#Karthi19: ಕಾಲಿವುಡ್​ಗೆ ಕಾಲಿಟ್ಟ ಕಿರಿಕ್​ ಹುಡುಗಿ: ಸೆಟ್ಟೇರಿತು ಕಾರ್ತಿ-ರಶ್ಮಿಕಾರ ತಮಿಳು ಸಿನಿಮಾ

ಸ್ಯಾಂಡಲ್​ವುಡ್​ನ ಸಾನ್ವಿ ಟಾಲಿವುಡ್​ನಲ್ಲಿ ಗೀತಾ ಮೇಡಮ್​ ಆಗಿದ್ದರು. ಆದರೆ ಈಗ ಅವರ ನಗುವಿನ ಪ್ರಭಾವ ಕಾಲಿವುಡ್​ಗೂ ಪಸರಿಸಲಿದೆ. ಹೌದು, ರಶ್ಮಿಕಾ ತಮಿಳಿನಲ್ಲಿ ನಟ ಕಾರ್ತಿ ಜತೆ ಸಿನಿಮಾ ಮಾಡುತ್ತಿದ್ದು, ಅದರ ಚಿತ್ರೀಕರಣಕ್ಕೆ ಕಿಕ್​ ಸ್ಟಾರ್ಟ್​ ಸಿಕ್ಕಿದೆ.

Anitha E | news18
Updated:March 14, 2019, 4:23 PM IST
#Karthi19: ಕಾಲಿವುಡ್​ಗೆ ಕಾಲಿಟ್ಟ ಕಿರಿಕ್​ ಹುಡುಗಿ: ಸೆಟ್ಟೇರಿತು ಕಾರ್ತಿ-ರಶ್ಮಿಕಾರ ತಮಿಳು ಸಿನಿಮಾ
ತಮಿಳು ಸಿನಿಮಾದಲ್ಲಿ ಕಾರ್ತಿ ಜತೆ ರಶ್ಮಿಕಾ ಮಂದಣ್ಣ
Anitha E | news18
Updated: March 14, 2019, 4:23 PM IST
- ಅನಿತಾ ಈ, 

ಕನ್ನಡದ 'ಕಿರಿಕ್​ ಪಾರ್ಟಿ' ಸಿನಿಮಾದ ಮೂಲಕ ರಂಗೀನ್​ ದುನಿಯಾಗೆ ಎಂಟ್ರಿ ಕೊಟ್ಟ ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ ಅವರಿಗೆ ಈಗ ಎಲ್ಲಿಲ್ಲದ ಬೇಡಿಕೆ. ಕನ್ನಡದಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ ಪರ ಭಾಷೆಯಲ್ಲೂ ಕೈ ತುಂಬಾ ಕೆಲಸ ಇದೆ ಇವರಿಗೆ.

ಇದನ್ನೂ ಓದಿ: ಕ್ರಿಕೆಟ್​ ಬಿಟ್ಟು ಬೇರೆ ವಿಷಯಕ್ಕೆ ಧೋನಿಯನ್ನು ಮೆಚ್ಚಿದ ನೀಲಿ ಚಿತ್ರಗಳ ಮಾಜಿ ತಾರೆ..!

ತೆಲುಗಿನಲ್ಲಿ 'ಚಲೋ' ಸಿನಿಮಾದ ಮೂಲಕ ಟಾಲಿವುಡ್​ನಲ್ಲಿ ಖಾತೆ ತೆರೆದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ವಿಜಯ್​ ದೇವಕೊಂಡ ಜತೆ ತೆರೆ ಹಂಚಿಕೊಂಡ 'ಗೀತ ಗೋವಿಂದಂ' ಸಿನಿಮಾ ತೆಲುಗಿನಲ್ಲಿ ದೊಡ್ಡ ಹಿಟ್​ ಆಗಿತ್ತು. ಹೀಗಿರುವಾಗಲೇ ಮೂರಕ್ಕೂ ಹೆಚ್ಚು ತೆಲುಗು ಸಿನಿಮಾಗಳಿಗೆ ರಶ್ಮಿಕಾ ಸಹಿ ಮಾಡಿದ್ದರು.

ಆಗಲೇ ರಶ್ಮಿಕಾ ತಮಿಳು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಅದು ಸಹ ನಟ ವಿಜಯ್​ ಜತೆ ಅನ್ನೋ ಸುದ್ದಿ ಕಾಲಿವುಡ್​ ಗಲ್ಲಿಗಳಲ್ಲಿ ಹರಿದಾಡುತ್ತಿತ್ತು. ಆದರೆ ಅದು ಕೇವಲ ಗಾಳಿ ಮಾತು ಎಂದು ರಶ್ಮಿಕಾ ತಮ್ಮ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡುವ ಮೂಲಕ ಸ್ಪಷ್ಟಪಡಿಸಿದ್ದರು.

ಆದರೆ ಅವರು ತಮಿಳಿನಲ್ಲಿ ಈಗ ನಿಜಕ್ಕೂ ಖಾತೆ ತೆರೆದಿದ್ದಾರೆ. ಅದು ಸಹ ನಟ ಕಾರ್ತಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಬಕ್ಕಿಯಾ ರಾಜ್​ ಕಣ್ಣನ್​ ನಿರ್ದೇಶಕ ಹೊಸ ಸಿನಿಮಾದಲ್ಲಿ ರಶ್ಮಿಕಾ ಕಾರ್ತಿಗೆ ನಾಯಕಿಯಾಗಿ ನಟಿಸಲಿದ್ದು, ನಿನ್ನೆಯಷ್ಟೆ ಸಿನಿಮಾದ ಮುಹೂರ್ತ ನೆರವೇರಿದೆ. ಅದರ ಚಿತ್ರಗಳನ್ನು ರಶ್ಮಿಕಾ ಟ್ವಿಟರ್​ ಮೂಲಕ ಹಂಚಿಕೊಂಡಿದ್ದಾರೆ.I’ve always had such great support from my Kannada and Telugu people..✨💕And you Have also been asking me to come to tamil and in 2019..I finally am!!😎 I am so happy to be doing a film with this team.இதுவொரு புதிய துவக்கம்✨ with loads of love from me to you!😘♥ pic.twitter.com/LaVZJLdVllನಿರ್ದೇಶಕ ಕಣ್ಣನ್​ 2016ರಲ್ಲಿ 'ರೆಮೊ' ಸಿನಿಮಾ ನಿರ್ದೇಶನ ಮಾಡಿದ್ದರು. ಅದೇ ಅವರ ಮೊದಲ ಸಿನಿಮಾವಾಗಿದ್ದು, ಎರಡು ವರ್ಷಗಳ ನಂತರ ಈಗ ಅವರು ಮತ್ತೊಂದು ಸಿನಿಮಾಗೆ ಸಿದ್ದರಾಗಿದ್ದಾರೆ. ವಿವೇಕ್​ ಹಾಗೂ ಮರ್ವಿನ್​ ಈ ಹೊಸ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ನಿರ್ಮಾಪಕ ಎಸ್​.ಆರ್. ಪ್ರಭು ನಿರ್ಮಾಣ ಈ ಸಿನಿಮಾಗೆ ಸದ್ಯಕ್ಕೆ '#Kathi19' ಎಂದು ಕರೆಯಲಾಗುತ್ತಿದೆ. ಇದು ನಟ ಕಾರ್ತಿ ಅಭಿನಯದ 19ನೇ ಚಿತ್ರವಾಗಿದ್ದು, ಇನ್ನೂ ಟೈಟಲ್​ ಇಡದ ಕಾರಣಕ್ಕೆ ಈ ಪ್ರಾಜೆಕ್ಟ್​ ಅನ್ನು '#Karthi19' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಚಿತ್ರೀಕರಣ ಆರಂಭವಾದ ಕೆಲ ಚಿತ್ರಗಳನ್ನು ನಿರ್ಮಾಪಕ ಪ್ರಭು ಸಹ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

 ಕಳದೆ ವರ್ಷ ತೆರೆಕಂಡ ಕಾರ್ತಿ ಅಭಿನಯದ 'ದೇವ್'​ ಸಿನಿಮಾ ಬಾಕ್ಸಾಫಿಸ್​ನಲ್ಲಿ ನೆಲಕಚ್ಚಿತ್ತು. ಈಗ ಕಾರ್ತಿ ಮತ್ತೆ ಈ ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

PHOTOS: ತಮಿಳು ನಟ ಕಾರ್ತಿಗೆ #Karthi19 ಸಿನಿಮಾ ಸೆಟ್​ನಲ್ಲಿ ಜೊತೆಯಾದ ರಶ್ಮಿಕಾ ಮಂದಣ್ಣ..!

First published:March 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ