ ಆಪ್ತರನ್ನು ದುಃಖಕ್ಕೆ ದೂಡಿದೆ.

2010ರಲ್ಲಿ ತೆರೆಕಂಡಿದ್ದ ಹಾಸ್ಯಭರಿತ ಪುಜಲ್ ಚಿತ್ರದಲ್ಲಿನ ಮೂವರು ನಾಯಕರಲ್ಲಿ ಮನೊ ಕೂಡ ಒಬ್ಬರಾಗಿದ್ದರು. ಅಲ್ಲದೆ ಕಿರುತೆರೆಯಲ್ಲೂ ಒಂದಷ್ಟು ಕಾರ್ಯಕ್ರಮಗಳಲ್ಲೂ ಯುವನಟ ಕಾಣಿಸಿಕೊಂಡಿದ್ದರು.

ಸ್ಯಾಂಡಲ್​ವುಡ್ ನಟನಿಗೆ ಕೂಡಿಬಂತು ಕಂಕಣ ಭಾಗ್ಯ: ರಿಷಿಯ ಖುಷಿ ಹೆಚ್ಚಿಸಿದ ಚೆಲುವೆ ಇವರೇ..!

First published: October 29, 2019, 8:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading