Dhanush: ನಾನು ದಕ್ಷಿಣದ ನಟ ಎಂದು ಗುರುತಿಸಿಕೊಳ್ಳಲು ಬಯಸುವುದಿಲ್ಲ, ಧನುಷ್ ಹೇಳಿಕೆಗೆ ಭೇಷ್​ ಅಂದ ಫ್ಯಾನ್ಸ್

ಸಿನಿಮಾದ ಹೊರತಾಗಿ ಇದೀಗ ಮತ್ತೊಮ್ಮೆ ಧನುಷ್ ಭಾರತೀಯ ಸಿನಿರಸಿಕರ ಮನಸ್ಸನ್ನು ಗೆದ್ದಿದ್ದಾರೆ. ಅದಕ್ಕೆ ಕಾರಣ ಕೂಡ ವಿಶೇಷವಾಗಿದೆ. ಈ ವಿಶೇಷ ಕಾರಣ ತಿಳಿದ ಧನುಷ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ತಮ್ಮ ಮೆಚ್ಚಿನ ನಟನಿಗೆ ಭೇಷ್​ ಎನ್ನುತ್ತಿದ್ದಾರೆ.

ನಟ ಧನುಷ್

ನಟ ಧನುಷ್

  • Share this:
ತಮ್ಮ ನಟನೆಯಿಂದ ಕೋಟ್ಯಂತರ ವೀಕ್ಷಕರ ಮನ ಗೆದ್ದಿರುವ ದಕ್ಷಿಣ ಭಾರತದ (South India) ಸೂಪರ್ ಸ್ಟಾರ್ ಧನುಷ್ (Dhanush), ಕೇವಲ ತಮಿಳು ಸಿನಿಮಾ ಮಾಥ್ರವಲ್ಲದೇ ಬಾಲಿವುಡ್ ಹಾಗೂ ಹಾಲಿವುಡ್ (Hollywood)​ ಸಿನಿಮಾಗಳಲ್ಲಿಯೂ ನಟಿಸಿ ಭೇಷ್​ ಎನಿಸಿಕೊಂಡಿದ್ದಾರೆ. ಇವರ ನಟನೆಯ ಅಸುರನ್ (Asuran) ಸಿನಿಮಾಗೆ ಈಗಾಗಲೇ ನ್ಯಾಷನಲ್ ಅವರ್ಡ್​ ಸಹ ಬಂದಿದೆ ಅಂದರೆ ಎಂತವರಿಗೂ ಇವರ ನಟನೆಯ ಬಗ್ಗೆ ಅರಿವಾಗುತ್ತದೆ. ಆದ್ದರಿಂದ, ಧನುಷ್ ಅವರ ವೈವಿಧ್ಯಮಯ ಪಾತ್ರಗಳು ಯಾವಾಗಲೂ ಮೆಚ್ಚುಗೆ ಪಡೆಯುವುದನ್ನು ಕಾಣಬಹುದು. ಸಿನಿಮಾದ ಹೊರತಾಗಿ ಇದೀಗ ಮತ್ತೊಮ್ಮೆ ಧನುಷ್ ಭಾರತೀಯ ಸಿನಿರಸಿಕರ ಮನಸ್ಸನ್ನು ಗೆದ್ದಿದ್ದಾರೆ. ಅದಕ್ಕೆ ಕಾರಣ ಕೂಡ ವಿಶೇಷವಾಗಿದೆ. ಈ ವಿಶೇಷ ಕಾರಣ ತಿಳಿದ ಧನುಷ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ತಮ್ಮ ಮೆಚ್ಚಿನ ನಟನಿಗೆ ಭೇಷ್​ ಎನ್ನುತ್ತಿದ್ದಾರೆ.

ನಾನು ದಕ್ಷಿಣ ನಟ ಎಂದು ಗುರುತಿಸಿಕೊಳ್ಳಲು ಬಯಸುವುದಿಲ್ಲ:

ಹೌದು, ಸೌತ್ ಸೂಪರ್ ಸ್ಟಾರ್ ಧನುಷ್ ಈಗಾಗಲೇ ಹಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ ಅವರ ನಟನೆಯ ಮೊದಲ ಹಾಲಿವುಡ್ ಸಿನಿಮಾ ‘ದಿ ಗ್ರೇ ಮ್ಯಾನ್‘ ನೆಟ್​ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ. ಅಲ್ಲದೇ ಧನುಷ್ ನಟನೆಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಚಿತ್ರದ ಪ್ರಚಾರ ಮತ್ತು ಪ್ರೀಮಿಯರ್‌ನಲ್ಲಿ ನಿರ್ದೇಶಕರಾದ ಆಂಥೋನಿ ರುಸ್ಸೋ ಮತ್ತು ಜೋ ರುಸ್ಸೋ ಅವರೊಂದಿಗೆ ಧನುಷ್ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧನುಷ್ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಬಾರಿ ನಾನು ‘ದಕ್ಷಿಣ ನಟ’ ಎಂದು ಗುರುತಿಸಿಕೊಳ್ಳಲು ಬಯಸುವುದಿಲ್ಲ.

ನಮ್ಮೆಲ್ಲರನ್ನೂ ದಕ್ಷಿಣ ಅಥವಾ ಉತ್ತರ ನಟರ ಬದಲಿಗೆ ಭಾರತೀಯ ನಟರು ಎಂದು ಕರೆದರೆ ನಾನು ಅದನ್ನು ಪ್ರಶಂಸಿಸುತ್ತೇನೆ. ದಕ್ಷಿಣ, ಉತ್ತರ ಅಥವಾ ಪ್ರಾದೇಶಿಕ ಉದ್ಯಮಗಳಿಗೆ ಸೀಮಿತವಾಗದೆ ನಾವು ರಾಷ್ಟ್ರೀಯ ಚಲನಚಿತ್ರಗಳಿಗಾಗಿ ಒಟ್ಟಾಗಿ ಕೆಲಸ ಮಾಡಿದರೆ ಮತ್ತು ಎಲ್ಲರಿಗೂ ಚಲನಚಿತ್ರಗಳನ್ನು ಮಾಡಿದರೆ ಅದು ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ಇದು ಒಳ್ಳೆಯ ಸಮಯ‘ ಎಂದು ಧನುಷ್ ಹೇಳಿದ್ದಾರೆ.

ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಗುಡ್​ ನ್ಯೂಸ್, ‘ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಇಂದಿನಿಂದಲೇ ಪ್ರಾರಂಭ

ಒಳ್ಳೆಯ ಕೆಲಸ ಮಾಡಿದರೆ ನಿಮ್ಮ ಕೆಲಸ ಗಮನಕ್ಕೆ ಬರುತ್ತದೆ. ಹಾಗಾಗಿ ಈಗ ನನ್ನನ್ನು ಅಥವಾ ಬೇರೆಯವರನ್ನು ದಕ್ಷಿಣದ ನಟ ಎಂದು ಕರೆಯುವುದರಲ್ಲಿ ಅರ್ಥವಿಲ್ಲ. ನಾವು ಭಾರತದ ಕಲಾವಿದರು ಮಾತ್ರ ಎಂದು ಧನುಷ್ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೇಳಿದ್ದಾರೆ. 'ದಿ ಗ್ರೇ ಮ್ಯಾನ್' ಧನುಷ್ ಅವರ ಮೊದಲ ಹಾಲಿವುಡ್ ಚಿತ್ರ. ಈ ಹಿಂದೆ ತೆಲುಗಿನಲ್ಲಿ 'ಸರ್', ಹಿಂದಿಯಲ್ಲಿ 'ರಾಂಜನಾ', 'ಶಮಿತಾಭ್' ಮತ್ತು 'ಅತರಂಗಿ ರೇ' ಚಿತ್ರಗಳಲ್ಲಿ ಧನುಷ್ ನಟಿಸಿದ್ದಾರೆ.

ಧನುಷ್​-ಐಶ್ವರ್ಯಾ ಡಿವೋರ್ಸ್ ಗೆ ಬಾಲಿವುಡ್​ ನಟಿ ಕಾರಣವಂತೆ:

ಇನ್ನು, ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಕೂಡ 19 ವರ್ಷಗಳ ತಮ್ಮ ದಾಂಪತ್ಯ ಜೀವನದಿಂದ ದೂರಾದರು. ಈ ಜೋಡಿಯ ವಿಚ್ಛೇದನವು ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಐಶ್ವರ್ಯಾ ಮತ್ತು ಧನುಷ್ ವಿಚ್ಛೇದನದ ಸುದ್ದಿಯು ರಜನಿಕಾಂತ್ ಅಭಿಮಾನಿಗಳನ್ನು ತೀವ್ರವಾಗಿ ದುಃಖಿಸಿತ್ತು. ಇದರ ನಡುವೆ ಧನುಷ್ ಡಿವೋರ್ಸ್​ ಗೆ ಈ ಬಾಲಿವುಡ್​ನಟಿಯೇ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Dhanush: ಕೊನೆಗೂ ಧನುಷ್​-ಐಶ್ವರ್ಯಾ ಡಿವೋರ್ಸ್ ಕಾರಣ ಬಯಲು! ಸುಖಸಂಸಾರದಲ್ಲಿ ಹುಳಿ ಹಿಂಡಿದ್ದು ಆ ಬಾಲಿವುಡ್​ ನಟಿಯಂತೆ

ಹೌದು, ಸಾರಾ ಅಲಿ ಖಾನ್ ತನ್ನ ಅತ್ರಾಂಗಿ ರೆ ಸಹನಟ ಧನುಷ್ ಜೊತೆ ಪಾರ್ಟಿಗೆ ಆಗಮಿಸಿದ್ದು ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರೂ ಒಟ್ಟಿಗೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಧನುಷ್ ಜೊತೆಗಿನ ಸಾರಾ ಅಲಿ ಖಾನ್ ಅವರ 'ಅತಿಯಾದ' ನಿಕಟತೆಯನ್ನು ಕೆಲವು ನೆಟಿಜನ್‌ಗಳು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಧನುಷ್ ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರ ವಿಚ್ಛೇದನಕ್ಕೆ ಕಾರಣ ಎಂದು ಟೀಕಿಸುತ್ತಿದ್ದಾರೆ.
Published by:shrikrishna bhat
First published: