ತಮಿಳು ನಟ ಅಜಿತ್ ಕುಮಾರ್ (Tamil Actor Ajith Kumar) ಅವರ 'ವಲಿಮೈ' (Valimai) ಚಿತ್ರ ಬಿಡುಗಡೆಗೂ ಮುನ್ನವೇ 300 ಕೋಟಿ ರೂ. ಬಿಸಿನೆಸ್ ಮಾಡುವ ಮೂಲಕ ಸಿನಿಮಾದ (Film) ಕ್ರೇಜನ್ನು ಹೆಚ್ಚು ಮಾಡಿದೆ. ರಿಲೀಸ್ಗೂ ಮುನ್ನವೇ ಅಪಾರ ನಿರೀಕ್ಷೆ ಹುಟ್ಟುಹಾಕಿರುವ 'ವಲಿಮೈ' ಚಿತ್ರ ಇದೇ ಫೆಬ್ರವರಿ 24ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. 'ವಿಶ್ವಾಸಂ' ಮತ್ತು 'ನೇರ್ಕೊಂಡ ಪಾರ್ವೈ' ಸಿನಿಮಾಗಳ ಯಶಸ್ಸಿನ ನಂತರ ತಲಾ ಅಭಿನಯಿಸಿರುವ 'ವಲಿಮೈ' ಸಿನಿಮಾದ ರಿಲೀಸ್ಗಾಗಿ ಅಭಿಮಾನಿಗಳು (Fans) ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ತಮಿಳು (Tamil) , ತೆಲುಗು (Telugu), ಕನ್ನಡ (Kannada) ಮತ್ತು ಹಿಂದಿ (Hindi) ನಾಲ್ಕು ಭಾಷೆಗಳಲ್ಲಿ ಮೂಡಿ ಬಂದಿದ್ದು, ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಇದೀಗ ಇತ್ತೀಚಿನ ವರದಿಯ ಪ್ರಕಾರ ಅಜಿತ್ ಅಭಿನಯದ, ಎಚ್. ವಿನೋದ್ ಆ್ಯಕ್ಷನ್ ಕಟ್ ಹೇಳಿರುವ ವಲಿಮೈ ಚಿತ್ರವು ಪ್ರೀ-ರಿಲೀಸ್ ವ್ಯವಹಾರದಲ್ಲಿ 300 ಕೋಟಿ ರೂ.ಗೂ ಹೆಚ್ಚು ಗಳಿಸಿದೆ ಎಂದು ಸುದ್ದಿಯಾಗಿದೆ. 150 ಕೋಟಿ ಬಜೆಟ್ನಲ್ಲಿ ರೆಡಿಯಾದ ವಲಿಮೈ ಚಿತ್ರವು ರಿಲೀಸ್ಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದು ಸಿನಿಮಾದ ಮೇಲಿನ ನೀರಿಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಬಹು ನಿರೀಕ್ಷಿತ ವಲಿಮೈ ಥಿಯೇಟ್ರಿಕಲ್ ರೈಟ್ಸ್ ಅಜಿತ್ ಕುಮಾರ್ ಅವರ ತಮಿಳುನಾಡಿನಾದ್ಯಂತ ದಾಖಲೆಯ ಬೆಲೆಯನ್ನು ಪಡೆದುಕೊಂಡಿದೆ. ಈ ಹಿಂದೆ ವಿಶ್ವಾಸಂ ಸೂಪರ್ಸ್ಟಾರ್ಗೆ ಅತ್ಯಧಿಕ ಬೆಲೆಯ ದಾಖಲೆಯನ್ನು ಪಡೆದಿತ್ತು. ತಮಿಳುನಾಡು ಥಿಯೇಟರ್ನಲ್ಲಿ 64 ಕೋಟಿ ರೂ.ಗಳಿಗೆ ಚಿತ್ರದ ಹಕ್ಕು ಮಾರಾಟವಾಗಿದೆ.
ಅಜಿತ್ ಕುಮಾರ್ಗೆ ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳಿದ್ದಾರೆ. 2019ರ ಆಗಸ್ಟ್ನಲ್ಲಿ ಬಿಡುಗಡೆಯಾದ ‘ನೇರ್ಕೊಂಡ ಪಾರ್ವೈ’ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಾಗಿ ಅಜಿತ್ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ವಿಶೇಷ ಪ್ರದರ್ಶನದಿಂದ ಚಿತ್ರವು ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ಇದು ಮತ್ತೆ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: Gangubai Kathiawadi ಚಿತ್ರತಂಡದ ಮೇಲೆ ಗುಡುಗಿದ ಗಂಗೂಬಾಯಿ ಪುತ್ರ
'ವಲಿಮೈ' ಚಿತ್ರವು ದಾಖಲೆ ಸಂಖ್ಯೆಯ ಪರದೆಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ತಮಿಳುನಾಡಿನಲ್ಲಿ ಚಿತ್ರವು 90%ಕ್ಕಿಂತ ಹೆಚ್ಚು ಥಿಯೇಟರ್ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
ಇನ್ನು, 'ವಲಿಮೈ' ಚಿತ್ರದಲ್ಲಿ ಅಜಿತ್, 'ಐಪಿಎಸ್ ಆಫೀಸರ್ ಈಶ್ವರಮೂರ್ತಿ' ಅನ್ನೋ ಪಾತ್ರವನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿಂದೆ ತೆರೆಕಂಡ 'ಮಂಕಾಥ', 'ಆರಂಭಂ', 'ಯೆನ್ನೈ ಅರಿಂದಾಳ್' ಮುಂತಾದ ಸಿನಿಮಾಗಳಲ್ಲಿ ಅಜಿತ್ ಖಾಕಿ ತೊಟ್ಟು ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ 'ವಲಿಮೈ'ನಲ್ಲಿ ಮತ್ತೊಮ್ಮೆ ಖಡಕ್ ರೋಲ್ನಲ್ಲಿ ಅವರು ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. 'ವಲಿಮೈ’ ಚಿತ್ರದಲ್ಲಿ ಅಜಿತ್ ಸಿಕ್ಕಾಪಟ್ಟೆ ಆ್ಯಕ್ಷನ್ ಮಾಡಿದ್ದಾರೆ. ಸಾಹಸ ದೃಶ್ಯಗಳೇ ಸಿನಿಮಾದ ಹೈಲೈಟ್ ಆಗಿಲಿವೆ ಮತ್ತು ಅಜಿತ್ ವಿಶೇಷವಾಗಿ ಚಿತ್ರದಲ್ಲಿ ಬೈಕ್ ಸ್ಟಂಟ್ ಮಾಡಿದ್ದಾರೆ.
‘ನೇರ್ಕೊಂಡ ಪಾರ್ವೈ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಎಚ್. ವಿನೋದ್ ಅವರೇ ‘ವಲಿಮೈ’ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಹಾಗಾಗಿ ಈ ಕಾಂಬಿನೇಷನ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಾಯಕಿಯಾಗಿ ಕಾರ್ತಿಕೇಯ, ಹುಮಾ ಖುರೇಶಿ ನಟಿಸಿದ್ದಾರೆ. ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ನೀರವ್ ಶಾ ಮತ್ತು ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪೊಲೀಸ್ ಕಥೆಗಳನ್ನು ತೆರೆಗೆ ತರುವುದರಲ್ಲಿ ಫೇಮಸ್ ಆಗಿರುವ ವಿನೋದ್, 'ವಲಿಮೈ' ಸಿನಿಮಾವನ್ನು ಹೇಗೆ ಮಾಡಿಬರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು.
ಇದನ್ನೂ ಓದಿ: Megastar Chiranjeevi ಜೊತೆ ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಶಬರಿಮಲೆಗೆ ಹೋಗಿದ್ರಾ? ಘಟನೆಯ ಸತ್ಯಾಸತ್ಯತೆ ಇಲ್ಲಿದೆ
ತಮಿಳುನಾಡು ಸರ್ಕಾರವು ಫೆಬ್ರವರಿ 16 ರಿಂದ ಅಂದರೆ ಇಂದಿನಿಂದ TN ಥಿಯೇಟರ್ಗಳಲ್ಲಿ 100% ಜನರಿಗೆ ಅನುಮತಿ ನೀಡಿದೆ ಮತ್ತು ಇದು ಚಿತ್ರದ ಯಶಸ್ಸಿಗೆ ಕಾರಣವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ