ದಕ್ಷಿಣ ಭಾರತದ ಖ್ಯಾತ ನಟ ಧನುಷ್ (South Indian Famous Actor Dhanush) ತಮ್ಮ ಅಭಿನಯದ ಮೂಲಕವೇ ಹೆಸರು ಮಾಡಿದವರು. ಯಾವುದೇ ಪಾತ್ರ ಕೊಟ್ಟರು ಆಳವಾಗಿ ಇಳಿದು ಅಭಿನಯಿಸುವ ಇವರು ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದರು. ತಮಿಳು ನಿರ್ದೇಶಕಿ, ರಜನಿಕಾಂತ್ (Rajinikanth) ಅವರ ಪುತ್ರಿ ಐಶ್ವರ್ಯಾ (Aishwarya) ಹಾಗೂ ಧನುಷ್ ಡಿವೋರ್ಸ್ (Divorce) ಪಡೆದು ದೂರಾಗಿದ್ದಾರೆ. ಇದೀಗ ಮತ್ತೊಂದು ವಿಚಾರಕ್ಕೆ ನಟ ಧನುಷ್ ಸುದ್ದಿ ಆಗುತ್ತಿದ್ದಾರೆ. ಹೌದು, ಪಿತೃತ್ವ ಪ್ರಕರಣವೊಂದರಲ್ಲಿ (paternity case) ಕಾಲಿವುಡ್ ನಟ (Kollywood hero) ಧನುಷ್ ಗೆ (Dhanush) ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ಜಾರಿ ಮಾಡಿತ್ತು. ಇದರ ಮುಂದುವರೆದ ಭಾಗವಾಗಿ ಇದೀಗ ಮಧುರೈ ಮೂಲದ ದಂಪತಿಗೆ ನಟ ಧನುಷ್ ನೋಟಿಸ್ ಕಳುಹಿಸಿದ್ದಾರೆ.
ನೋಟಿಸ್ ಕಳುಹಿಸಿದ ನಟ ಧನುಷ್:
ಕೆಲದಿನಗಳ ಹಿಂದೆ ನಟ ಧನುಷ್ ತಮ್ಮ ಜೈವಿಕ ಮಗ ಎಂದು ಕೋರ್ಟ್ ಮೆಟ್ಟಿಲೇರಿದ್ದ ಮಧುರೈನ ವರದ್ಧ ದಂಪತಿಗಳು ತಮಗೆ ಪ್ರತಿ ತಿಂಗಳೂ ಧನುಷ್ 65 ಸಾವರಿ ನೀಡಬೇಕು ಎಂದು ನೋಟಿಸ್ ಕಳುಹಿಸಿದ್ದರು. ಆದರೆ ಇದೀಗ ಇದಕ್ಕೆ ಪ್ರತಿಯಾಗಿ ನಟ ಧನುಷ್ ಮತ್ತು ತಂದೆ ಕಸ್ತೂರಿ ರಾಜ ವರದ್ಧ ದಂಪತಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಧನುಷ್ ಪರ ವಕೀಲರು ಕಳುಹಿಸಿದ ನೋಟಿನಲ್ಲಿ ಈ ರೀತಿ ತಿಳಿಸಲಾಗಿದ್ದು, ‘ನನ್ನ ಕಕ್ಷಿದಾರರು ಇನ್ನು ಮುಂದೆ ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡದಂತೆ ನಿಮ್ಮಿಬ್ಬರಿಗೂ ತಿಳಿಸುತ್ತಿದ್ದಾರೆ. ಇದನ್ನು ಪಾಲಿಸದಿದ್ದಲ್ಲಿ ನನ್ನ ಕಕ್ಷಿದಾರರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಮರ್ಥ ನ್ಯಾಯಾಲಯಗಳನ್ನು ಸಂಪರ್ಕಿಸುವ ಇಚ್ಛೆಯನ್ನು ಹೊಂದಿದ್ದಾರೆ. ನೀವು ಅವರ ವಿರುದ್ಧ ಮಾಡುತ್ತಿರುವ ಸುಳ್ಳು ಮತ್ತು ಮಾನಹಾನಿಕರ ಆರೋಪಗಳಿಂದ ಅವರ ಖ್ಯಾತಿಗೆ ಕಳಂಕ ಬಂದಿರುವುದು. ಹೀಗಾಗಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು‘ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಗಟ್ಟಿಮೇಳದ ಮಹತಿಗೆ SSLCಯಲ್ಲಿ 99.04%, ಇದು ಸೀರಿಯಲ್ ಅಲ್ಲ ನಿಜವಾದ ರಿಸಲ್ಟ್!
ಇದಲ್ಲದೇ ಈಗಾಗಲೇ ದಂಪತಿಗಳು ಮಾಡಿರುವ ಆರೋಪ ಸುಳ್ಳು ಎಂದು ಪತ್ರಿಕಾ ಪ್ರಕಟಣೆ ನೀಡುವಂತೆ ಹೇಳಲಾಗಿದ್ದು, ಇದನ್ನು ಮಾಡದಿದ್ದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಎದುರಸಿಬೇಕಾಗುತ್ತದೆ ಮತ್ತು ಮ್ಮ ವಿರುದ್ಧದ ಪ್ರತಿಷ್ಠೆಯ ನಷ್ಟಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹಾಕಲಾಗುತ್ತದೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ?:
ಮಧುರೈನ ವೃದ್ಧ ದಂಪತಿಗಳು ಚಿತ್ರನಟ ಧನುಷ್ ತಮ್ಮ ಜೈವಿಕ ಪುತ್ರ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಅವರು ನಟ ಧನುಷ್ಗೆ ಸಮನ್ಸ್ ನೀಡಿದ್ದರು. ಕದಿರೇಸನ್ (Kathiresan ) ಹಾಗೂ ಅವರ ಪತ್ನಿ ಮೀನಾಕ್ಷಿ (Meenakshi ) ಚಿತ್ರ ನಟ ಧನುಷ್ ತಮ್ಮ ಮೂರನೇ ಪುತ್ರ ಎಂದು ಹೇಳಿಕೊಂಡಿದ್ದು, ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆಯ ಕಾರಣದಿಂದಾಗಿ ಮನೆಯಿಂದ ಓಡಿ ಬಂದಿದ್ದ ಎಂದು ಹೇಳಿದ್ದಾರೆ ಈ ಹಿಂದೆಯೂ ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: Love marriage: ಸಿನಿಮಾ ಸೆಟ್ನಲ್ಲೇ ಲವ್ ಮಾಡಿ ಮದುವೆಯಾದ ತಾರೆಯರಿವರು, ನಿಮ್ಮ ಫೇವರೆಟ್ ಯಾರು?
65 ಸಾವಿರ ಬೇಡಿಕೆ ಇಟ್ಟ ದಂಪತಿಗಳು:
ಧನುಷ್ ತಮ್ಮ ಮಗ ಎಂದು ಕದಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಆರೋಪಿಸಿದ್ದಾರೆ. ಧನುಷ್ ಪಿತೃತ್ವ ಪರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಕದಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮನೆಯ ನಿರ್ವಹಣೆಗಾಗಿ ಅವರಿಂದ ಪ್ರತಿ ತಿಂಗಳು 65 ಸಾವಿರ ರೂಪಾಯಿ ಬೇಡಿಕೆಯನ್ನೂ ಇಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ವಿಚಾರದಲ್ಲಿ ಪೊಲೀಸ್ ತನಿಖೆಯನ್ನೂ ನಡೆಸುವಂತೆ ಕೋರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ